ಪೇರಳೆ ಹಣ್ಣು ಮತ್ತು ಅದರ ಎಲೆಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ. ಪೇರಳೆಯನ್ನು ‘ಸೂಪರ್ ಹಣ್ಣು’ ಎಂದೂ ಕರೆಯಲಾಗುತ್ತದೆ, ಏಕೆಂದರೆ ಅದರಲ್ಲಿ ಶೇ. 80ರಷ್ಟು ನೀರು, ವಿಟಮಿನ್ ಸಿ, ಎ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ.
ಪೇರಳೆ ತಿನ್ನಲು ಎಷ್ಟು ರುಚಿಕರವಾಗಿದೆಯೋ ಅಷ್ಟೇ ಆರೋಗ್ಯಕರ ಕೂಡಾ,ಪೇರಳೆಯನ್ನು ಅದರ ಸಮೃದ್ಧ ಪೌಷ್ಠಿಕಾಂಶದ ಪ್ರೊಫೈಲ್‌ನಿಂದ ಸೂಪರ್ ಹಣ್ಣು ಎಂದು ಕರೆಯಲಾಗುತ್ತದೆ. ಪೇರಲವು 80% ನೀರನ್ನು ಹೊಂದಿರುತ್ತದೆ. ಇದು ವಿಟಮಿನ್ ಸಿ, ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಮತ್ತು ಹೃದಯ-ಆರೋಗ್ಯಕರ ಪೋಷಕಾಂಶಗಳನ್ನು ಒಳಗೊಂಡಂತೆ ಆರೋಗ್ಯ ಪ್ರಯೋಜನಗಳಿಂದ ತುಂಬಿರುತ್ತದೆ,ಪೇರಳೆ ಎಲೆಗಳಿಂದ ತಯಾರಿಸಿದ ಟೀ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

ಪ್ರತಿದಿನ ಈ ಟೀ ಕುಡಿಯುವುದರಿಂದ ದೃಷ್ಟಿ ಉತ್ತಮಗೊಳ್ಳಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ಪೇರಳೆ ಎಲೆಗಳು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದ್ದು, ಇದು ದೃಷ್ಟಿ ಸುಧಾರಿಸಲು ನೆರವಾಗಬಹುದು.ಇದು ಚರ್ಮವನ್ನು ಆರೋಗ್ಯಕವಾಗಿಸುವುದರಿಂದ ಹಿಡಿದು ಕಣ್ಣಿನ ಆರೋಗ್ಯವನ್ನು ಉತ್ತೇಜಿಸುವವರೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ
*ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ, ಪೇರಳೆ ಎಲೆಗಳ ಟೀ ನಿಮಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಇದರ ನಿಯಮಿತ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯ ಹೆಚ್ಚುತ್ತದೆ.
*ಪೇರಳೆ ಎಲೆಗಳಲ್ಲಿ ಇರುವ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ
*ದೇಹದ ಉರಿಯೂತ ಕಡಿಸಲು ಮತ್ತು ಸೋಂಕು ತಡೆಯಲು ಸಹಾಯ ಮಾಡುತ್ತದೆ.
*ಪೇರಳೆ ಎಲೆಗಳಿಂದ ತಯಾರಿಸಿದ ಚಹಾ ಕುಡಿಯುವುದರಿಂದ ತೂಕ ಇಳಿಕೆ ಸಾಧ್ಯ. ಇದು ಸಿಹಿ ತಿಂಡಿಗಳ ಹಂಬಲವನ್ನು ಕಡಿಮೆ ಮಾಡಿ, ಹಸಿವನ್ನು ನಿಯಂತ್ರಿಸುತ್ತದೆ. ಈ ಮೂಲಕ ದೇಹದ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.
*ಮಧುಮೇಹ ಇರುವವರು ಅಥವಾ ಅಧಿಕ ರಕ್ತದ ಸಕ್ಕರೆ ಹೊಂದಿರುವವರು ಈ ಚಹಾವನ್ನು ಸೇವಿಸುವುದು ಒಳಿತು. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ ಮತ್ತು ಊಟದ ನಂತರ ಸಕ್ಕರೆ ಮಟ್ಟವು ತಕ್ಷಣವೇ ಏರಿಕೆಯಾಗುವುದನ್ನು ತಡೆಯುತ್ತದೆ.
*ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಆರೋಗ್ಯಕರ ಜೀವನಶೈಲಿ ಅತಿ ಮುಖ್ಯ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಂತಹ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ.
*ಪೇರಳೆ ಎಲೆಗಳು ಇಂತಹ ಆಹಾರಗಳಲ್ಲಿ ಒಂದು. ಅವುಗಳಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರಾಡಿಕಲ್‌ಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಹಾಗಾಗಿ, ನಿಯಮಿತವಾಗಿ ಪೇರಳೆ ಎಲೆಗಳ ಟೀ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.
*ಪೇರಳೆ ಎಲೆಗಳನ್ನು ಸೇವಿಸುವುದರಿಂದ ಡೆಂಗ್ಯೂನಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಇದರ ಸೇವನೆ ರಕ್ತದಲ್ಲಿ ಪ್ಲೇಟ್ಲೆಟ್ಗಳ ಸಂಖ್ಯೆ ವೇಗವಾಗಿ ಹೆಚ್ಚಾಗುವಂತೆ ಮಾಡುತ್ತದೆ. ಜ್ವರದ ತೀವ್ರತೆಯೂ ಕಡಿಮೆಯಾಗುತ್ತದೆ.
ರೈಲ್ವೆ ಉದ್ಯೋಗ: 2024 ರಲ್ಲಿ 64,197 ಹುದ್ದೆಗಳಿಗೆ 1.87 ಕೋಟಿ ಅರ್ಜಿಗಳು ಸರ್ಕಾರಿ ಅಂಕಿಅಂಶಗಳ ವಿವರ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


