ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ಚಿತ್ರ ಕಾಂತಾರ ಬಿಡುಗಡೆಯಾದ ಬಳಿಕ ತಾನು ಹುಟ್ಟುಹಾಕಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ದೊಡ್ಡ ಮಟ್ಟದಲ್ಲಿ ಗೆದ್ದಿದೆ.
2022ರಲ್ಲಿ ತೆರೆಗೆ ಬಂದ ಕಾಂತಾರ ಚಿತ್ರದ ಪ್ರೀಕ್ವೆಲ್ ಎಂಬ ಕಾರಣದಿಂದಾಗಿ ಸಿಕ್ಕಾಪಟ್ಟೆ ಹೈಪ್ ಹುಟ್ಟುಹಾಕಿದ್ದ ಈ ಚಿತ್ರ ಅಂತಹದ್ದೇ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದೆ.
ಬಿಡುಗಡೆಯಾದಾಗಿನಿಂದ ಜನರಿಂದ ಭಾರೀ ಮನ್ನಣೆ ಪಡೆದುಕೊಂಡಿರುವ ಕಾಂತಾರ ಚಾಪ್ಟರ್ 1 ಬಾಕ್ಸ್ ಆಫೀಸ್‌ನಲ್ಲೂ ಸಹ ಭಾರೀ ಅಬ್ಬರ ನಡೆಸುತ್ತಿದೆ. 12 ದಿನಗಳಲ್ಲಿ ವಿಶ್ವ ಬಾಕ್ಸ್‌ಆಫೀಸ್‌ನಲ್ಲಿ 650 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಕಾಂತಾರ ಚಾಪ್ಟರ್ 1 ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನು ಬರೆಯುವ ಮೂಲಕ ಹೊಸ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ.
ಹೌದು, ಈ ಹಿಂದೆ 2022ರಲ್ಲಿ ತೆರೆಗೆ ಬಂದಿದ್ದ ಕಾಂತಾರ ಕರ್ನಾಟಕದಲ್ಲಿ 185 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಇದೀಗ ಕಾಂತಾರ ಚಾಪ್ಟರ್ 1 12 ದಿನಗಳಲ್ಲಿ ಕರ್ನಾಟಕದಲ್ಲಿ 190 ಕೋಟಿ ಗಳಿಕೆ ಮಾಡುವ ಮೂಲಕ ಹೊಸ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿದೆ.
ಕನ್ನಡ ಚಿತ್ರರಂಗದ ಕೊನೆಯ 5 ಇಂಡಸ್ಟ್ರಿ ಹಿಟ್‌ಗಳು
ಕಾಂತಾರ ಚಾಪ್ಟರ್ 1 ( 2025 ) – 190 ಕೋಟಿ
ಕಾಂತಾರ ( 2022 ) – 185 ಕೋಟಿ
ಕೆಜಿಎಫ್ ಚಾಪ್ಟರ್ 2 ( 2022 ) – 183 ಕೋಟಿ
ಕೆಜಿಎಫ್ ಚಾಪ್ಟರ್ 1 ( 2018 ) – 134 ಕೋಟಿ
ರಾಜಕುಮಾರ ( 2017 ) – 75 ಕೋಟಿ
ಇಂಡಸ್ಟ್ರಿ ಹಿಟ್ ಎಂದರೇನು?
ರಾಜ್ಯವೊಂದರಲ್ಲಿ ಯಾವ ಚಿತ್ರ ಅಧಿಕ ಗಳಿಕೆ ಮಾಡುತ್ತದೆಯೋ ಆ ಚಿತ್ರವನ್ನು ಆ ನಾಡಿನ ಇಂಡಸ್ಟ್ರಿ ಹಿಟ್ ಎನ್ನಲಾಗುತ್ತದೆ. ಉದಾಹರಣೆಗೆ 2017ರಲ್ಲಿ ರಾಜಕುಮಾರ 75 ಕೋಟಿ ಗಳಿಕೆ ಮಾಡಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಬಳಿಕ 2018ರಲ್ಲಿ ತೆರೆಗೆ ಬಂದ ಕೆಜಿಎಫ್ ಚಾಪ್ಟರ್ 1 ಚಿತ್ರ 134 ಕೋಟಿ ರೂಪಾಯಿ ಗಳಿಸಿ ರಾಜಕುಮಾರ ಹಿಂದಿಕ್ಕಿ ಕರ್ನಾಟಕದ ಇಂಡಸ್ಟ್ರಿ ಹಿಟ್ ಆಗಿತ್ತು. ಇದೀಗ ಎಲ್ಲ ಚಿತ್ರಗಳನ್ನು ಹಿಂದಿಕ್ಕಿರುವ ಕಾಂತಾರ ಚಾಪ್ಟರ್ 1 ನೂತನ ಇಂಡಸ್ಟ್ರಿ ಹಿಟ್.
ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಹಾಗೂ ಕಸವೇ ತುಂಬಿದೆ ಎಂದ ಚೀನಾದ ಉದ್ಯಮಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


