ಚಿಕ್ಕಬಳ್ಳಾಪುರ: ಉದ್ಯೋಗ ಹುಡುಕಿಕೊಂಡು ಚಿಕ್ಕಬಳ್ಳಾಪುರಕ್ಕೆ ಬಂದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ಯುವತಿ ಮೇಲೆ ಕಾಮುಕರಿಬ್ಬರು ಅಟ್ಟಹಾಸ ಮೆರೆದಿದ್ದು, ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಿಕಾಂ ವ್ಯಾಸಂಗ ಮಾಡಿದ್ದ ಯುವತಿ ಕೆಲಸ ಹುಡುಕಿಕೊಂಡು ಚಿಕ್ಕಬಳ್ಳಾಪುರಕ್ಕೆ ಬಂದು ವಾಪಸ್ ತನ್ನ ಸ್ವಗ್ರಾಮಕ್ಕೆ ಹಿಂದಿರುಗುವಾಗ ಆಕೆ ನಡೆದುಕೊಂಡು ಹೋಗುತ್ತಿದ್ದನ್ನು ಕಂಡ ಸಿಕಂದರ್ ಎಂಬಾತ ಆಕೆಗೆ ಡ್ರಾಪ್ ಕೊಡುವುದಾಗಿ ಮಾತನಾಡಿಸಿದ್ದಾನೆ. ಆಕೆ ಬೇಡ ಎಂದರೂ ಪುಸಲಾಯಿಸಿ ಬೈಕ್ ಹತ್ತಿಸಿಕೊಂಡ ಸಿಕಂದರ್ ವೀರದಿಮ್ಮಮ್ಮನ ಕಣಿವೆಯ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದಾನೆ.
ಬಳಿಕ ತನ್ನ ಸ್ನೇಹಿತ ಜನಾರ್ದನಾಚಾರಿಗೂ ಕರೆ ಮಾಡಿ ಕರೆಸಿಕೊಂಡ ಸಿಕಂದರ್ ಬಳಿಕ ಇಬ್ಬರೂ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಎಲ್ಲಿ ಬೈಕ್ ಹತ್ತಿಸಿಕೊಂಡಿದ್ದನೋ ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ. ಇನ್ನು ಆಕೆಯ ಕಿವಿಯ ಓಲೆಯನ್ನು ಕಸಿದುಕೊಂಡ ಕೀಚಕರು ಅತ್ಯಾಚಾರ ಎಸಗಿದ್ದನ್ನು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾರೆ.
ಇನ್ನು ಸಂತ್ರಸ್ತೆ ಪೆಟ್ರೋಲ್ ಬಂಕ್ ಸಮೀಪ ನಿತ್ರಾಣಳಾಗಿ ಕುಳಿತಿದ್ದನ್ನು ಕಂಡ ಸ್ಥಳೀಯರು ಆಕೆಯನ್ನು ವಿಚಾರಿಸಿದಾಗ ನಡೆದ ಘಟನೆಯನ್ನು ತಿಳಿಸಿದ್ದು, ಸದ್ಯ ಈಗ ಆಕೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾಳೆ. ಸಂತ್ರಸ್ತೆ ನೀಡಿದ ಹೇಳಿಕೆ ಆಧಾರದ ಮೇಲೆ ಪೆಟ್ರೋಲ್ ಬಂಕ್ ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಟ್ರ್ಯಾಕ್ಟರ್ ಮೆಕಾನಿಕ್ ಸಿಕಂದರ್ ಹಾಗೂ ಆತನ ಸ್ನೇಹಿತ ಜನಾರ್ದನಚಾರಿಯನ್ನು ಬಂಧಿಸಿದ್ದಾರೆ.
ಸಣ್ಣ ವ್ಯಾಪಾರಿಗಳಿಗಾಗಿ 24×7 ‘AI ಸೇಲ್ಸ್‌ಮನ್’ ಪರಿಚಯಿಸಿದ ಜಿಯೋ ಇದರ ವಿಶೇಷತೆ ಏನು ಗೊತ್ತಾ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


