Saturday, November 7, 2026
spot_img
More
    spot_img
    HomeSportsCricket42 ಎಸೆತಕ್ಕೆ 15 ಸಿಕ್ಸ್‌, 144 ರನ್: ಏಷ್ಯಾಕಪ್‌ನಲ್ಲಿ ಭಾರತದ ಪರ ಅಬ್ಬರಿಸಿ ಬೊಬ್ಬಿರಿದ ವೈಭವ್‌...

    42 ಎಸೆತಕ್ಕೆ 15 ಸಿಕ್ಸ್‌, 144 ರನ್: ಏಷ್ಯಾಕಪ್‌ನಲ್ಲಿ ಭಾರತದ ಪರ ಅಬ್ಬರಿಸಿ ಬೊಬ್ಬಿರಿದ ವೈಭವ್‌ ಸೂರ್ಯವಂಶಿ!

    ಪ್ರಸ್ತುತ ಯುಎಇಯಲ್ಲಿ ಎಸಿಸಿ ಪುರುಷರ ಏಷ್ಯಾಕಪ್‌ ರೈಸಿಂಗ್‌ ಸ್ಟಾರ್ಸ್‌ ಟೂರ್ನಿ ನಡೆಯುತ್ತಿದ್ದು, ಇಂದು ( ನವೆಂಬರ್‌ 14 ) ನಡೆದ ಟೂರ್ನಿಯ ಗ್ರೂಪ್‌ ಹಂತದ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ತಂಡಗಳು ಮುಖಾಮುಖಿಯಾದವು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ವೈಭವ್‌ ಸೂರ್ಯವಂಶಿ ಅಬ್ಬರದ ಶತಕ ಹಾಗೂ ನಾಯಕ ಜಿತೇಶ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 297 ರನ್‌ ಕಲೆಹಾಕಿ ಎದುರಾಳಿ ಯುಎಇಗೆ 298 ರನ್‌ಗಳ ಅತಿ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಯುಎಇ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 149 ರನ್‌ ಕಲೆಹಾಕಿತು. ಈ ಮೂಲಕ ಭಾರತ ಬರೋಬ್ಬರಿ 148 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

    ಭಾರತದ ಇನ್ನಿಂಗ್ಸ್:‌ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ವೈಭವ್‌ ಸೂರ್ಯವಂಶಿ 32 ಎಸೆತಕ್ಕೆ ಶತಕ ಬಾರಿಸಿ 42 ಎಸೆತಗಳಲ್ಲಿ 11 ಬೌಂಡರಿ ಹಾಗೂ 15 ಸಿಕ್ಸರ್‌ ಸಹಿತ ಬರೋಬ್ಬರಿ 144 ರನ್‌ ಬಾರಿಸಿ ಅಬ್ಬರಿಸಿ ಬೊಬ್ಬಿರಿದರು. ಇನ್ನುಳಿದಂತೆ ಪ್ರಿಯನ್ಶ್‌ ಆರ್ಯ 10, ನಮನ್‌ ಧೀರ್‌ 34, ನೇಹಲ್‌ ವಧೇರಾ 14, ರಮಣ್‌ದೀಪ್‌ ಸಿಂಗ್‌ ಅಜೇಯ 6 ರನ್‌ ಹಾಗೂ ನಾಯಕ ಜಿತೇಶ್‌ ಶರ್ಮಾ 32 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 83 ರನ್‌ ಬಾರಿಸಿದರು.

    ಯುಎಇ ಪರ ಮುಹಮ್ಮದ್‌ ಫರಾಜುದ್ದೀನ್‌, ಆಯಾನ್‌ ಖಾನ್‌ ಹಾಗೂ ಮುಹಮ್ಮದ್‌ ಅರ್ಫಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಯುಎಇ ಇನ್ನಿಂಗ್ಸ್:‌ ತಂಡದ ಪರ ಮಯಾಂಕ್‌ ರಾಜೇಶ್‌ ಕುಮಾರ್‌ 18, ನಾಯಕ ಅಲಿಶನ್‌ ಶರಫು 3, ಅಹ್ಮದ್‌ ತಾರೀಕ್‌ ಡಕ್‌ಔಟ್‌, ಸೊಹೈಬ್‌ ಖಾನ್‌ 63, ಹರ್ಷಿತ್‌ ಕೌಶಿಕ್‌ ಡಕ್‌ಔಟ್‌, ಸೈಯದ್‌ ಹೈದರ್‌ 20, ಮುಹಮ್ಮದ್‌ ಅರ್ಫಾನ್‌ 26, ಆಯಾನ್‌ ಅಫ್ಜಲ್‌ ಖಾನ್‌ ಅಜೇಯ 2 ಹಾಗೂ ಮುಹಮ್ಮದ್‌ ಫರಾಜುದ್ದೀನ್‌ ಅಜೇಯ 2 ರನ್‌ ದಾಖಲಿಸಿದರು.

    ಭಾರತದ ಪರ ಗುರ್ಜನ್‌ಪ್ರೀತ್‌ ಸಿಂಗ್‌ 3 ವಿಕೆಟ್, ಹರ್ಷ್‌ ದುಬೆ 2 ವಿಕೆಟ್‌, ರಮಣ್‌ದೀಪ್‌ ಸಿಂಗ್‌ ಹಾಗೂ ಯಶ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಧರ್ಮಸ್ಥಳ: ಎಸ್‌ಐಟಿ ಅಧಿಕಾರಿಗಳು ದೊಡ್ಡವರ ವಿರುದ್ಧ ದೂರು ಕೊಡ್ತೀಯ ಎಂದು ಚಿನ್ನಯ್ಯನಿಂದ ನನಗೆ ಹೊಡೆಸಿದ್ರು; ರಾಜ್ಯಪಾಲರಿಗೆ ಜಯಂತ್‌ ದೂರು!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search