Wednesday, November 4, 2026
spot_img
More
    spot_img
    HomeEntertainmentಶುಕ್ರವಾರ, ಶನಿವಾರಕ್ಕಿಂತಲೂ ಭಾನುವಾರ ಕಡಿಮೆ ಶೋ; ರಜೆ ದಿನವೂ ಶೋ ಕಳೆದುಕೊಂಡ ದಿ ಡೆವಿಲ್!

    ಶುಕ್ರವಾರ, ಶನಿವಾರಕ್ಕಿಂತಲೂ ಭಾನುವಾರ ಕಡಿಮೆ ಶೋ; ರಜೆ ದಿನವೂ ಶೋ ಕಳೆದುಕೊಂಡ ದಿ ಡೆವಿಲ್!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ಪ್ರಕಾಶ್ ವೀರ್ ನಿರ್ದೇಶನದ ದಿ ಡೆವಿಲ್ ಚಿತ್ರ ಇಂದು ( ಡಿಸೆಂಬರ್ 14 ) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಗುರುವಾರ ತೆರೆಗೆ ಬಂದ ಡೆವಿಲ್ ಮೊದಲ ದಿನ ಅಬ್ಬರದ ಓಪನಿಂಗ್ ಪಡೆದುಕೊಂಡಿತ್ತು.

    ಪೊಲಿಟಿಕಲ್ ಡ್ರಾಮಾದಲ್ಲಿ ದರ್ಶನ್ ನಟಿಸಿದ್ದು, ಅವರ ಅಭಿಮಾನಿಗಳ ಪಾಲಿಗೆ ಚಿತ್ರ ಇಷ್ಟವಾಗಿದೆ ಹಾಗೂ ಸಾಮಾನ್ಯ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಡೆವಿಲ್ ಮೊದಲ ದಿನ 13.8 ಕೋಟಿ ಗಳಿಕೆ ಮಾಡಿದೆ ಎಂದು ಪೋಸ್ಟರ್ ಹಂಚಿಕೊಂಡಿದ್ದ ಡಿ ಕಂಪನಿ ಬಳಿಕ ಆ ಪೋಸ್ಟ್ ಡಿಲಿಟ್ ಮಾಡಿದ್ದು, ಚಿತ್ರತಂಡ ಅಧಿಕೃತವಾಗಿ ಕಲೆಕ್ಷನ್ ಘೋಷಣೆ ಮಾಡಿಲ್ಲ.

    ಇನ್ನು ಮೊದಲ ದಿನ ಬೆಂಗಳೂರು ನಗರದಾದ್ಯಂತ ಬರೋಬ್ಬರಿ 939 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಡೆವಿಲ್ ಎರಡನೇ ದಿನ ಶೋಗಳ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿತ್ತು. ಎರಡನೇ ದಿನ ತೆಲುಗಿನ ಅಖಂಡ 2 ಬಿಡುಗಡೆ ಹಾಗೂ ತಮಿಳಿನ ಪಡಯಪ್ಪ ಮರು ಬಿಡುಗಡೆಯಾದ ಕಾರಣ ಶೋಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ, ನಂತರದ ದಿನಗಳಲ್ಲಿ ಸುಧಾರಿಸಿಕೊಳ್ಳಬಹುದು ಎನ್ನಲಾಗಿತ್ತು.

    ಆದರೆ ಮೂರನೇ ದಿನ ಶನಿವಾರ ಡೆವಿಲ್ ಶುಕ್ರವಾರಕ್ಕಿಂತ ಕಡಿಮೆ ಶೋ ಪಡೆದುಕೊಂಡಿತ್ತು ಹಾಗೂ ಇಂದು ಭಾನುವಾರ ರಜೆ ದಿನ ಇದ್ದರೂ ಸಹ ಡೆವಿಲ್ ಶನಿವಾರ ಹಾಗೂ ಶುಕ್ರವಾರಕ್ಕಿಂತ ಬೆಂಗಳೂರಿನಲ್ಲಿ ಕಡಿಮೆ ಶೋ ಪಡೆದುಕೊಂಡಿದೆ.

    ಮೊದಲ ದಿನ ಬೆಂಗಳೂರಿನಲ್ಲಿ 939 ಶೋಗಳನ್ನು ಪಡೆದುಕೊಂಡಿದ್ದ ಡೆವಿಲ್ ಎರಡನೇ ದಿನ ಶುಕ್ರವಾರ 546 ಶೋಗಳನ್ನು ಪಡೆದುಕೊಂಡಿತ್ತು. ಹೀಗೆ ಎರಡನೇ ದಿನ ಭಾರೀ ಕುಸಿತ ಕಂಡಿದ್ದ ಡೆವಿಲ್ ಮೂರನೇ ದಿನ ಶನಿವಾರ ಬೆಂಗಳೂರಿನಲ್ಲಿ 501 ಶೋಗಳನ್ನು ಪಡೆದುಕೊಂಡಿತ್ತು ಹಾಗೂ ಇಂದು ಭಾನುವಾರ 489 ಶೋಗಳನ್ನು ಮಾತ್ರ ಬೆಂಗಳೂರಿನಲ್ಲಿ ಪಡೆದುಕೊಂಡಿದೆ.

    ಇನ್ನು ಬೆಂಗಳೂರು ಮಾತ್ರವಲ್ಲದೇ ಮೈಸೂರಿನಲ್ಲೂ ಸಹ ಡೆವಿಲ್‌ನದ್ದು ಇದೇ ಕತೆ. ಮೊದಲ ದಿನ ಮೈಸೂರಿನಲ್ಲಿ 124 ಶೋಗಳನ್ನು ಪಡೆದುಕೊಂಡಿದ್ದ ಡೆವಿಲ್ ಎರಡನೇ ದಿನ 71 ಶೋಗಳನ್ನು ಪಡೆದುಕೊಂಡಿತ್ತು ಹಾಗೂ ಶನಿವಾರ 64 ಶೋಗಳನ್ನು ಪಡೆದುಕೊಂಡಿತ್ತು. ಇಂದೂ ಸಹ ಡೆವಿಲ್ ಮೈಸೂರಿನಲ್ಲಿ ಡೆವಿಲ್ 64 ಶೋಗಳನ್ನು ಪಡೆದುಕೊಂಡಿದೆ.

    ಇನ್ನು ಶೋಗಳ ಸಂಖ್ಯೆ ಕಡಿಮೆಯಾದರೂ ಇರುವ ಶೋಗಳ ಟಿಕೆಟ್ ವೇಗವಾಗಿ ಮಾರಾಟವಾಗುತ್ತಿದ್ದು, ಆಕ್ಯುಪೆಸಿ ರೇಟ್ ಹೆಚ್ಚಿದೆ.

    ( ಈ ಅಂಕಿಅಂಶಗಳನ್ನು @KA_Talkies ಎಂಬ ಎಕ್ಸ್ ಖಾತೆ ಮಾಡಿದ ಟ್ವೀಟ್‌ಗಳಿಂದ ತೆಗೆದುಕೊಳ್ಳಲಾಗಿದೆ. )

    ಗೋಲ್ಡನ್ ಪ್ಲೇ ಬಟನ್ ಸಿಕ್ಕರೆ ಯುಟ್ಯೂಬರ್ಸ್‌ಗೆ ಸಿಗುವ ಆದಾಯ ಎಷ್ಟು ಗೊತ್ತೇ? ಸಂಪೂರ್ಣ ವಿವರ ಇಲ್ಲಿದೆ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search