ಶಿಗ್ಗಾವಿ: ಮೃತಪಟ್ಟ ವ್ಯಕ್ತಿಯೋರ್ವನನ್ನು ಅಂತ್ಯಕ್ರಿಯೆಗೆಂದು ಊರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಆ ವ್ಯಕ್ತಿ ಎದ್ದು ಕೂತಿರುವ ಘಟನೆ ಅಚ್ಚರಿ ಮೂಡಿಸಿದ ಘಟನೆ ಕಳೆದ ಭಾನುವಾರ (ಡಿಸೆಂಬರ್ 9) ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ.
ಬಂಕಾಪುರದ ಮಂಜುನಾಥ ನಗರದ ನಿವಾಸಿ ಬಿಷ್ಠಪ್ಪ ಅಶೋಕ ಗುಡಿಮನಿ (45) ಎಂಬಾತನನ್ನು ಅನಾರೋಗ್ಯದ ಕಾರಣ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಭಾನುವಾರ ಬಿಷ್ಠಪ್ಪ ಉಸಿರಾಡದಿರುವುದನ್ನು ಕಂಡ ಆಸ್ಪತ್ರೆಯ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇನ್ನು ಬಿಷ್ಠಪ್ಪ ಮೃತಪಟ್ಟರೆಂದು ಆಂಬುಲೆನ್ಸ್ ಮೂಲಕ ಅಂತ್ಯಕ್ರಿಯೆಗೆ ಊರಿಗೆ ಕರೆತಲಾಗುತ್ತಿತ್ತು. ಪತ್ನಿ ಶೀಲಾ ಪತಿಯ ಇಷ್ಟದ ಡಾಬಾವೊಂದು ಬಂದ ಕೂಡಲೇ ಪತಿಯನ್ನು ಕಳೆದುಕೊಂಡ ದುಃಖದಲ್ಲಿ ʼಡಾಬಾ ಬಂತು ನೋಡು ಊಟ ಮಾಡುತ್ತೀಯಾʼ ಎಂದು ಗೋಳಾಡಿದ್ದಾರೆ. ಹೀಗೆ ಹೇಳಿದ ಕೂಡಲೇ ಬಿಷ್ಠಪ್ಪ ಉಸಿರು ಬಿಟ್ಟದ್ದಾರೆ. ಬಳಿಕ ಬಿಷ್ಠಪ್ಪ ಅವರನ್ನು ಕೂಡಲೇ ಶಿಗ್ಗಾವಿ ಆಸ್ಪತ್ರೆಗೆ ಕರೆದೊಯ್ದಾಗ ಪರೀಕ್ಷಿಸಿದ ವೈದ್ಯರು ಆತ ಬದುಕಿರುವುದನ್ನು ಖಚಿತಪಡಿಸಿದ್ದಾರೆ. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


