ನಿನ್ನೆ (ಮಾರ್ಚ್ 14 ) ಶುಕ್ರವಾರ ಹೆಚ್ಚೇನೂ ಹೊಸ ಚಿತ್ರಗಳು ಬಿಡುಗಡೆಯಾಗಲಿಲ್ಲ. ಆದರೂ ಸಹ ಗಾಂಧಿನಗರದಲ್ಲಿ ದೊಡ್ಡ ಸ್ಟಾರ್ ನಟನ ಚಿತ್ರವೊಂದು ಬಿಡುಗಡೆಯಾದ ಸಂಭ್ರಮವಿತ್ತು. ನರ್ತಕಿ ಚಿತ್ರಮಂದಿರದ ಮುಂದೆ ಹೌಸ್‌ಫುಲ್ ಬೋರ್ಡ್ ಬಿದ್ದಿತ್ತು. ಇದಕ್ಕೆ ಕಾರಣ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಚಿತ್ರದ ಮರುಬಿಡುಗಡೆ.
ಹೌದು, ತಿಂಗಳ ಹಿಂದೆಯೇ ಪುನೀತ್ ರಾಜ್‌ಕುಮಾರ್ ಐವತ್ತನೇ ಹುಟ್ಟುಹಬ್ಬದ ಅಂಗವಾಗಿ ಅಪ್ಪು ಚಿತ್ರದ ಮರು ಬಿಡುಗಡೆ ಘೋಷಿಸಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಕೆಆರ್‌ಜಿ ಸ್ಟುಡಿಯೊಸ್ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದೆ.
ಇದೇ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕರಿಯ ಚಿತ್ರವನ್ನೂ ಸಹ ಮರುಬಿಡುಗಡೆ ಮಾಡಲಾಗಿದೆ. ಹೌದು, ಪ್ರಸನ್ನ ಚಿತ್ರಮಂದಿರದಲ್ಲಿ ಮಾತ್ರ ಕರಿಯ ಚಿತ್ರವನ್ನು ಪ್ರದರ್ಶಿಸಲಾಯಿತು. ಇದೇ ವಿಷಯಕ್ಕೆ ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು ಪ್ರಸನ್ನ ಚಿತ್ರಮಂದಿರದ ಎದುರು ಜಮಾಯಿಸಿ ಈ ಸಮಯದಲ್ಲಿ ಕರಿಯ ಚಿತ್ರವನ್ನು ಮರುಬಿಡುಗಡೆ ಮಾಡಬಾರದಿತ್ತು ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಕಾರಣವನ್ನೂ ನೀಡಿದ ದರ್ಶನ್ ಅಭಿಮಾನಿಗಳು ಒಂದೆಡೆ ಪುನೀತ್ ಅವರ ಚಿತ್ರದ ಮರುಬಿಡುಗಡೆ ಇದೆ, ಇಂತಹ ಸಮಯದಲ್ಲಿ ನೀವು ಕರಿಯ ಚಿತ್ರವನ್ನು ಮರುಬಿಡುಗಡೆ ಮಾಡಿದರೆ ಅದರಿಂದ ಫ್ಯಾನ್ ವಾರ್ ಉಂಟಾಗಲಿದೆ ಎಂದು ಆರೋಪಿಸಿ ಮರುಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದರು.
ಅಲ್ಲದೇ ಈ ರೀತಿ ಅಭಿಮಾನಿಗಳಿಗೆ ಹೇಳದೇ, ಯಾವುದೇ ಜಾಹೀರಾತನ್ನೂ ನೀಡದೇ ಚಿತ್ರವನ್ನು ಮರುಬಿಡುಗಡೆ ಮಾಡಿದ್ದಾರೆ, ಅದರಿಂದಾಗಿ ಜನರಿಲ್ಲ ಎಂದು ಚಿತ್ರಮಂದಿರದ ಮಾಲೀಕರ ವಿರುದ್ಧ ಬೇಸರ ಹೊರಹಾಕಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


