ಪಾಲಿಶ್ ಮಾಡದ ಅಕ್ಕಿಯ ಮೇಲಿರುವ ಭತ್ತದ ಹೊಟ್ಟಿನ ಪದರದಲ್ಲಿಯೇ ಜೀವಸತ್ವಗಳು ಮತ್ತು ಖನಿಜಗಳು ಇರುತ್ತವೆ. ಈ ಪದರವನ್ನು ತೆಗೆದು ಹಾಕಿದಾಗ ಅಕ್ಕಿಯ ಮೂಲ ಪೋಷಕಾಂಶಗಳು ಕಳೆದು ಹೋಗುತ್ತವೆ. ಇದರಾಗಿಯೇ ಬಿಳಿ ಅಕ್ಕಿಗಿಂತ ಕಂದು ಅಥವಾ ಕೆಂಪು ಅಕ್ಕಿಯು ಉತ್ತಮ ಆಯ್ಕೆ ಎನ್ನಲಾಗುತ್ತಿದೆ.ಇಂತಹ ಅಕ್ಕಿಯನ್ನು ಬ್ರೌನ್ ರೈಸ್, ರೆಡ್ ರೈಸ್, ಅಥವಾ ಬ್ಲಾಕ್ ರೈಸ್ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಬ್ಲಾಕ್ ರೈಸ್ ಅಥವಾ ಕಪ್ಪು ಅಕ್ಕಿಯು ಪ್ರೋಟೀನ್, ಕಬ್ಬಿಣಾಂಶ, ಕಾರ್ಬೋಹೈಡ್ರೇಟ್ಸ್, ಫೈಬರ್ ಮತ್ತು ಸ್ವಲ್ಪ ಪ್ರಮಾಣದ ಕೊಬ್ಬಿನಾಂಶದಿಂದ ಸಮೃದ್ಧವಾಗಿದೆ. ಇದನ್ನು ಆಹಾರದಲ್ಲಿ ಬಳಸಿದರೆ ಇದು ಒಂದು ಪರಿಪೂರ್ಣ ಊಟವಾಗುತ್ತದೆ.ಈ ಕಪ್ಪು ಅಕ್ಕಿಯು ಮೊದಲಿಗೆ ಚೀನಾದಲ್ಲಿ ಬೆಳೆಯಲಾಗುತ್ತಿತ್ತು. ಇದೀಗ ಇದು ಭಾರತದಲ್ಲಿಯೂ ಜನಪ್ರಿಯತೆ ಪಡೆಯುತ್ತಿದೆ. ಆಹಾರದಲ್ಲಿ ಪಾಲಿಶ್ ಮಾಡದ ಅಕ್ಕಿಯನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.ಇದು ಪ್ರತಿಯೊಂದು ದೇಹದ ಅಂಗಾಂಶಗಳಿಗೆ ಅನುಕೂಲಕರವಾಗಿದೆ. ಹೃದಯದಿಂದ ಹಿಡಿದು ಮೆದುಳಿನ ಕಾರ್ಯವೈಖರಿ ಹಾಗೂ ಸ್ನಾಯುಗಳ ಬಲವರ್ಧನೆ, ಎಲ್ಲಾ ಕಡೆಗೆ ಇದರ ಪ್ರಯೋಜನಗಳು ಕಾಣಸಿಗುತ್ತವೆ.

ಮಧುಮೇಹಿಗಳಿಗೆ ಉತ್ತಮ
ಮಧುಮೇಹಿಗಳು ತಮ್ಮ ಆಹಾರದಲ್ಲಿ ನಿರ್ದಿಷ್ಟ ನಿಯಮಗಳನ್ನು ಪಾಲಿಸಲೇಬೇಕಾದ ಪರಿಸ್ಥಿತಿ ಇರುತ್ತದೆ. ಹೆಚ್ಚು ಸಕ್ಕರೆ ಅಂಶವಿರುವ ಆಹಾರವಸ್ತುಗಳು ಅವರ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ, ಕಡಿಮೆ ಸಕ್ಕರೆ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾದ ಆಯ್ಕೆಗಳು ಅವರ ದಿನಚರಿಯಲ್ಲಿ ಇರಬೇಕಾಗುತ್ತದೆ. ಅಂಥಲ್ಲಿ ಕಪ್ಪು ಅಕ್ಕಿ ಮಹತ್ವದ ಪಾತ್ರವಹಿಸುತ್ತದೆ.ಕಪ್ಪು ಅಕ್ಕಿಯಲ್ಲಿರುವ ಸಕ್ಕರೆ ಅಂಶ ಅತಿದೊಡ್ಡ ಪ್ರಮಾಣದಲ್ಲಿಲ್ಲ. ಇದು ಲೋ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು, ರಕ್ತದಲ್ಲಿನ ಶರ್ಕೆ ಪ್ರಮಾಣವನ್ನು ಧಿಮೆಗತಿಯಲ್ಲಿ ಹೆಚ್ಚಿಸುತ್ತದೆ. ಇದಲ್ಲದೇ, ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಫ್ರೀ ರ್ಯಾಡಿಕಲ್‌ಗಳನ್ನು ಹತೋಟಿಗೆ ತರುವಲ್ಲಿ ಸಹಾಯಕವಾಗುತ್ತವೆ.ಮತ್ತೊಂದು ವಿಶೇಷತೆ ಎಂದರೆ ಈ ಅಕ್ಕಿಯು ಗ್ಲುಟನ್-ರಹಿತವಾಗಿದ್ದು, ಗ್ಲುಟನ್ ಅಸಹಿಷ್ಣುತೆಯ ಸಮಸ್ಯೆ ಇರುವವರು ಅಥವಾ ಕರುಳಿನ ಸಮಸ್ಯೆ ಹೊಂದಿರುವವರಿಗೂ ಇದು ಸೂಕ್ತ ಆಯ್ಕೆಯಾಗಿದೆ.ಹೀಗಾಗಿ ಮಧುಮೇಹಿಗಳಿಗಾಗಿಯೇ ಅಲ್ಲ, ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರುವ ಎಲ್ಲರಿಗೂ ಕಪ್ಪು ಅಕ್ಕಿ ಒಂದು ಪೋಷಕಾಂಶಗಳಿಂದ ಸಮೃದ್ಧ, ಸುರಕ್ಷಿತ ಆಯ್ಕೆ ಆಗಿ ನಿಂತಿದೆ.

ಕ್ಯಾನ್ಸರ್ ತಡೆಗಟ್ಟುತ್ತೆ:
ಕಂದು ಅಕ್ಕಿಯು ಆರೋಗ್ಯ ಪರಿಪಾಲನೆಗೆ ಪ್ರಮುಖ ಪಾತ್ರವಹಿಸುತ್ತಿದ್ದು, ಅದರಲ್ಲಿರುವ ಸೆಲೆನಿಯಮ್ ಶಕ್ತಿಯುತ ಖನಿಜವಾಗಿದೆ. ಇದು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ನೆರವಾಗುವುದಲ್ಲದೇ, ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ತಡೆದು ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಈ ಅಕ್ಕಿಯಲ್ಲಿ ಇರುವ ಪಾಲಿಫಿನಾಲ್‌ಗಳಲ್ಲಿನ ಲಿಗ್ನಾನ್‌ಗಳು ಕರುಳಿಗೆ ತಲುಪಿದ ಬಳಿಕ ಫೈಟೋಈಸ್ಟ್ರೊಜೆನ್ ಆಗಿ ಪರಿವರ್ತನೆಗೊಳ್ಳುತ್ತವೆ, ಇದು ದೇಹದ ನೈಸರ್ಗಿಕ ರಕ್ಷಣೆ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ.ಕಂದು ಅಕ್ಕಿಯ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ – ಇದು ಹೃದಯದ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ. ಇದರಲ್ಲಿರುವ ಪಿಷ್ಟ (ಕಾರ್ಬೋಹೈಡ್ರೇಟ್) ನಿಧಾನವಾಗಿ ಜೀರ್ಣವಾಗುವುದರಿಂದ, ರಕ್ತದಲ್ಲಿ ಶರ್ಕೆಯ ಮಟ್ಟ ತಕ್ಷಣ ಏರಿಕೆಯಾಗದು. ಇದರಿಂದ ಒಮ್ಮೆ ಊಟ ಮಾಡಿದರೆ, ತುಂಬಿದ ಭಾವನೆಯನ್ನು ನೀಡುತ್ತದೆ ಮತ್ತು ದೀರ್ಘಕಾಲ ಹಸಿವಾಗದು ಎಂದು ತಜ್ಞರು ಸಲಹೆ ನೀಡುತ್ತಾರೆ.ಇದೇ ರೀತಿ, ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಬಹುಶಃ ಇವುಗಳ ಅತಿ ಶಕ್ತಿಯುತ ಅಂಗವಾಗಿದೆ. ಇದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು, ಕೆಲವು ಅಧ್ಯಯನಗಳ ಪ್ರಕಾರ ಕರುಳಿನ ಕ್ಯಾನ್ಸರ್ ಸಂಭವನೆಯ ಅಪಾಯವನ್ನು ಕಡಿಮೆ ಮಾಡಬಹುದು.
ಹೃದಯದ ಆರೋಗ್ಯಕ್ಕೆ
ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ನಾರಿನಾಂಶವು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡು ವುದು. ನಾರಿನಾಂಶವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು. ಆ್ಯಂಟಿ ಆಕ್ಸಿಡೆಂಟ್ ರಕ್ತನಾಳಗಳಿಗೆ ಆಗುವಂತಹ ಹಾನಿಯಿಂದ ಹೃದಯವನ್ನು ಕಾಪಾಡುವುದು.ಕಪ್ಪು ಅಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಇವುಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಹೃದಯ ಸಮಸ್ಯೆಗಳಿಂದ ಉಂಟಾಗುವ ಸಾವಿನ ಅಪಾಯ ಕಡಿಮೆ ಮಾಡುತ್ತದೆ. ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಸುಧಾರಿಸುತ್ತದೆ. ಇವುಗಳನ್ನು ಸೇವಿಸುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಬ್ಲ್ಯಾಕ್ ರೈಸ್ ಸೇವಿಸಿದರೆ, ಹೃದಯದ ಸಮಸ್ಯೆಗಳು ಬರದಂತೆ ರಕ್ಷಿಸಿಕೊಳ್ಳಬಹುದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್, ನಾರಿನಾಂಶವು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹಾಗೂ ಹೃದಯರಕ್ತನಾಳದ ಆರೋಗ್ಯ ಕಾಪಾಡುತ್ತದೆ. ನಾರಿನಾಂಶವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ ಹಾಗೂ ಆ್ಯಂಟಿಆಕ್ಸಿಡೆಂಟ್ ರಕ್ತನಾಳಗಳಿಗೆ ಆಗುವಂತಹ ಹಾನಿಯಿಂದ ಹೃದಯವನ್ನು ರಕ್ಷಿಸುತ್ತದೆ.

ಮೆದುಳಿನ ಆರೋಗ್ಯ ಕಾಪಾಡುವುದು
ಕಪ್ಪು ಅಕ್ಕಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶಗಳು ಕೇವಲ ದೇಹದ ರೋಗಗಳನ್ನಷ್ಟೇ ಅಲ್ಲ, ಮೆದುಳಿನ ಆರೋಗ್ಯಕ್ಕೂ ಬಹುಪಾಲು ಲಾಭವನ್ನು ನೀಡುತ್ತವೆ. ಈ ಪೋಷಕಾಂಶಗಳು ಮೆದುಳಿನಲ್ಲಿ ಉಂಟಾಗುವ ಉರಿಯೂತ (inflammation) ಮತ್ತು ಆಕ್ಸಿಡೇಟಿವ್ ಒತ್ತಡದಿಂದ (oxidative stress) ರಕ್ಷಣೆ ನೀಡುತ್ತವೆ.ಉರಿಯೂತ ಮತ್ತು ಒತ್ತಡ ಮುಂದುವರೆದಾಗ, ಅದು ಮೆದುಳಿನ ಕಾರ್ಯಕ್ಷಮತೆ ಕಡಿಮೆ ಮಾಡಬಹುದು. ಇದರ ಪರಿಣಾಮವಾಗಿ ನೆನಪಿನ ಶಕ್ತಿ ಕುಗ್ಗುವುದು, ಅರಿವಿನ ಕೊರತೆ ಉಂಟಾಗುವುದು ಮತ್ತು ಕೆಲವೊಮ್ಮೆ ನರಸಂಬಂಧಿ ಕಾಯಿಲೆಗಳಿಗೂ ಕಾರಣವಾಗಬಹುದು.ಆದರೆ ನಿಯಮಿತವಾಗಿ ಕಪ್ಪು ಅಕ್ಕಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮೆದುಳಿನ ಜೀವಕೋಶಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಇದು ನೆನಪಿನ ಶಕ್ತಿಯನ್ನು ಸುಧಾರಿಸುವುದಲ್ಲದೇ, ಒತ್ತಡವನ್ನು ಕಡಿಮೆ ಮಾಡಿ ಮಂಗಳಕರ ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತದೆ.
ಸ್ನಾಯುಗಳ ಬಲಕ್ಕೆ
ಕಪ್ಪು ಅಕ್ಕಿಯಲ್ಲಿ ಸಸ್ಯಜನ್ಯ ಪ್ರೋಟೀನ್ ಉತ್ತಮ ಪ್ರಮಾಣದಲ್ಲಿ ಲಭ್ಯವಿದ್ದು, ಇದು ಸ್ನಾಯುಗಳ ಬಲವರ್ಧನೆಗೆ ಹಾಗೂ ದೇಹದ ಸರಿಯಾದ ಬೆಳವಣಿಗೆಗೆ ಸಹಾಯಕರವಾಗಿದೆ. ಸ್ನಾಯುಗಳನ್ನು ಮರುಸಂಸ್ಕರಣೆ ಮಾಡುವುದರಿಂದ ಹಿಡಿದು ದೇಹದ ಒಟ್ಟು ಕಾರ್ಯವೈಖರಿಯನ್ನು ಬೆಂಬಲಿಸುವವರೆಗೂ, ಈ ಅಕ್ಕಿಯು ಪ್ರಾಬಲ್ಯ ಹೊಂದಿದೆ.ಸಸ್ಯಾಹಾರಿಗಳನ್ನು ನೋಡಿ ಹೇಳಬೇಕಾದರೆ, ಕಪ್ಪು ಅಕ್ಕಿಯು ಅತ್ಯುತ್ತಮ ಪ್ರೋಟೀನ್ ಆಯ್ಕೆ. ಇದರಲ್ಲಿ ಆವಶ್ಯಕ ಅಮೈನೋ ಆಮ್ಲಗಳು ಸಹ ಸಮೃದ್ಧವಾಗಿ ಇವೆ, ಅವು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪೂರೈಸುತ್ತವೆ.ದೈನಂದಿನ ಆಹಾರದಲ್ಲಿ ಬ್ಲ್ಯಾಕ್ ರೈಸ್ ಸೇರಿಸಿಕೊಂಡರೆ, ಅದು ದೇಹದ ದುರ್ಬಲತೆಯನ್ನು ಕಡಿಮೆ ಮಾಡಿ ಶಕ್ತಿಯುತ ಜೀವನಶೈಲಿಗೆ ನೆರವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


