ಬೆಂಗಳೂರು: ಡೀಸೆಲ್ ದರ ಏರಿಕೆ ಮಾಡಿದ್ದನ್ನು ಖಂಡಿಸಿ ಮಧ್ಯರಾತ್ರಿ 12 ಗಂಟೆಯಿಂದ ಲಾರಿ ಮುಷ್ಕರನ್ನು ಆರಂಭಿಸಲಾಗಿದ್ದು, ಡೀಸೆಲ್ ದರ ಇಳಿಕೆ ಮಾಡುವವರೆಗೂ ಅನಿರ್ದಾಷ್ಟಾವಧಿ ಮುಷ್ಕರ ನಡೆಸಲು ನಿಶ್ಚಯಿಸಲಾಗಿದೆ.
ಇನ್ನು ಈ ಲಾರಿ ಚಾಲಕರ ಮುಷ್ಕರಕ್ಕೆ ಏರ್‌ಪೋರ್ಟ್ ಟ್ಯಾಕ್ಸಿಗಳು ಸಹ ಬೆಂಬಲ ಸೂಚಿಸಿದ್ದಾರೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಹೇಳಿಕೊಂಡಿದ್ದರು. ಆದರೆ ಇಂದು ಬಂದ್ ಆರಂಭವಾದ ದಿನವೇ ಲಾರಿ ಚಾಲಕರು ಲಾರಿ ಮುಷ್ಕರಕ್ಕೆ ಕೈ ಕೊಟ್ಟಿದ್ದಾರೆ.
ಎಂದಿನಂತೆ ಏರ್‌ಪೋರ್ಟ್‌ಗೆ ಟ್ಯಾಕ್ಸಿಗಳು ಸಂಚಾರ ಆರಂಭಿಸಿವೆ. ಜನರು ಯಾವುದೇ ಅಡೆತಡೆ ಇಲ್ಲದೇ ಟ್ಯಾಕ್ಸಿಗಳನ್ನು ಬುಕ್ ಮಾಡಿಕೊಂಡು ಏರ್‌ಪೋರ್ಟ್ ತಲುಪುತ್ತಿದ್ದಾರೆ.
ಏರ್‌ಪೋರ್ಟ್ ಟ್ಯಾಕ್ಸಿ ಮಾತ್ರವಲ್ಲದೇ ಓಲಾ, ಊಬರ್ ಕ್ಯಾಬ್‌ಗಳೂ ಸಹ ಎಂದಿನಂತೆ ಏರ್‌ಪೋರ್ಟ್ ಬುಕಿಂಗ್ ಸ್ವೀಕರಿಸುತ್ತಿವೆ. ಒಟ್ಟಿನಲ್ಲಿ ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಡೆಸಲಾಗುತ್ತಿರುವ ಲಾರಿ ಮಾಲೀಕರ ಮುಷ್ಕರಕ್ಕೆ ಏರ್‌ಪೋರ್ಟ್ ಟ್ಯಾಕ್ಸಿಗಳ ಬೆಂಬಲ ಇಲ್ಲ ಎನ್ನುವುದು ಖಚಿತವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


