ಕುಶಾಲನಗರ: ಸ್ನೇಹಿತನ ಜೊತೆ ಮೀನು ಹಿಡಿಯಲೆಂದು ತೆರಳಿದ್ದ ಯುವಕನೋರ್ವ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸವಿಗೀಡಾಗಿರುವ ಘಟನೆ ನಡೆದಿದೆ.
ಹೊಸತೋಟ ಬಳಿಯ ಗರಗಂದೂರಿನಲ್ಲಿ ದುರ್ಘಟನೆಸೋಮವಾರಪೇಟೆ ಬಳಿಯ ನಗರೂರು ಗ್ರಾಮದ ಯೋಗೇಶ್(25) ಮೃತ ದುರ್ದೈವಿ.
ಗರಗಂದೂರಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ಮೃತ ಯೋಗೇಶ್ ಮತ್ತು ಆತನ ಸ್ನೇಹಿತ ಪ್ರದೀಪ್ ಎಂಬುವರು ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಗರಗಂದೂರಿನ ಹಾರಂಗಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ದುರ್ಘಟನೆ ನಡೆದಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


