Saturday, May 9, 2026
spot_img
More
    spot_img
    HomeEntertainmentಏಯ್‌ ನೀನು ಫಿಲ್ಮ್‌ನಲ್ಲಿ ಹೀರೊ ಆಗಬಹುದು ಕಣೋ ಅಂತಿದ್ರು; ಸರೋಜಾದೇವಿ ಬಗ್ಗೆ ಡಿಕೆಶಿ ಭಾವುಕ

    ಏಯ್‌ ನೀನು ಫಿಲ್ಮ್‌ನಲ್ಲಿ ಹೀರೊ ಆಗಬಹುದು ಕಣೋ ಅಂತಿದ್ರು; ಸರೋಜಾದೇವಿ ಬಗ್ಗೆ ಡಿಕೆಶಿ ಭಾವುಕ

    ಬೆಂಗಳೂರು ದಕ್ಷಿಣ: ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಬಿರುದನ್ನು ಪಡೆದಿರುವ ಬಿ. ಸರೋಜಾದೇವಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

    ನಿನ್ನೆ ( ಜುಲೈ 14 ) ಬೆಂಗಳೂರಿನ ಮಲ್ಲೇಶ್ವರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ಸರೋಜಾದೇವಿ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನೆರವೇರಿತು.

    ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಾಧ್ಯಮದವರ ಜತೆ ಮಾತನಾಡಿ ಸರೋಜಾದೇವಿ ಅವರು ಎಲ್ಲ ಭಾಷೆಯಲ್ಲಿಯೂ ಅಪಾರ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ನಟಿ. ಇಂದು ಎಲ್ಲ ಭಾಷೆಯವರೂ ಅವರಿಗೆ ನಮನ ಸಲ್ಲಿಸುತ್ತಿದ್ದಾರೆ. ಅಂತಹ ಕಲಾವಿದೆ ನಮ್ಮ ಜಿಲ್ಲೆಯವರೆಂಬುದು ಹೆಮ್ಮೆಯ ವಿಚಾರ ಎಂದರು.

    ಅಲ್ಲದೇ ಸರೋಜಾದೇವಿ ಅವರ ಒಡನಾಟ 82ರಿಂದ ಇದ್ದು ತಾನು ಮೊದಲ ಬಾರಿಗೆ ಮಂತ್ರಿಯಾದಾಗಿನಿಂದಲೂ ಪರಿಚಯ ಎಂದರು. ಆರಂಭದ ದಿನಗಳಲ್ಲಿ ಸಿಕ್ಕಾಗಲೆಲ್ಲ ʼಏಯ್..‌ ನೀನು ಫಿಲ್ಮ್‌ನಲ್ಲಿ ಹೀರೊ ಆಗಬಹುದು ಕಣೋʼ ಎಂದು ಕಾಮೆಂಟ್‌ ಮಾಡುತ್ತಿದ್ದರು ಎಂದು ಡಿಕೆ ಶಿವಕುಮಾರ್‌ ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.

    ಅತಿ ಚಿಕ್ಕ ವಯಸ್ಸಿನಲ್ಲಿಯೇ ಭಾರತ ಸರ್ಕಾರದ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದುಕೊಂಡು ಕೀರ್ತಿಯನ್ನು ತಂದಿದ್ದಾರೆ ಎಂದು ಹೊಗಳಿದರು.

    ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಶರಣ ಪ್ರಕಾಶ್ ಪಟೇಲ್

    ಎಐ ಕೃಷಿ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    ಇಂಡೋನೇಷ್ಯಾದ ಡೇ-ಕೇರ್‌ನಲ್ಲಿ 53 ಮಕ್ಕಳಿಗೆ ನಡೆದ ಅಮಾನವೀಯ ದೌರ್ಜನ್ಯ: ವಿಡಿಯೋ ನೋಡಿ ಜಗತ್ತೇ ಬೆಚ್ಚಿ ಬಿದ್ದಿತು

    ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕರ್ತ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಲಿಟಲ್ ಅರೇಶಾ' ಎಂಬ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 53 ಮಕ್ಕಳನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading