ಒಂದೆಡೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯ ರೋಚಕ ಅಂತ್ಯ ಕಂಡರೆ, ಮತ್ತೊಂದೆಡೆ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯ ಸಹ ವಿಶೇಷವೆನಿಸಿಕೊಂಡಿದೆ.
ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 27 ರನ್‌ಗಳಿಗೆ ಆಲ್‌ಔಟ್ ಮಾಡುವ ಮೂಲಕ ಭಾರೀ ಮುಖಭಂಗವನ್ನುಂಟುಮಾಡಿದೆ.
ಜಮೈಕಾದ ಕಿಂಗ್‌ಸ್ಟನ್‌ನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 225 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳಿಗೆ ಆಲ್‌ಔಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 121 ರನ್ ಹಾಗೂ 82 ಲೀಡ್ ರನ್ ಸೇರಿದಂತೆ ವೆಸ್ಟ್ ಇಂಡೀಸ್‌ಗೆ 203 ರನ್‌ಗಳನ್ನು ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ವೆಸ್ಟ್ ಇಂಡೀಸ್ 14.3 ಓವರ್‌ಗಳಲ್ಲಿ ಕೇವಲ 27 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ವೆಸ್ಟ್ ಇಂಡೀಸ್ ಪರ ಮೈಕೆಲ್ ಲೂಯಿಸ್ 4 ರನ್, ಶಾಯ್ ಹೋಪ್ 2 ರನ್, ಜಸ್ಟಿನ್ ಗ್ರೀವ್ಸ್ 11 ರನ್ ಹಾಗೂ ಅಲ್ಝರಿ ಜೋಸೆಫ್ 4 ರನ್ ಗಳಿಸಿದ್ದು ಬಿಟ್ಟರೆ ಉಳಿದ ಏಳು ಆಟಗಾರರೂ ಸಹ ಡಕ್‌ಔಟ್ ಆದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 4 ಮೆಡನ್ ಸಹಿತ 6 ವಿಕೆಟ್ ಪಡೆದರೆ, ಸ್ಕಾಟ್ ಬೊಲ್ಯಾಂಡ್ 3 ವಿಕೆಟ್ ಹಾಗೂ ಜೋಶ್ ಹೇಜಲ್‌ವುಡ್ 1 ವಿಕೆಟ್ ಪಡೆದರು.
ಏಯ್ ನೀನು ಫಿಲ್ಮ್‌ನಲ್ಲಿ ಹೀರೊ ಆಗಬಹುದು ಕಣೋ ಅಂತಿದ್ರು; ಸರೋಜಾದೇವಿ ಬಗ್ಗೆ ಡಿಕೆಶಿ ಭಾವುಕ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


