Friday, May 15, 2026
spot_img
More
    spot_img
    HomeLatest newsರಾಜ್ಯ ಬಿಜೆಪಿಯಲ್ಲಿ ತಲೆದೋರಿದ ಆಂತರಿಕ ಭಿನ್ನಮತ: ಕಾರ್ಯಕರ್ತರಲ್ಲಿ ಬತ್ತುತ್ತಿರುವ ಉತ್ಸಾಹ

    ರಾಜ್ಯ ಬಿಜೆಪಿಯಲ್ಲಿ ತಲೆದೋರಿದ ಆಂತರಿಕ ಭಿನ್ನಮತ: ಕಾರ್ಯಕರ್ತರಲ್ಲಿ ಬತ್ತುತ್ತಿರುವ ಉತ್ಸಾಹ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಆಂತರಿಕ ಭಿನ್ನಮತ ಪಕ್ಷದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಗೊಂದಲ ಹಾಗೂ ಪಕ್ಷದ ರಾಜ್ಯ ನಾಯಕರ ಜೊತೆಗಿನ ಭಿನ್ನಾಭಿಪ್ರಾಯವು ಕಮಲಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ. ವಿರೋಧ ಪಕ್ಷವವಾಗಿ ಈ ಹಿಂದೆಲ್ಲಾ ಸದ್ದು ಮಾಡಿದ್ದ ಬಿಜೆಪಿ ಇದೀಗ ಸೊರಗಿ ಹೋಗುತ್ತಿದೆ. ಪಕ್ಷದ ಕಾರ್ಯಕರ್ತರಲ್ಲೂ ಉತ್ಸಾಹ ಬತ್ತುತ್ತಿದೆ.

    ವಿರೋಧ ಪಕ್ಷವಾಗಿ ಬಿಜೆಪಿ ಯಾವತ್ತೂ ಸಕ್ಸಸ್ ಎಂಬ ವಾತಾವರಣ ಇತ್ತು. ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸುವಲ್ಲಿ ಹಾಗೂ ತಂತ್ರಗಾರಿಕೆ ರೂಪಸುವಲ್ಲಿ ಬಿಜೆಪಿ ಪರಿಣಾಮಕಾರಿ ಎಂಬ ಅಭಿಪ್ರಾಯ ಇತ್ತು. ಆದರೆ ಅದು ಇದೀಗ ಇಲ್ಲವಾಗಿದೆ. ಬಿಜೆಪಿ ವಿರೋಧ ಪಕ್ಷವಾಗಿ ಸಂಪೂರ್ಣ ವಿಫಲವಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಹಲವು ಸಂದರ್ಭದಲ್ಲಿ ಹೋರಾಟ ನಡೆಸುವ ಅವಕಾಶ ಇದ್ದಾಗಲೂ ಕೈಚೆಲ್ಲಿ ಕುಳಿತುಕೊಂಡಿದೆ.

    ಬಿಜೆಪಿ ಕೇಡರ್ ಆಧಾರಿತ ಪಕ್ಷ. ಪಕ್ಷದ ನಾಯಕತ್ವ ಕೊಟ್ಟ ಸೂಚನೆಯನ್ನು ಕೇಡರ್ ಗಳು ತಳಮಟ್ಟದಲ್ಲಿ ಯಶಸ್ವಿಯಾಗಿ ಜಾರಿಗೊಳಿಸುತ್ತಾರೆ. ಆದರೆ ಇದೀಗ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಬತ್ತಿದೆ. ಪಕ್ಷದಲ್ಲಿರುವ ಗೊಂದಲಗಳು ನಮ್ಮನ್ನು ಧೃತಿಗೆಡಿಸಿದೆ. ವಿರೋಧ ಪಕ್ಷವಾಗಿ ನಾವು ವಿಫಲವಾಗುತ್ತಿದ್ದೇವೆ. ನಾಯಕರ ನಡುವಿನ ಕಚ್ಚಾಟದಲ್ಲಿ ಪಕ್ಷ ದುರ್ಬಲವಾಗುತ್ತಿದೆ. ಹೀಗೆ ಮುಂದುವರಿದರೆ ಭವಿಷ್ಯನನ್ನು ಮತ್ತಷ್ಟು ಹಿನ್ನಡೆ ಆಗುವುದು ಖಚಿತ” ಎನ್ನುತ್ತಾರೆ ನೊಂದ ಕಾರ್ಯಕರ್ತರು.

    ಬಿಜೆಪಿ ನಾಯಕರಲ್ಲೂ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿರುವ ಗೊಂದಲಗಳು ನಿರಾಸಕ್ತಿಯನ್ನು ಮೂಡಿಸಿದೆ. ಈ ಹಿಂದೆ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಇದ್ದಾಗ ಪಕ್ಷದ ಕಚೇರಿ ಸಕ್ರಿಯವಾಗಿತ್ತು. ನಿತ್ಯವೂ ಕಾರ್ಯಕರ್ತರಿಂದ ತುಂಬಿತ್ತು. ಇದೀಗ ಆಡಳಿತ ಪಕ್ಷವಾಗಿರುವುದರಿಂದ ಪಕ್ಷದ ಕಚೇರಿ ಮತ್ತಷ್ಟು ಆಕ್ಟೀವ್ ಆಗಿದೆ. ಆದರೆ ಬಿಜೆಪಿಯ ರಾಜ್ಯ ಕಚೇರಿಯಲ್ಲೇ ಉತ್ಸಾಹ ಕಾಣಿಸುತ್ತಿಲ್ಲ. ಪಕ್ಷದ ನಾಯಕರು ಕಚೇರಿಯ ಕಡೆಗೆ ಮುಖ ಮಾಡುತ್ತಿಲ್ಲ.

    ಇಷ್ಟೆಲ್ಲಾ ಪ್ರಮಾಣದಲ್ಲಿ ವಾತಾವರಣ ಕೆಟ್ಟರು ಇದಕ್ಕೆ ಪರಿಹಾರ ಕಂಡುಕೊಳ್ಳಲು ಹೈಕಮಾಂಡ್‍ಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯ ನಾಯಕರು ಇದೇ ಪ್ರಶ್ನೆಯನ್ನು ಆಂತರಿಕವಾಗಿ ಕೇಳುತ್ತಿದ್ದಾರೆ. ಬಹಿರಂಗವಾಗಿ ಅಸಮಾಧಾನಗಳ ಬಗ್ಗೆ ಹಾಗೂ ಹೈಕಮಾಂಡ್ ನಡೆಯ ಬಗ್ಗೆ ಟೀಕೆ ಮಾಡದಿದ್ದರು, ಆಂತರಿಕವಾಗಿ ಕೆಲವು ಬಿಜೆಪಿ ನಾಯಕರ ಅಸಮಾಧಾನ ಸ್ಫೋಟಗೊಳ್ಳುತ್ತಿದೆ. ಆದರೆ ಇದಕ್ಕೆ ಹೈಕಮಾಂಡ್ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುವುದು ಕುತೂಹಲ ಕೆರಳಿಸಿದೆ.

    ಧರ್ಮಸ್ಥಳ ಸರಣಿ ಕೊಲೆ: 22 ವರ್ಷಗಳ ಹಿಂದೆ ನಾಪತ್ತೆಯಾದ ಅನನ್ಯ ಭಟ್‌ ತಾಯಿಯಿಂದ ದೂರು ದಾಖಲು!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    ಇಂಡೋನೇಷ್ಯಾದ ಡೇ-ಕೇರ್‌ನಲ್ಲಿ 53 ಮಕ್ಕಳಿಗೆ ನಡೆದ ಅಮಾನವೀಯ ದೌರ್ಜನ್ಯ: ವಿಡಿಯೋ ನೋಡಿ ಜಗತ್ತೇ ಬೆಚ್ಚಿ ಬಿದ್ದಿತು

    ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕರ್ತ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಲಿಟಲ್ ಅರೇಶಾ' ಎಂಬ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 53 ಮಕ್ಕಳನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading