ಮೈಸೂರು: ಜುಲೈ.19ಕ್ಕೆ ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಸಾಧನೆ ಸಮಾವೇಶ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಸಿಎಂ ಸಿದ್ದರಾಮಯ್ಯಗೆ ಗಂಡಾಂತರ ಬಂದಾಗ ಹಿಂದುಳಿದ ವರ್ಗದ ಟ್ಯಾಗ್ ಹಾಕುತ್ತಾರೆ. ಈ ರೀತಿ ಸಮಾವೇಶ ಮಾಡುವ ಮೂಲಕ ಹೈಕಮಾಂಡ್ ನಾಯಕರಿಗೆ ಭಯ ಹುಟ್ಟಿಸುತ್ತಿದ್ದಾರೆ. ಸ್ವಾರ್ಥದ ಅಧಿಕಾರಕ್ಕೋಸ್ಕರ ರಾಜಕಾರಣ ಮಾಡಿರುವ ಏಕೈಕ ಸಿಎಂ ಸಿದ್ದರಾಮಯ್ಯ. ಸಾಧನಾ ಸಮಾವೇಶ ಮಾಡುವ ಮುನ್ನ ನಿಮ್ಮ ಸಾಧನೆ ಬಹಿರಂಗಪಡಿಸಿ. ಸಾಲ ಹೆಚ್ಚಿಸಿದ್ದೇ ನಿಮ್ಮ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸುಳ್ಳು ಹೇಳಿ ಸೈಟ್ ಪಡೆದುಕೊಂಡಿದ್ದಷ್ಟೇ ನಿಮ್ಮ ಸಾಧನೆ. ಕಾಂಗ್ರೆಸ್ ಪಕ್ಷ ಭ್ರಷ್ಟರು, ಲೂಟಿಕೋರರ ಪಾರ್ಟಿಯಾಗಿ ಪರಿವರ್ತನೆ ಆಗಿದೆ. ನಿಮ್ಮ ಪಕ್ಷದ ಅಧ್ಯಕ್ಷರು ಡ್ರಗ್ಸ್ ಪೆಡ್ಲರ್ಸ್ ಆಗಿದ್ದಾರೆ. ಕೊಲೆಗಾರರು, ಭ್ರಷ್ಟಾಚಾರರನ್ನು ಕಟ್ಟಿಕೊಂಡು ರಿಪಬ್ಲಿಕ್ ಕಲಬುರ್ಗಿ ಮಾಡಿಕೊಂಡಿದ್ದೀರಾ. ಕೊಲೆಗಡುಕರಿಗೆ ನಿಮ್ಮ ಪಕ್ಷದಲ್ಲಿ ರಕ್ಷಣೆ ಸಿಗುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರು ನಿಮ್ಮೆ ಹೆಸರು ಬರೆದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಧರ್ಮಸ್ಥಳ ಸರಣಿ ಕೊಲೆ: 22 ವರ್ಷಗಳ ಹಿಂದೆ ನಾಪತ್ತೆಯಾದ ಅನನ್ಯ ಭಟ್ ತಾಯಿಯಿಂದ ದೂರು ದಾಖಲು!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


