Monday, November 2, 2026
spot_img
More
    spot_img
    HomeLatest newsಎಸ್‌ಐಟಿ ಮುಂದೆ 13 ವರ್ಷದ ಹಿಂದಿನ ಕೇಸ್: ಧರ್ಮಸ್ಥಳಕ್ಕೆ ತೆರಳಿದ್ದ ಯುವತಿ ನಾಪತ್ತೆ, ಸಹೋದರನಿಂದ ದೂರು

    ಎಸ್‌ಐಟಿ ಮುಂದೆ 13 ವರ್ಷದ ಹಿಂದಿನ ಕೇಸ್: ಧರ್ಮಸ್ಥಳಕ್ಕೆ ತೆರಳಿದ್ದ ಯುವತಿ ನಾಪತ್ತೆ, ಸಹೋದರನಿಂದ ದೂರು

    ಇತ್ತೀಚೆಗೆ ಧರ್ಮಸ್ಥಳದ ಅರಣ್ಯದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ, 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವತಿಯೊಬ್ಬಳ ಸಹೋದರ ದೂರು ದಾಖಲಿಸಿದ್ದಾರೆ. ಈ ಘಟನೆಯು ಎಲ್ಲರ ಗಮನ ಸೆಳೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಲಮುಡೂರು ಗ್ರಾಮದ ಹೇಮಾವತಿ ಎಂಬ ಯುವತಿ 2012ರಲ್ಲಿ ಕಾಣೆಯಾಗಿದ್ದಳು. ಆಗ ಆಕೆಗೆ 17 ವರ್ಷ ವಯಸ್ಸಾಗಿತ್ತು. ಹೇಮಾವತಿ ಕಾಣೆಯಾದಾಗ ಆಕೆಯ ಸಹೋದರ ನಿತಿನ್ ದೇವಾಡಿಗ ಅವರು ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.

    ದೂರುದಾರ ನಿತಿನ್ ದೇವಾಡಿಗ ಅವರು ಹೇಳುವ ಪ್ರಕಾರ, 2012ರಲ್ಲಿ ತಮ್ಮ ತಂಗಿ ಹೇಮಾವತಿ ಮನೆ ಸಮೀಪದ ಮಹಿಳೆಯೊಬ್ಬರ ಜೊತೆ ಧರ್ಮಸ್ಥಳಕ್ಕೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದರು. ಆ ಮಹಿಳೆ ಮನೆಗೆ ಮರಳಿದರೂ ಹೇಮಾವತಿ ಮರಳಲಿಲ್ಲ. ಈ ಬಗ್ಗೆ ಆಕೆಯ ಬಳಿ ವಿಚಾರಿಸಿದಾಗ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಳು.

    ಆ ಸಮಯದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಸಿಕ್ಕರೆ ತಿಳಿಸುತ್ತೇವೆ ಎಂದು ಹೇಳಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೂರು ದಾಖಲಾತಿಗಳೂ ಈಗ ಲಭ್ಯವಿಲ್ಲ. ಆ ಮಹಿಳೆ ಸರ್ಕಾರಿ ನೌಕರಿಯಲ್ಲಿದ್ದು, ಆಕೆಯ ಹೆಸರನ್ನೂ ಪೊಲೀಸರಿಗೆ ನೀಡಿದ್ದೇನೆಂದು ನಿತಿನ್ ತಿಳಿಸಿದ್ದಾರೆ.

    ತಂಗಿ ಕಾಣೆಯಾದ ಬಳಿಕ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆಗ ಹೋರಾಡುವ ಧೈರ್ಯ ಇರಲಿಲ್ಲ, ಆದರೆ ಈಗ ನ್ಯಾಯಕ್ಕಾಗಿ ಬಂದಿದ್ದೇವೆ. ತಂಗಿಗೆ ಏನಾಗಿದೆ? ಇದ್ದಾಳೇ? ಇಲ್ಲವೇ? ಗೊತ್ತಾಗಬೇಕು ಎಂದು ನಿತಿನ್ ಮನವಿ ಮಾಡಿದ್ದಾರೆ.

    ಇತ್ತೀಚೆಗೆ ಎಸ್‌ಐಟಿ ಧರ್ಮಸ್ಥಳಕ್ಕೆ ತೆರಳಿದ ಬಳಿಕ ಕಾಣೆಯಾದವರ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳಿ ಎಂದು ಪ್ರಕಟಣೆ ನೀಡಿದ್ದರಿಂದ, ನಿತಿನ್ ತಮ್ಮ ಸಹೋದರ ನಿತೇಶ್ ದೇವಾಡಿಗರೊಂದಿಗೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ನಂತರ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಿದ್ದಾರೆ.

    ನಿವೃತ್ತಿ ವದಂತಿಗಳ ಮಧ್ಯೆ ರೋಹಿತ್ ಶರ್ಮಾ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿಕೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search