ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿಯು ಕರ್ನಾಟಕ ಪೊಲೀಸ್ ಇಲಾಖೆಗೆ ಮತ್ತೊಂದು ಗೌರವ ತಂದುಕೊಟ್ಟಿದೆ. ಪ್ರಶಸ್ತಿ ಪಡೆದ ಪ್ರಮುಖರಲ್ಲಿ ಲೋಕಾಯುಕ್ತ ಎಸ್ಪಿ ಬದ್ರಿನಾಥ್ ಮತ್ತು ಐಜಿಪಿ ಚಂದ್ರಗುಪ್ತ ಕೂಡ ಸೇರಿದ್ದಾರೆ. ಈ ಗೌರವವು ಅವರ ದಕ್ಷತೆ, ಸಮರ್ಪಣೆ ಮತ್ತು ಶ್ಲಾಘನೀಯ ಸೇವೆಗೆ ದೊರೆತ ಮಾನ್ಯತೆಯಾಗಿದೆ.
ಪ್ರಶಸ್ತಿ ಪಡೆದವರ ವಿವರ
ವಿಶಿಷ್ಟ ಸೇವಾ ಪದಕ:
ಎಸ್.ಬದ್ರಿನಾಥ್- ಎಸ್ಪಿ ಲೋಕಾಯುಕ್ತ
ಶ್ಲಾಘನೀಯ ಸೇವಾ ಪದಕ:
ಡಾ.ಚಂದ್ರಗುಪ್ತ-ಐಜಿಪಿ ಗುಪ್ತದಳ,ಕೆ.ಎಂ.ಶಾಂತರಾಜು-ಎಸ್ಪಿ ಐಎಸ್‌ಡಿ,
ಕಲಾ ಕೃಷ್ಣಸ್ವಾಮಿ-ಎಐಜಿಪಿ ಡಿಜಿಪಿ ಕಚೇರಿ,
ಡಾ। ರಾಮಕೃಷ್ಣಮುದ್ದೇಪಾಲ- ಕಮಾಂಡೆಂಟ್ ಕೆಎಸ್‌ಆರ್‌ಪಿ,
ಎನ್.ವೆಂಕಟೇಶ್- ಎಸ್ಪಿ ಸಿಐಡಿ,
ಪ್ರಕಾಶ್ ರಾಥೋಡ್- ಎಸಿಪಿ ಕೆಜಿಹಳ್ಳಿ ಉಪ ವಿಭಾಗ ಬೆಂಗಳೂರು ನಗರ,
ಜಿ.ಪ್ರವೀಣ್ ಬಾಬು- ಪಿಐ ಮಹದೇವಪುರ ಬೆಂಗಳೂರು ನಗರ,
ಬಿ.ಎಸ್.ಸತೀಶ್- ಪಿಐ ಪರಪ್ಪನ ಅಗ್ರಹಾರ ಬೆಂಗಳೂರು ನಗರ,
ಶಾಂತರಾಮ್- ಪಿಐ ನಂದಗುಡಿ ಠಾಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಎಸ್.ಎಡ್ವಿನ್ ಪ್ರದೀಪ್- ಪಿಐ ಬೆಸ್ಕಾಂ ಬೆಂಗಳೂರು,
ಜೆ.ಝಾನ್ಸಿರಾಣಿ- ಪಿಎಸ್‌ಐ ಎಸ್‌ಸಿಆರ್‌ಬಿ,
ಸುಜನ ಶೆಟ್ಟಿ- ಎಎಸ್‌ಐ ಸಿಸಿಬಿ ಮಂಗಳೂರು,
ಗುರುರಾಜ ಮಹಾದೇವಪ್ಪ ಬೂದಿಹಾಳ- ಎಆರ್‌ಎಸ್‌ಐ ಡಿಆರ್ ಗದಗ,
ಎಂ.ಜೆ.ರಾಕೇಶ್- ಎಸ್‌ಆರ್‌ಎಚ್‌ಸಿ ಕೆಎಸ್‌ಆರ್‌ಪಿ ಬೆಂಗಳೂರು,
ಶಂಶುದ್ದೀನ್- ಎಚ್‌ಸಿ ಗಣಕ ಯಂತ್ರ ವಿಭಾಗ ಕೊಪ್ಪಳ,
ವೈ.ಶಂಕರ- ಸಿಎಚ್‌ಸಿ ಐಎಸ್‌ಡಿ ಬೆಂಗಳೂರು,
ಆಲಂಕಾರ್ ರಾಕೇಶ್ -ಸಿಎಚ್‌ಸಿ ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿ,
ಎಲ್.ರವಿ- ಸಿಎಚ್‌ಸಿ ಐಎಸ್‌ಡಿ ಬೆಂಗಳೂರು.
79ನೇ ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ ನೆರವೇರಿಸಿದ ಮೋದಿ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


