ದಕ್ಷಿಣ ಕನ್ನಡ: ಮಾಸ್ಕ್‌ಮ್ಯಾನ್ ಚಿನ್ನಯ್ಯ ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ದೂರು ದಾಖಲಿಸಿದ ಆಧಾರದ ಮೇಲೆ ರಚನೆಯಾದ ಎಸ್‌ಐಟಿ ಧರ್ಮಸ್ಥಳದಲ್ಲಿ ಸತತವಾಗಿ 17 ಜಾಗಗಳಲ್ಲಿ ಉತ್ಖನನ ಕಾರ್ಯವನ್ನು ನಡೆಸಿತ್ತು.
ಈ ಪೈಕಿ ಎರಡು ಕಡೆ ಮಾತ್ರ ಮೂಳೆಗಳು ಲಭಿಸಿದ್ದವು ಎಂದು ಹೇಳಲಾಗುತ್ತಿದ್ದು, ಸದ್ಯ ಎಸ್‌ಐಟಿ ಅಧಿಕಾರಿಗಳು ಆ ಮೂಳೆಗಳ ಎಫ್‌ಎಸ್‌ಎಲ್ ವರದಿಗೆ ಕಾಯುತ್ತಿದ್ದಾರೆ.
ಹೀಗೆ ದೂರು ನೀಡಿದ್ದ ಚಿನ್ನಯ್ಯ ತೋರಿಸಿದ 17 ಸ್ಥಳಗಳಲ್ಲಿ ಉತ್ಖನನ ಮಾಡಿದ ಬಳಿಕ ಆತನನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳು ಸದ್ಯ ತನಿಖೆಯನ್ನು ಮುಂದುವರಿಸುತ್ತಿದ್ದಾರೆ.
ಇನ್ನು ಚಿನ್ನಯ್ಯ ತೋರಿಸಿದ ಸ್ಥಳಗಳಲ್ಲಿ ಉತ್ಖನನ ನಡೆಯುವಾಗ ರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು ಸ್ಥಳೀಯ ಯುಟ್ಯೂಬ್ ಚಾನೆಲ್‌ಗಳವರೆಗೆ ವರದಿ ಮಾಡಲು ಪ್ರತಿದಿನ ಹಾಜರಿರುತ್ತಿದ್ದವು. ಈ ವೇಳೆ 13ನೇ ಗುಂಡಿ ಅಗೆಯುವ ದಿನದಂದು ಮಾಸ್ಟರ್‌ಪ್ಲಾನ್ ಒಂದು ನಡೆದಿತ್ತು ಎಂದು ಯುಟ್ಯೂಬರ್ ಸುಮಂತ್ ಮಾತನಾಡಿದ್ದಾನೆ ಎನ್ನಲಾದ ಸ್ಪೋಟಕ ಆಡಿಯೊವೊಂದು ಲೀಕ್ ಆಗಿದೆ.
ಹೌದು, ಸದ್ಯ ಎಲ್ಲೆಡೆ ಭಾರೀ ವಿರೋಧ ಎದುರಿಸುತ್ತಾ ಟೀಕೆಗೀಡಾಗಿರುವ ಸುಮಂತ್ ಆ ದಿನ ನಡೆದಿದ್ದ ಯುಟ್ಯೂಬರ್‌ಗಳ ಮೇಲಿನ ಹಲ್ಲೆಯ ಕುರಿತು ತನ್ನ ಗೆಳೆಯ ಚೇತನ್ ಬಳಿ ಮಾತನಾಡಿದ್ದು, ಯುಟ್ಯೂಬರ್‌ಗಳಿಗೆ ಹಲ್ಲೆ ನಡೆಸುವ ವಿಷಯ ತನಗೆ ಬೆಳಗ್ಗೆಯೇ ಗೊತ್ತಿತ್ತು ಎಂದಿದ್ದಾನೆ.
13ನೇ ಗುಂಡಿ ಅಗೆಯುವಾಗ ಏನೂ ಸಿಕ್ಕಿರಲಿಲ್ಲ, ಏನೂ ಸಿಗುವುದೂ ಇಲ್ಲ ಎಂದು ಗೊತ್ತಿತ್ತು. ಹೀಗಾಗಿ ಆ ದಿನ 13ನೇ ಗುಂಡಿಯಲ್ಲಿ ಏನೂ ಸಿಗಲಿಲ್ಲ ಎಂದು ರೊಚ್ಚಿಗೆದ್ದು ಜನರು ಹಲ್ಲೆ ನಡೆಸಿದರು ಎಂದು ಪ್ಲಾನ್ ಆಗಿತ್ತು. ಆಗ ಅಲ್ಲಿಗೆ ತನಿಖೆ ನಿಲ್ಲಿಸುತ್ತಿದ್ದರು. ವಿಷಯವನ್ನು ಬೇರೆಡೆ ತಿರುಗಿಸುವ ಪ್ಲಾನ್ ಅದಾಗಿತ್ತು. ಆದರೆ ಆ ದಿನ 13ನೇ ಗುಂಡಿ ಅಗೆಯಲಿಲ್ಲ, ಪ್ಲಾನ್ ಮಿಸ್ ಆಯಿತು ಎಂದು ಹೇಳಿಕೊಂಡಿದ್ದಾನೆ. ಈ ಮೂಲಕ ಅಂದು ಧರ್ಮಸ್ಥಳದಲ್ಲಿ ಯುಟ್ಯೂಬರ್ಸ್ ಮೇಲೆ ನಡೆದ ಹಲ್ಲೆ ಪೂರ್ವ ನಿಯೋಜಿತ ಹಾಗೂ ಎಸ್‌ಐಟಿ ದಿಕ್ಕು ತಪ್ಪಿಸುವ ಉದ್ದೇಶವಾಗಿತ್ತು ಎಂಬುದನ್ನು ಸುಮಂತ್ ಹೇಳಿದ್ದಾನೆ.
ವಕ್ಫ್ ಮಸೂದೆಯ ಹಲವು ಬದಲಾವಣೆಗೆ ಸುಪ್ರೀಂ ಕೋರ್ಟ್ ನಕಾರ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


