Friday, September 4, 2026
spot_img
More
    spot_img
    HomeLatest newsಯುವಜನತೆಯಲ್ಲಿ ಇ-ಸಿಗರೇಟ್‌ ಬಳಕೆ ಹೆಚ್ಚಳ:WHO ವರದಿಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

    ಯುವಜನತೆಯಲ್ಲಿ ಇ-ಸಿಗರೇಟ್‌ ಬಳಕೆ ಹೆಚ್ಚಳ:WHO ವರದಿಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

    ಇತ್ತೀಚಿನ ಯುವಜನರು, ವಿಶೇಷವಾಗಿ ಬೆಂಗಳೂರು, ಮುಂಬೈ, ಹೈದರಾಬಾದ್, ಮತ್ತು ಕೋಲ್ಕತ್ತಾದಂತಹ ಪ್ರಮುಖ ನಗರಗಳಲ್ಲಿ, ಡ್ರಗ್ಸ್ ಮತ್ತು ಗಾಂಜಾದಂತಹ ಮಾದಕ ವಸ್ತುಗಳ ಜೊತೆಗೆ ಟ್ರೆಂಡಿಂಗ್‌ನಲ್ಲಿರುವ ಇ-ಸಿಗರೇಟ್‌ (ವೇಪಿಂಗ್) ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.

    Advertisement

    ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಯ ವರದಿಯ ಪ್ರಕಾರ, ಜಾಗತಿಕವಾಗಿ 13 ರಿಂದ 15 ವರ್ಷ ವಯಸ್ಸಿನ ಕನಿಷ್ಠ 15 ಮಿಲಿಯನ್ (1.5 ಕೋಟಿ) ಮಕ್ಕಳು ಇ-ಸಿಗರೇಟ್‌ಗಳನ್ನು ಬಳಸುತ್ತಿದ್ದಾರೆ.

    ಇದು ದತ್ತಾಂಶ ಲಭ್ಯವಿರುವ ದೇಶಗಳಲ್ಲಿ ವಯಸ್ಕರಿಗಿಂತ 9 ಪಟ್ಟು ಹೆಚ್ಚು ಬಳಕೆಯಾಗಿದೆ. ಒಟ್ಟಾರೆಯಾಗಿ, ವಿಶ್ವದಾದ್ಯಂತ 100 ಮಿಲಿಯನ್ (10 ಕೋಟಿ) ಕ್ಕೂ ಹೆಚ್ಚು ಜನರು ವೇಪಿಂಗ್ ಮಾಡುತ್ತಿದ್ದಾರೆ.

    ಇ ಸಿಗರೇಟ್‌ ಅಂದ್ರೆ ಏನು?

    ಇ ಸಿಗರೇಟ್ ಗಳನ್ನು ವೇಪ್ಸ್‌, ವೇಪ್‌ ಪೆನ್‌, ಹುಕ್ಕ ಪೆನ್‌ ಇ-ಸಿಗಾರ್‌, ಇ-ಪೈಪ್‌ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ಸಾಧನಗಳು E-ದ್ರವವನ್ನು ಉಪಯೋಗ ಮಾಡಿಕೊಂಡು ಏರಸಾಲ್‌ಗಳನ್ನ ಉತ್ಪತ್ತಿಮಾಡುತ್ತವೆ. E-ದ್ರವದಲ್ಲಿ ಸಾಮಾನ್ಯವಾಗಿ ತಂಬಾಕಿನಿಂದ ಉತ್ಪತ್ತಿಯಾಗುವ ನಿಕೋಟಿನ್‌ ಅಂಶ, ಪ್ರೊಪಿಲೀನ್‌, ಗ್ಲೈಕಾಲ್‌, ಗ್ಲಿಸರೀನ್‌, ಪರಿಮಳ ಸೂಸುವಂತಹ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.

    ಭಾರತದಲ್ಲಿ 2019 ರಲ್ಲಿ ಇ-ಸಿಗರೇಟ್ ಸಂಪೂರ್ಣ ನಿಷೇಧವಿದ್ದರೂ, ಆನ್‌ಲೈನ್‌ ಮತ್ತು ಅಕ್ರಮ ಮಾರ್ಗಗಳ ಮೂಲಕ ಬಳಕೆ ಹೆಚ್ಚುತ್ತಿದೆ. 2022 ರ ಸಮೀಕ್ಷೆಯ ಪ್ರಕಾರ, ದೇಶದಲ್ಲಿ 18 ರಿಂದ 30 ವರ್ಷ ವಯಸ್ಸಿನ 23% ಶಿಕ್ಷಿತರು ಇ-ಸಿಗರೇಟ್ ಬಳಸುತ್ತಿದ್ದಾರೆ.

    ಹೀಗಾಗಿ, WHO ಸಂಸ್ಥೆಯು ತಂಬಾಕು ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ಮತ್ತು ಇ-ಸಿಗರೇಟ್‌ಗಳಂತಹ ಹೊಸ ನಿಕೋಟಿನ್ ಉತ್ಪನ್ನಗಳ ನಿಯಂತ್ರಣವನ್ನು ಬಿಗಿಗೊಳಿಸಲು ಕರೆ ನೀಡಿದೆ.ದೇಶದ ಶೇ.8 ರಷ್ಟು ಜನ ಮಾತ್ರ ದಿನನಿತ್ಯ ಇ-ಸಿಗರೇಟ್‌ ಬಳಕೆ ಮಾಡ್ತಿದ್ದಾರೆ. ಈ ಪ್ರಮಾಣ 2025ರಲ್ಲಿ ಬಹಳಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

    ಇನ್ವೆಂಟ್‌ವುಡ್ ಬಿಡುಗಡೆ ಮಾಡಿದ ಸೂಪರ್‌ವುಡ್: ಉಕ್ಕಿಗಿಂತ 10 ಪಟ್ಟು ಬಲಿಷ್ಠ, 6 ಪಟ್ಟು ಹಗುರ!

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading