ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಅಸಹಜ ಸಾವುಗಳು ನಡೆದಿವೆ ಎಂದು ದೂರು ಕೇಳಿಬಂದ ಹಿನ್ನೆಲೆಯಲ್ಲಿ ರಚನೆಯಾದ ಎಸ್‌ಐಟಿ ಸದ್ಯ ತನ್ನ ತನಿಖೆಯನ್ನು ಮುಂದುವರಿಸಿದ್ದು, ಧರ್ಮಸ್ಥಳ ಗ್ರಾಮ ಪಂಚಾಯತ್ ಕಡೆಯಿಂದ ಹೂಳಲ್ಪಟ್ಟ ಶವಗಳ ಮಾಹಿತಿಯನ್ನು ಕಲೆಹಾಕುತ್ತಿದೆ.
ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಗ್ರಾಮ ಪಂಚಾಯತ್ ಸಿಬ್ಬಂದಿಗಳನ್ನೂ ಸಹ ಕರೆದು ವಿಚಾರಣೆಗೆ ಒಳಪಡಿಸಿತ್ತು ಹಾಗೂ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಚಾಲಕರನ್ನೂ ಸಹ ವಿಚಾರಣೆ ಮಾಡಿತ್ತು.
ಹೀಗೆ ಒಂದೆಡೆ ಧರ್ಮಸ್ಥಳದಲ್ಲಿ ಎಸ್‌ಐಟಿ ಅಧಿಕಾರಿಗಳು ಅಸಹಜ ಸಾವುಗಳಿಗೆ ಕಾರಣ ಯಾರೆಂಬುದನ್ನು ಬೆನ್ನಟ್ಟುತ್ತಿದ್ದರೆ ಮತ್ತೊಂದೆಡೆ ಧರ್ಮಸ್ಥಳದಲ್ಲಿ ನಡೆದ ಸಾವುಗಳ ಕುರಿತು ಅನುಮಾನ ಹುಟ್ಟಿಸುವ ಕೆಲ ವರದಿಗಳನ್ನು ಬೆಂಗಳೂರು ಪೋಸ್ಟ್ ಡಾಟ್ ಕಾಮ್ ಪ್ರಕಟಿಸಿದೆ.
ಈ ವರದಿಯ ಪ್ರಕಾರ ಧರ್ಮಸ್ಥಳದ ಶಾಂತಿವನ ಬಸ್ ತಂಗುದಾಣದ ಪಕ್ಕ ಸಿಕ್ಕ 65 ವರ್ಷದ ಪುರುಷನ ಮೃತದೇಹವನ್ನು ಬರೋಬ್ಬರಿ 41 ದಿನಗಳ ಕಾಲ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಶಿತಲೀಕರಣ ಘಟಕದಲ್ಲಿ ಇಡಲಾಗಿತ್ತು ಎನ್ನಲಾಗಿದೆ.
2016ರ ಏಪ್ರಿಲ್ 1ರಂದು ಸಿಕ್ಕ ಶವವನ್ನು ಮೇ 11ರವರೆಗೂ ಆಸ್ಪತ್ರೆಯಲ್ಲಿಯೇ ಇರಿಸಲಾಗಿದ್ದು, ಆ ದಿನ ಧರ್ಮಸ್ಥಳ ಪೊಲೀಸರು ಶವವನ್ನು ಗುರುತಿಸಲು ಯಾರೂ ಬಾರದ ಕಾರಣ ಪಂಚಾಯತ್‌ನವರೇ ಅಂತ್ಯ ಸಂಸ್ಕಾರವನ್ನು ನೆರವೇರಿಸಬೇಕೆಂದು ಮನವಿ ಮಾಡಿ ಪತ್ರ ಬರೆದಿದೆ. ಈ ಪತ್ರದಲ್ಲಿ ದಿನಾಂಕಗಳನ್ನು ಉಲ್ಲೇಖಿಸಲಾಗಿದೆ.
ಈ ವರದಿ ಹಾಗೂ ಪತ್ರಗಳನ್ನು ನೋಡಿದ ಎಲ್ಲರಿಗೂ ಒಂದು ಶವವನ್ನು 41 ದಿನಗಳ ಕಾಲ ಆಸ್ಪತ್ರೆಯಲ್ಲಿ ಇಡುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಮೂಡಿದೆ. ಬೆಂಗಳೂರು ಪೋಸ್ಟ್ ಪುರುಷನ ಶವವನ್ನು 41 ದಿನಗಳ ಕಾಲ ಇಟ್ಟುಕೊಳ್ಳಲು ಅನುಮತಿ ನೀಡಿದ್ದ ಧರ್ಮಸ್ಥಳ ಪೊಲೀಸರು ಮಹಿಳೆಯ ಶವ ಸಿಕ್ಕಾಗ ಒಂದೇ ದಿನದಲ್ಲಿ ಮಣ್ಣು ಮಾಡಿದ್ದೇಕೆ ಎಂದು ಅನುಮಾನ ಹೊರಹಾಕಿದೆ.
1200 ಚದರಡಿಯ ಮನೆಗಳಿಗೆ ‘ಓಸಿ’ ವಿನಾಯಿತಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


