ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಲುವಾಗಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಎಲ್ಲ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಹಾಗೂ ಕೈಬಿಡುವ ಆಟಗಾರರ ಪಟ್ಟಿಯನ್ನು ನೀಡಿ ಎಂದು ಬಿಸಿಸಿಐ ಆದೇಶ ಹೊರಡಿಸಿತ್ತು.
ಇಂದು ( ನವೆಂಬರ್ 15 ) ಗಡುವಿನ ದಿನಾಂಕವಾಗಿದ್ದು, ಎಲ್ಲ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಪಟ್ಟಿಯನ್ನು ಬಹಿರಂಗಪಡಿಸಿವೆ. ಈ ಪ್ರಕ್ರಿಯೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಎಲ್ಲರ ಗಮನ ಸೆಳೆದಿದೆ. ಕಳೆದ ಆವೃತ್ತಿಯಲ್ಲಿ ತಾವೇ ಕೋಟಿ ಕೋಟಿ ಸುರಿದು ಉಳಿಸಿಕೊಂಡಿದ್ದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅಂತಹ ಆಟಗಾರರನ್ನು ಕೈಬಿಟ್ಟಿದೆ.
ಅದರಲ್ಲೂ ತಂಡದ ಪರ ಹಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟಿ20 ಸ್ಪೆಷಲಿಸ್ಟ್ ಆಂಡ್ರೆ ರಸೆಲ್‌ರನ್ನು ಕೈಬಿಟ್ಟಿದ್ದು, ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದು, ಕಳೆದ ಆವೃತ್ತಿಯಲ್ಲಿ ನೆಲಕಚ್ಚಿದ 23 ಕೋಟಿಯ ಆಟಗಾರ ವೆಂಕಟೇಶ್ ಐಯ್ಯರ್‌ನನ್ನೂ ಸಹ ಹೊರಗಿಟ್ಟಿದೆ. ಕೆಕೆಆರ್ ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಸಂಪೂರ್ಣ ಪಟ್ಟಿ ಮುಂದಿದೆ.
ಕೆಕೆಆರ್ ಉಳಿಸಿಕೊಂಡ ಆಟಗಾರರ ಪಟ್ಟಿ: ಅಜಿಂಕ್ಯ ರಹಾನೆ, ಅಂಗ್‌ಕೃಷ್ ರಘುವಂಶಿ, ಅನುಕುಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್‌ಮನ್ ಪೊವೆಲ್, ಸುನಿಲ್ ನರೇನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ
ಕೆಕೆಆರ್ ಕೈಬಿಟ್ಟ ಆಟಗಾರರು: ಅನ್ರಿಚ್ ನಾರ್ಕಿಯಾ, ಆಂಡ್ರೆ ರಸೆಲ್, ಕ್ವಿಂಟನ್ ಡಿ ಕಾಕ್, ಮೊಯೀನ್ ಅಲಿ, ರಹಮಾನುಲ್ಲಾ ಗುರ್ಬಾಜ್, ಸ್ಪೆನ್ಸರ್ ಜಾನ್ಸನ್, ವೆಂಕಟೇಶ್ ಅಯ್ಯರ್, ಲುವ್ನಿತ್ ಸಿಸೋಡಿಯಾ, ಚೇತನ್ ಸಕರಿಯಾ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


