ಡಿಸೆಂಬರ್ ತಿಂಗಳ ಆಗಮನವಾದಾಗಿನಿಂದ ಚಂದನವನದಲ್ಲಿ ಸ್ಟಾರ್ ಸಿನಿಮಾಗಳ ಅಬ್ಬರ ಜೋರಾಗಿದೆ. ಇದೊಂದೇ ತಿಂಗಳು ಒಟ್ಟು ಮೂರು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಮೊದಲಿಗೆ ಕಳೆದ ವಾರವಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಚಿತ್ರ ಬಿಡುಗಡೆಯಾಗಿದ್ದು, 25ರಂದು ಕಿಚ್ಚ ಸುದೀಪ್ ನಟನೆಯ ಮಾರ್ಕ್ ಹಾಗೂ ಶಿವರಾಜ್‌ಕುಮಾರ್, ಉಪೇಂದ್ರ ನಟನೆಯ 45 ಚಿತ್ರಗಳು ಬೆಳ್ಳಿತೆರೆಗೆ ಅಪ್ಪಳಿಸಲಿವೆ.
ಡಿಸೆಂಬರ್ 5ರಂದು ಡೆವಿಲ್ ಚಿತ್ರದ ಟ್ರೈಲರ್ ಬಿಡುಗಡೆಯಾದರೆ, ಡಿಸೆಂಬರ್ 7ರಂದು ಮಾರ್ಕ್ ಟ್ರೈಲರ್ ಬಿಡುಗಡೆಯಾಗಿತ್ತು. ಡೆವಿಲ್ ಚಿತ್ರದ ಟ್ರೈಲರ್ 24 ಗಂಟೆಗಳಲ್ಲಿ 6.3 ಮಿಲಿಯನ್ ವ್ಯೂಸ್ ಪಡೆದುಕೊಂಡಿತ್ತು. ಬಳಿಕ ಬಿಡುಗಡೆಯಾದ ಮಾರ್ಕ್ ಟ್ರೈಲರ್ ಕೇವಲ 10 ಗಂಟೆಗಳಲ್ಲಿ ಡೆವಿಲ್ 24 ಗಂಟೆಗಳಲ್ಲಿ ಪಡೆದುಕೊಂಡಿದ್ದ ವೀಕ್ಷಣೆಗಳನ್ನು ಹಿಂದಿಕ್ಕಿತ್ತು.
ಹೀಗೆ ಕೇವಲ ಹತ್ತೇ ಗಂಟೆಯಲ್ಲಿ ಮಾರ್ಕ್ ಟ್ರೈಲರ್ ಏಳು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದನ್ನು ಕಂಡ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫೇಕ್, ಪೇಯ್ಡ್ ವ್ಯೂಸ್, ಬಾಟ್ಸ್ ಬಳಸಿದ್ದಾರೆ ಎಂದು ಹೀನಾಯವಾಗಿ ಟ್ರೋಲ್ ಮಾಡಲಾರಂಭಿಸಿದರು.
ಈ ಕುರಿತು ಇದೀಗ ಸ್ವತಃ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ನಕಲಿ ವೀಕ್ಷಣೆ ಎಂದವರಿಗೆ ಕೌಂಟರ್ ಕೊಟ್ಟಿದ್ದಾರೆ. ರಿಪಬ್ಲಿಕ್ ಟಿವಿ ಸಂದರ್ಶನದಲ್ಲಿ ನಿರೂಪಕಿ ಈ ಕುರಿತು ಪ್ರಶ್ನೆ ಕೇಳಿದ್ದು, ಸುದೀಪ್ ‘ಯಾರು ಯಾರು ಈ ಪ್ರಶ್ನೆಯನ್ನು ಎತ್ತುತ್ತಾರಲ್ಲ ಅವರು ಇದನ್ನು ಮಾಡಿರಬೇಕೇನೊ ಅದಕ್ಕೆ ನಮ್ಮ ಮೇಲೆ ಅನುಮಾನಪಡುತ್ತಿದ್ದಾರೆ. ಕಳ್ಳನಿಗೆ ತಾನೇ ನೋಡಿದವರೆಲ್ಲ ಕಳ್ಳರ ಹಾಗೆ ಕಾಣಿಸುವುದು. ನೋಡಿದವರಿಗೆ ಇದು ಅಷ್ಟು ಫೇಕ್ ಎಂದರೆ ಅವರಿಗೆ ಅದೇ ಬೇಕಾಗಿದೆ ಎಂದರ್ಥ. ದುಡ್ಡು ಕೊಟ್ಟು ಮಾಡಿಸಬೇಕು ಎನ್ನುವುದಾದರೆ ಭಗವಂತ ಇನ್ನೂ ಸ್ವಲ್ಪ ಜಾಸ್ತಿನೇ ದುಡ್ಡು ಕೊಟ್ಟಿದ್ದಾನಲ್ಲ. ಹಾಗಿದ್ದ ಮೇಲೆ ಇನ್ನೂ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳಬಹುದಿತ್ತಲ್ಲ. ಅಷ್ಟು ವೀಕ್ಷಣೆ ಯಾಕೆ ಎಂದರೆ ಅಷ್ಟು ಜನ ನೋಡಿದ್ದಾರೆ. ಇದನ್ನು ಗತ್ತು ಗಾಂಭೀರ್ಯದಲ್ಲಿ ಹೇಳುತ್ತಿದ್ದೇನೆ, ಅಹಂನಿಂದಲ್ಲ’ ಎಂದು ಹೇಳಿದ್ದಾರೆ.
ಗೋಲ್ಡನ್ ಪ್ಲೇ ಬಟನ್ ಸಿಕ್ಕರೆ ಯುಟ್ಯೂಬರ್ಸ್‌ಗೆ ಸಿಗುವ ಆದಾಯ ಎಷ್ಟು ಗೊತ್ತೇ? ಸಂಪೂರ್ಣ ವಿವರ ಇಲ್ಲಿದೆ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


