ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ಕೊಹ್ಲಿ ನಿವೃತ್ತಿ ಯಾವಾಗ ಎಂಬ ಚರ್ಚೆಗಳು ಆರಂಭಗೊಂಡಿದೆ. ಇತರೆ ಆಟಗಾರರ ಉತ್ತಮ ಫಾರ್ಮ್‌ಗಿಂತಲೂ ಒಳ್ಳೆಯ ಫಾರ್ಮ್‌ನಲ್ಲಿದ್ದರೂ ಕೊಹ್ಲಿ ಸತತವಾಗಿ ಶತಕ ಬಾರಿಸದೇ ಇದ್ದಾಗಲೆಲ್ಲ ಈ ನಿವೃತ್ತಿ ಕುರಿತಾದ ಚರ್ಚೆಗಳು ಕಾಮನ್.
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಐಸಿಸಿ ಟೀಮ್ ಆಫ್ ದ ಟೂರ್ನಮೆಂಟ್‌ನಲ್ಲೂ ಸಹ ಸ್ಥಾನ ಪಡೆದುಕೊಂಡ ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಮುಕ್ತಾಯವಾದ ನಂತರ ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.
ಆದರೆ ಕೊಹ್ಲಿ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಆಡಲಿದ್ದಾರೆ ಎಂಬ ಸುದ್ದಿ ಬಳಿಕ ಹೊರಬಿತ್ತು. ಆದರೆ ಇದೀಗ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯ ಸುಳಿವು ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ತೋರಿದ ಕೊಹ್ಲಿ ಸದ್ಯ ಆ ಸರಣಿಯ ಪ್ರದರ್ಶನದ ಕುರಿತು ಮಾತನಾಡಿದ್ದು, ಟೆಸ್ಟ್ ಕ್ರಿಕೆಟ್ ನಿವತ್ತಿಯ ಸುಳಿವು ನೀಡಿದ್ದಾರೆ.
ನಿರಾಸೆಯ ಕುರಿತಾಗಿ ಮಾತನಾಡಿದ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೆ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿ ಅತಿ ನಿರಾಸೆಯುಂಟುಮಾಡಿತು. ಇದಕ್ಕೂ ಮುನ್ನ 2014ರ ಇಂಗ್ಲೆಂಡ್ ಪ್ರವಾಸ ಸಹ ಇದೇ ರೀತಿ ನಿರಾಸೆಯುಂಟುಮಾಡಿತ್ತು. ಆಸ್ಟ್ರೇಲಿಯಾ ವಿರುದ್ಧ ಆದ ತಪ್ಪನ್ನು ತಿದ್ದಿಕೊಳ್ಳಲು ನಾನು ಮತ್ತೊಂದು ಆಸ್ಟ್ರೇಲಿಯಾ ಪ್ರವಾಸ ಮಾಡುವುದು ಅನುಮಾನ’ ಎಂದು ಹೇಳಿದರು. ಈ ಮೂಲಕ ಮತ್ತೊಂದು ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಮುನ್ನವೇ ಟೆಸ್ಟ್ ಕ್ರಿಕೆಟ್ ಆವೃತ್ತಿಗೆ ವಿದಾಯ ಘೋಷಿಸುವ ಸುಳಿವು ನೀಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


