ಮೊನ್ನೆಯಷ್ಟೇ ದೆಹಲಿ ವಿಶ್ವಿವಿದ್ಯಾನಿಲಯದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೆಹಲಿ ಯೂನಿವರ್ಸಿಟಿಯಲ್ಲಿ ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲಾ ಎಂಬುವವರು ತಮ್ಮ ಕೈನಿಂದ ಸಗಣಿ ತೆಗೆದುಕೊಂಡು ತರಗತಿಯೊಂದರ ಗೋಡೆಗಳಿಗೆ ಲೇಪಿಸಿ ಗೋಡೆಗಳಿಗೆ ಸಗಣಿ ಹಚ್ಚಿದರೆ ತರಗತಿ ಬೇಸಿಗೆಯಲ್ಲೂ ತಂಪಾಗಿರಲಿದೆ ಎಂದು ಉಪದೇಶ ಮಾಡಿದ್ದರು.
ಪ್ರಾಂಶುಪಾಲೆಯ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಇದನ್ನು ತೀವ್ರವಾಗಿ ಖಂಡಿಸಿದರೆ, ಇನ್ನೂ ಕೆಲವರು ಇದು ಪ್ರಾಚೀನ ಉಪಾಯ, ಇದರಿಂದ ಆರೋಗ್ಯಕ್ಕೂ ಸಹ ಒಳ್ಳೆಯದಾಗುತ್ತದೆ ಎಂದು ಎಸಿ ಹಾಗೂ ಫ್ಯಾನ್ ಗಾಳಿಯಡಿ ಕುಳಿತು ಉದ್ದುದ್ದ ಕಾಮೆಂಟ್ ಹಾಕಿದ್ದರು.
ಇನ್ನು ವಿಡಿಯೊ ವೈರಲ್ ಆಗುತ್ತಿದ್ದಂತೆ ಅದಕ್ಕೆ ಸಂಶೋಧನೆಯ ಟ್ಯಾಗ್ ಕೊಟ್ಟ ಪ್ರಾಂಶುಪಾಲೆ ವಾರದಲ್ಲಿ ಇದರ ವರದಿ ನೀಡುತ್ತೇನೆ ಎಂದಿದ್ದರು. ಸದ್ಯ ಪ್ರಾಂಶುಪಾಲೆಯ ಈ ನಡೆಗೆ ವಿದ್ಯಾರ್ಥಿಗಳು ಅವರದ್ದೇ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಪ್ರಾಂಶುಪಾಲೆ ರೀತಿಯೇ ಹಸುವಿನ ಸಗಣಿ ತೆಗೆದುಕೊಂಡು ಹೋಗಿ ಅವರ ಕೊಠಡಿಯ ಗೋಡೆಗಳಿಗೆ ಲೇಪನ ಮಾಡಿದ್ದಾರೆ. ಲೇಪನ ಮಾಡಿ ಇವಾಗ ನಿಮ್ಮ ಕೊಠಡಿಯೂ ತಂಪಾಗಿರುತ್ತೆ, ಇದು ಸಂಶೋಧನೆ ಮೇಡಂ ಎಂದು ಗುರುವಿಗೆ ತಿರುಮಂತ್ರ ಹೊಡೆದಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಲೇಜಿನ ಗೋಡೆಗೆ ಸಗಣಿ ಬಳಿಯುವಾಗ ಇದ್ದ ಜೋಶ್ ಎಲ್ಲ ಹೋಗಿ ವಿದ್ಯಾರ್ಥಿಗಳ ನಡೆ ಕಂಡು ತಬ್ಬಿಬ್ಬಾಗಿ ನಿಂತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


