Tuesday, November 3, 2026
spot_img
More
    spot_img
    HomeLatest newsತುಮಕೂರು: ಶಾಲೆಯಲ್ಲಿ ಕುಳಿತುಕೊಳ್ಳುವ ವಿಷಯಕ್ಕೆ ಜಗಳ; ಸಹಪಾಠಿ ಥಳಿತದಿಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು?

    ತುಮಕೂರು: ಶಾಲೆಯಲ್ಲಿ ಕುಳಿತುಕೊಳ್ಳುವ ವಿಷಯಕ್ಕೆ ಜಗಳ; ಸಹಪಾಠಿ ಥಳಿತದಿಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು?

    ತುಮಕೂರು: ಜಿಲ್ಲೆಯ ಕರೀಕೆರೆ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಯೊಬ್ಬನ ಸಾವು ಅನುಮಾನ ಮೂಡಿಸಿದೆ.

    ಚೇತನ್ ಕುಮಾರ್ ಎಂಬ ವಿದ್ಯಾರ್ಥಿ ವಿಜ್ಞಾನ ವಿಷಯದ ಪರೀಕ್ಷೆಗೆ ಎರಡು ದಿನಗಳ ಅಂತರವಿದ್ದಾಗ ಹೆಚ್ಚುವರಿ ತರಗತಿಗೆಂದು ಶಾಲೆಗೆ ತೆರಳಿದ್ದ. ಈ ವೇಳೆ ಅಲ್ಲಿನ ಸಹಪಾಠಿಗಳ ಜತೆ ಕುಳಿತುಕೊಳ್ಳುವ ವಿಷಯಕ್ಕೆ ಜಗಳ ನಡೆದಿದೆ. ಬಳಿಕ ಶಾಲಾ ಸಿಬ್ಬಂದಿ ಚೇತನ್ ಕುಮಾರ್ ಹಾಗೂ ರಿಜ್ವಾನ್ ಎಂಬ ಮತ್ತೋರ್ವ ವಿದ್ಯಾರ್ಥಿಯ ಪೋಷಕರನ್ನು ಕರೆದು ಚಿಕ್ಕಮಕ್ಕಳ ಕಿತ್ತಾಟ ಎಂದು ಸಮಾಧಾನ ಮಾಡಿಸಿ ಕಳುಹಿಸಿದ್ದರು.

    ಆದರೆ ಚೇತನ್ ತಾಯಿ ಗಂಗಮ್ಮ ಹೇಳುವ ಪ್ರಕಾರ ಚೇತನ್ ಸಾಯುವ ಮುನ್ನ ಇದ್ದಕ್ಕಿದ್ದಂತೆ ತೀವ್ರ ಎದೆ ನೋವು ಎನ್ನುತ್ತಿದ್ದ ಎಂದು ತಿಳಿಸಿದ್ದಾರೆ. ಅಲ್ಲದೇ
    ಶಾಲೆಯಲ್ಲಿ ಕುಳಿತುಕೊಳ್ಳುವ ವಿಷಯಕ್ಕೆ ಜಗಳವಾದಾಗ ರಿಜ್ವಾನ್ ತನ್ನ ಮೇಲೆ ಹಲ್ಲೆ ಮಾಡಿದ್ದ ಎಂಬ ವಿಷಯವನ್ನೂ ಸಹ ಚೇತನ್ ಬಿಚ್ಚಿಟ್ಟಿದ್ದನಂತೆ. ಕಾಲಿಗೆ ಪೆಟ್ಟು ಬಿದ್ದು ಊದಿಕೊಂಡಿತ್ತು, ಹೀಗಾಗಿ ಎದೆ ನೋವಿಗೂ ಸಹ ಜಗಳವಾದಾಗ ಆದ ಥಳಿತವೇ ಕಾರಣ ಎಂದು ಅವರು ಆರೋಪಿಸುತ್ತಿದ್ದಾರೆ. ಪರೀಕ್ಷೆ ಮುಗಿದ ಮೇಲೆ ನಿನ್ನ ನೋಡಿಕೊಳ್ತೇನೆ ಎಂದೂ ಸಹ ರಿಜ್ವಾನ್ ಅವಾಜ್ ಹಾಕಿದ್ದ ಎಂದು ತನ್ನ ಸಾಯವ ಮುನ್ನ ತಿಳಿಸಿದ್ದಾಗಿ ತಾಯಿ ಗಂಗಮ್ಮ ಹೇಳಿದ್ದಾರೆ. ಅಲ್ಲದೇ ಈ ವಿಚಾರವಾಗಿ ದೂರು ನೀಡಲು ಹೋದರೂ ಸಹ ಪೊಲೀಸರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search