ಬೆಂಗಳೂರು: ಭವಿಷ್ಯ ಹೇಳ್ತೀನಿ ಎಂದು ಖ್ಯಾತಿ ಪಡೆದ ಗುರೂಜಿಗಳ ಪೈಕಿ ಹಲವರ ಹೆಸರುಗಳು ಅಶ್ಲೀಲ ವಿಡಿಯೊ, ಮೋಸ, ಲೈಂಗಿಕ ಕಿರುಕುಳ ಎಂಬ ಆರೋಪಗಳೊಂದಿಗೆ ಅನೇಕ ಬಾರಿ ತಳುಕಿಹಾಕಿಕೊಂಡಿದೆ.
ಅದೇ ರೀತಿ ಇದೀಗ ಆನಂದ್ ಗುರೂಜಿ ಎಂಬಾತನ ಹೆಸರೂ ಸಹ ಇದೇ ಕರ್ಮಕಾಂಡದ ಜೊತೆ ಕೇಳಿಬಂದಿದೆ. ಅಂದಹಾಗೆ ಇಲ್ಲಿ ಸ್ವತಃ ಆನಂದ್ ಗುರೂಜಿಯೇ ನನ್ನ ವಿರುದ್ಧ ಅಶ್ಲೀಲ ವಿಡಿಯೊ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಸುದ್ದಿ ವಾಹಿನಿಯ ನಿರೂಪಕಿ ದಿವ್ಯಾ ವಸಂತ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ದಿವ್ಯಾ ವಸಂತ ಅಶ್ಲೀಲ ವಿಡಿಯೊ ಇದೆ ಎಂದು ಹೆದರಿಸುತ್ತಿದ್ದಾರೆ ಎಂದು ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಬಹುತೇಕ ಎಲ್ಲ ಸುದ್ದಿ ವಾಹಿನಿಗಳಲ್ಲೂ ಸಹ ಈ ಕುರಿತು ಬ್ರೇಕಿಂಗ್ ನ್ಯೂಸ್ ಹರಿದಾಡಿತ್ತು. ಆದರೆ ಈ ಕುರಿತು ವಿಡಿಯೊ ಮಾಡಿರುವ ದಿವ್ಯಾ ವಸಂತ ಈ ಎಲ್ಲ ಆರೋಪಗಳೂ ಸಹ ಸುಳ್ಳು ಎಂದು ತಳ್ಳಿ ಹಾಕಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವಿಡಿಯೊ ಹಂಚಿಕೊಂಡಿರುವ ದಿವ್ಯಾ ವಸಂತ ಸುದ್ದಿ ಮಾಡಿದ ಸುದ್ದಿ ವಾಹಿನಿಗಳು ಹಾಗೂ ದೂರು ಕೊಟ್ಟ ಆನಂದ್ ಗುರೂಜಿ ಇಬ್ಬರನ್ನೂ ಸಾಕ್ಷಿ ಇದೆಯಾ ಎಂದು ಕೇಳಿ ಸವಾಲೆಸೆದಿದ್ದಾರೆ. ಸಾಕ್ಷಿ ಇಲ್ಲದೇ ಬಾಯಿಗೆ ಬಂದ ಹಾಗೆ ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ.
ಇನ್ನು ಈ ಕುರಿತು ತಾನು ಓರ್ವ ನಿರೂಪಕಿಯಾಗಿ ಸುದ್ದಿ ಮಾಡಿದ್ದೆನಷ್ಟೆ. ಈ ದೂರು ಏಪ್ರಿಲ್ 18ರಂದೇ ದಾಖಲಾಗಿತ್ತು. ಇಷ್ಟು ದಿನಗಳ ಬಳಿಕ ದೂರು ನೀಡಿರುವುದನ್ನು ಈಗ ಸುದ್ದಿ ಮಾಡುವುದು ಷಡ್ಯಂತ್ರ ಎಂದು ದಿವ್ಯಾ ವಸಂತ ಆರೋಪಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


