Wednesday, September 2, 2026
spot_img
More
    spot_img
    HomeEntertainmentಎಕ್ಕ ಡೈಲಾಗ್‌ ಹೇಳಲು ಮುಂದಾದಾಗ ಕೇಳಿಬಂತು ʼಡಿ ಬಾಸ್‌ʼ ಕೂಗು: ಯುವ ಸಖತ್‌ ರಿಪ್ಲೈ; ವಿಡಿಯೊ

    ಎಕ್ಕ ಡೈಲಾಗ್‌ ಹೇಳಲು ಮುಂದಾದಾಗ ಕೇಳಿಬಂತು ʼಡಿ ಬಾಸ್‌ʼ ಕೂಗು: ಯುವ ಸಖತ್‌ ರಿಪ್ಲೈ; ವಿಡಿಯೊ

    ಯುವ ರಾಜ್‌ಕುಮಾರ್‌ ನಟನೆಯ ಎರಡನೇ ಚಿತ್ರ ಎಕ್ಕ ಇದೇ ಶುಕ್ರವಾರ ( ಜುಲೈ 18 ) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರತ್ನನ್‌ ಪ್ರಪಂಚ ರೀತಿಯ ಕ್ಲಾಸ್‌ ಚಿತ್ರವನ್ನು ನಿರ್ದೇಶನ ಮಾಡಿ ಗೆದ್ದಿದ್ದ ನಿರ್ದೇಶಕ ರೋಹಿತ್‌ ಪದಕಿ ನಿರ್ದೇಶನದ ಎರಡನೇ ಚಿತ್ರವೂ ಸಹ ಆಗಿರುವ ಎಕ್ಕ ಮೇಲೆ ಭಾರೀ ನಿರೀಕ್ಷೆಯಿದೆ.

    Advertisement

    ಈಗಾಗಲೇ ಹಾಡುಗಳ ಮೂಲಕ ಭರ್ಜರಿ ಸಿಕ್ಸರ್‌ ಹೊಡೆದಿರುವ ಎಕ್ಕ ಥಿಯೇಟರ್‌ನಲ್ಲಿ ಭರ್ಜರಿ ಇನ್ನಿಂಗ್ಸ್‌ ಆಡಲಿದೆಯಾ ಎಂಬುದನ್ನು ನೋಡಬೇಕಿದೆ. ಇತ್ತೀಚೆಗಷ್ಟೆ ಬಿಡುಗಡೆಯಾದ ಟ್ರೈಲರ್‌ ಪಕ್ಕಾ ಕಮರ್ಷಿಯಲ್‌ ಚಿತ್ರ ಎಂಬ ಸುಳಿವನ್ನು ನೀಡಿದ್ದು, ಸಿನಿ ರಸಿಕರ ಗಮನ ಸೆಳೆದಿದೆ.

    ಹೀಗೆ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಸಮಯದಲ್ಲಿ ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದ್ದು, ನಿನ್ನೆ ( ಜುಲೈ 15 ) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿತ್ತು.

    ಈ ವೇಳೆ ನಟ ಯುವ ರಾಜ್‌ಕುಮಾರ್‌ ಎಕ್ಕ ಚಿತ್ರದ ಡೈಲಾಗ್‌ ಹೇಳಲು ಮುಂದಾದಾಗ ಪ್ರೇಕ್ಷಕರ ಕಡೆಯಿಂದ ಡಿ ಬಾಸ್‌ ಎಂಬ ಕೂಗು ಕೇಳಿಬಂತು. ಕೂಡಲೇ ಡೈಲಾಗ್‌ ನಿಲ್ಲಿಸಿ ಡಿಬಾಸ್‌ ಕೂಗನ್ನು ಆಲಿಸಿದ ಯುವ ಇನ್ನೂ ಜೋರಾಗಿ ಕೂಗಿ ಎಂದು ಕೈಸನ್ನೆ ಮೂಲಕ ತಿಳಿಸಿದರು. ಇದರ ಬೆನ್ನಲ್ಲೇ ಮತ್ತೊಂದೆಡೆ ಅಪ್ಪು.. ಅಪ್ಪು… ಎಂದು ಕಿರುಚಲಾರಂಭಿಸಿದರು. ಇದಕ್ಕೂ ಸಹ ಯುವ ಬೆಂಬಲ ಸೂಚಿಸಿದರು.

    ಬಳಿಕ ಇಲ್ಲಿ ಎಲ್ಲ ನಟರ ಅಭಿಮಾನಿಗಳೂ ಬಂದಿರುವುದು ಖುಷಿಯ ವಿಚಾರ. ಎಲ್ಲ ಚಿತ್ರಗಳನ್ನೂ ಬೆಂಬಲಿಸಿ, ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಸಖತ್‌ ರಿಪ್ಲೈ ಕೊಟ್ಟು ಫ್ಯಾನ್‌ವಾರ್‌ ಸಂದರ್ಭವನ್ನು ಜಾಣ್ಮೆಯಿಂದ ನಿಭಾಯಿಸಿದರು.

    10ನೇ ತರಗತಿ ಪಾಸಾದವರಿಗೆ ಕೆಲಸ; BHELನಲ್ಲಿ 515 ಗ್ರೇಡ್-IV ಹುದ್ದೆಗಳ ನೇಮಕಾತಿ ಆರಂಭ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading