ರಜನಿಕಾಂತ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರ್ಕೆಟ್ ಇದೆ.ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ಉಪೇಂದ್ರ, ರಚಿತಾ ರಾಮ್ ಕೂಡ ನಟಿಸಿರುವುದು ವಿಶೇಷ. ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಲು ಸರ್ಕಾರ ಮುಂದಾಗಿದೆ. ಆದರೆ ಇನ್ನು ಅಧಿಕೃತವಾಗಿ ಘೋಷಣೆ ಆಗಿಲ್ಲ. ಅದಕ್ಕೂ ಮುನ್ನ ‘ಕೂಲಿ’ ಸಿನಿಮಾ ತೆರೆಗೆ ಬಂದಿದ್ದು 500 ರೂ, 800 ರೂ, 1000 ರೂ ಟಿಕೇಟ್ ದರವಿದೆ.
ಕೂಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಬರೋಬ್ಬರಿ 22 ಕೋಟಿ ರೂ.ಗೆ ‘ಕೂಲಿ’ ಕರ್ನಾಟಕ ವಿತರಣೆ ಹಕ್ಕು ಮಾರಾಟವಾಗಿತ್ತು. ಎವಿ ಮೀಡಿಯಾದ ಪರವಾಗಿ ಜಯಣ್ಣ ಫಿಲ್ಮ್ಸ್ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತಂದಿದೆ.2ನೇ ದಿನ ಸ್ವಾತಂತ್ರ್ಯ ದಿನಾಚರಣೆ ರಜೆ ಚಿತ್ರದ ಗಳಿಕೆಗೆ ವರವಾಗಿದೆ.
ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ‘ಕೂಲಿ’ ಸಿನಿಮಾ ಮೊದಲ ದಿನ 14 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಮೊದಲ ದಿನ 9 ಕೋಟಿ ರೂ. ಹಾಗೂ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ 11 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ sacnilk.com ವೆಬ್ ಸೈಟ್ ವರದಿ ಮಾಡಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


