ಬೆಂಗಳೂರು: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಎಸ್‌ಐಟಿ ಗೌಪ್ಯವಾಗಿ ತನಿಖೆಯನ್ನು ಮುಂದುವರಿಸಿದೆ.
ಮೊದಲಿಗೆ ಚಿನ್ನಯ್ಯ ನೀಡಿದ ಮಾಹಿತಿಯ ಮೇರೆಗೆ ಉತ್ಖನನ ಕಾರ್ಯ ನಡೆಸಿದ ಎಸ್‌ಐಟಿ ಅಧಿಕಾರಿಗಳಿಗೆ ಇದೀಗ ವಿಠಲ ಗೌಡ ಬಂಗ್ಲೆ ಗುಡ್ಡದಲ್ಲಿ ಶವ ಹೂಳಲಾಗಿದೆ ಎಂದು ವಿಚಾರಣೆ ವೇಳೆ ತಿಳಿಸಿದ್ದು, ಸದ್ಯ ಅಧಿಕಾರಿಗಳು ಅಲ್ಲಿಯೂ ಸ್ಥಳ ಮಹಜರು ನಡೆಸಿದ್ದಾರೆ.
ಈ ಜಾಗದಲ್ಲಿ ಉತ್ಖನನ ಕಾರ್ಯ ನಡೆಯಲಿದೆಯಾ ಎಂಬ ಪ್ರಶ್ನೆ ಎದ್ದಿರುವಾಗಲೇ ಇತ್ತ ಬೆಂಗಳೂರಿನಲ್ಲಿ ಇಬ್ಬರು ದೂರುದಾರರು ತಾವು ಕೊಟ್ಟ ದೂರನ್ನು ಎಸ್‌ಐಟಿ ಪರಿಗಣಿಸದ ಕಾರಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಧರ್ಮಸ್ಥಳದ ಸ್ಥಳೀಯರಾದ ಪುರಂದರ ಗೌಡ ಹಾಗೂ ತುಕಾರಾಂ ಚಿನ್ನಯ್ಯ ನೇತ್ರಾವತಿ ಕಾಡಿನಲ್ಲಿ ಶವ ಹೂತಿದ್ದನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಈ ಜಾಗವನ್ನು ಗುರುತಿಸಲು ಹಾಗೂ ಉತ್ಖನನ ಮಾಡಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಆಗಸ್ಟ್ 13ರಂದೇ ಈ ಕುರಿತು ಎಸ್‌ಐಟಿಗೆ ದೂರು ನೀಡಿದ್ದು, ಇದಕ್ಕೆ ಸ್ಪಂದಿಸದ ಕಾರಣ ಈ ಇಬ್ಬರು ದೂರುದಾರರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರ ಪೀಠ ಎಸ್‌ಐಟಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ವಕ್ಫ್ ಮಸೂದೆಯ ಹಲವು ಬದಲಾವಣೆಗೆ ಸುಪ್ರೀಂ ಕೋರ್ಟ್ ನಕಾರ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


