Tuesday, September 1, 2026
spot_img
More
    spot_img
    HomeStateDistrictಧರ್ಮಸ್ಥಳದಲ್ಲಿ ಮತ್ತೆ ಸದ್ದು ಮಾಡಲಿವೆ ಹಾರೆ, ಗುದ್ದಲಿ; ಸೌಜನ್ಯ ಮಾವ ಹೇಳಿದ ಜಾಗದಲ್ಲಿ ಗುಂಡಿ ಅಗೆಯಲು...

    ಧರ್ಮಸ್ಥಳದಲ್ಲಿ ಮತ್ತೆ ಸದ್ದು ಮಾಡಲಿವೆ ಹಾರೆ, ಗುದ್ದಲಿ; ಸೌಜನ್ಯ ಮಾವ ಹೇಳಿದ ಜಾಗದಲ್ಲಿ ಗುಂಡಿ ಅಗೆಯಲು ಚಿಂತನೆ!

    ದಕ್ಷಿಣ ಕನ್ನಡ: ಧರ್ಮಸ್ಥಳ ಪ್ರಕರಣ ಎಸ್‌ಐಟಿ ತಂಡದ ಜತೆ ಮುಖ್ಯಸ್ಥ ಮೊಹಾಂತಿ ಸಭೆ ಮತ್ತಷ್ಟು ಕುತೂಹಲ ಕೆರಳಿಸಿದ್ದು, ರಜಾ ದಿನವನ್ನೂ ಲೆಕ್ಕಿಸದೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ತನಿಖಾ ತಂಡದ ಜೊತೆ ಭಾನುವಾರ ( ಸೆಪ್ಟೆಂಬರ್‌ 14 ) ಮಹತ್ವದ ಸಭೆ ನಡೆಸಿದ್ದಾರೆ.

    Advertisement

    ಸೌಜನ್ಯ ಅವರ ಮಾವ ವಿಠಲ್‌ ಗೌಡ ಅವರ ಹೇಳಿಕೆ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಇದನ್ನು ಆಧರಿಸಿ, ಬಂಗ್ಲೆ ಗುಡ್ಡದಲ್ಲಿ ಉತ್ಪನನ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಸುದೀರ್ಘ ಸಮಾಲೋಚನೆಯಾಗಿದೆ.

    ಈ ಮೊದಲು 17 ಸ್ಥಳಗಳಲ್ಲಿ ಉತ್ಪನನವಾಗಿತ್ತು. ಬಂಗ್ಲೆಗುಡ್ಡ ಅರಣ್ಯ ಪ್ರದೇಶವಾಗಿದ್ದು, ಈ ಸ್ಥಳವನ್ನು 11ಎ ಎಂದು ಗುರುತಿಸಲಾಗಿತ್ತು. 17 ಸ್ಥಳಗಳಲ್ಲಿ ಯಾವುದೇ ಗಂಭೀರ ಸ್ವರೂಪದ ಪುರಾವೆಗಳು ದೊರೆಯದ ಹಿನ್ನೆಲೆಯಲ್ಲಿ 11ಎ ಪಾಯಿಂಟ್ ನಲ್ಲಿ ಉತ್ಪನನ ನಡೆಸದೆ ಕೈಬಿಡಲಾಗಿತ್ತು. ಆದರೆ ಅಲ್ಲಿ ದೊರೆತಿದ್ದ ಕೆಲವು ಅಸ್ಥಿಗಳನ್ನು ಎಸ್‌ ಐಟಿ ತಂಡ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು.

    ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ್, ಸಿ.ಎ. ಸೈಮನ್ ಮತ್ತಿತರರು ಸಭೆಯಲ್ಲಿದ್ದರು. ಬಂಗ್ಲೆ ಗುಡ್ಡ ಕಾಡಿನಲ್ಲಿ ಮಾನವ ಅವಶೇಷಗಳ ರಾಶಿಯೇ ದೊರೆತಿದೆ ಎಂದು ವಿಠಲ್ ಗೌಡ ಹೇಳಿಕೆ ನೀಡಿದ್ದರು. ಮೊದಲ ದಿನ 3 ಹಾಗೂ 2ನೇ ದಿನ 5 ಅಸ್ಥಿಪಂಜರಗಳನ್ನು ನೋಡಿದ್ದಾಗಿ ಹೇಳಿದ್ದರು.

    ಅಸ್ಥಿಪಂಜರಗಳ ಪೈಕಿ ಚಿಕ್ಕ ಮಗುವಿನ ಕಳೇಬರವನ್ನು ತಾವು ಕಂಡಿದ್ದಾಗಿ ತಿಳಿಸಿದರು. ಇದು ಭಾರೀ ಸಂಚಲನ ಮೂಡಿಸಿತ್ತು. ಈ ಹಿಂದೆ ಚಿನ್ನಯ್ಯ ಇದೇ ರೀತಿಯ ಹೇಳಿಕೆ ನೀಡಿ, ಭಾರೀ ಗೊಂದಲ ಮೂಡಿಸಿದ್ದರು. ಆತ ಗುರುತಿಸಿದ ಜಾಗದಲ್ಲಿ ಎಸ್‌ಐಟಿ ಉತ್ಪನನ ನಡೆಸಿದಾಗ ಹೆಚ್ಚಿನ ಅಸ್ಥಿಪಂಜರಗಳು ದೊರೆಯದ ಕಾರಣಕ್ಕೆ ಪ್ರಯತ್ನ ವ್ಯರ್ಥವಾಗಿತ್ತು. ತಪ್ಪು ಮಾಹಿತಿ ನೀಡಿ, ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಕಾರಣವಾಗಿದ್ದ ಚಿನ್ನಯ್ಯನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

    ಈಗ ಸೌಜನ್ಯ ಅವರ ಮಾವ ವಿಠಲ್‌ಗೌಡ ಅದೇ ಮಾದರಿಯಲ್ಲಿ ಹೇಳಿಕೆಗಳನ್ನು ನೀಡಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಬಂಗ್ಲೆಗುಡ್ಡದಲ್ಲಿ ಮಾನವ ಅಸ್ಥಿಪಂಜರಗಳಿವೆ ಎಂದು ಹೇಳಿರುವ ವಿಠಲ್‌ಗೌಡ ಅವರ ಹೇಳಿಕೆ ಆಧರಿಸಿಯೇ ಭಾನುವಾರದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಎಸ್‌ಐಟಿ ಮುಖ್ಯಸ್ಥರಾದ ಮೊಹಾಂತಿ ಭಾನುವಾರ ಬೆಳ್ತಂಗಡಿಗೆ ಭೇಟಿ ನೀಡಿ, ತನಿಖಾ ತಂಡದ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಈವರೆಗಿನ ತನಿಖೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅದರ ಜೊತೆಗೆ ಬಂಗ್ಲೆಗುಡ್ಡದಲ್ಲಿ ಉತ್ಪನನ ನಡೆಸುವ ಬಗ್ಗೆಯೂ ಚರ್ಚೆಗಳಾಗಿವೆ ಎಂದು ತಿಳಿದು ಬಂದಿದೆ.

    ರೈಲು ಪ್ರಯಾಣಿಕರಿಗೆ ಹೊಸ ನಿಯಮ: ಅಕ್ಟೋಬರ್‌ನಿಂದ ಆನ್‌ಲೈನ್ ಟಿಕೆಟ್‌ಗೆ ಆಧಾರ್ ವೆರಿಫಿಕೇಶನ್ ಕಡ್ಡಾಯ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading