Saturday, July 4, 2026
spot_img
More
    spot_img
    HomeLatest newsಹಲವು ರೋಗಗಳಿಗೆ ರಾಮಬಾಣ: ಸುವರ್ಣ ಗಡ್ಡೆ ಸೇವನೆಯಿಂದಾಗುವ ಅಗಾಧ ಲಾಭಗಳು.

    ಹಲವು ರೋಗಗಳಿಗೆ ರಾಮಬಾಣ: ಸುವರ್ಣ ಗಡ್ಡೆ ಸೇವನೆಯಿಂದಾಗುವ ಅಗಾಧ ಲಾಭಗಳು.

    ಮಾರುಕಟ್ಟೆಯಲ್ಲಿ ನೋಡಲು ಒರಟಾಗಿ, ದಪ್ಪನಾಗಿ ಮತ್ತು ಮೈಮೇಲೆ ಮಣ್ಣು ಮೆತ್ತಿಕೊಂಡಿರುವ ಈ ಸುವರ್ಣ ಗಡ್ಡೆ (Elephant Foot Yam) ಕಡಿಮೆ ಬೆಲೆಗೆ ಸಿಕ್ಕರೂ, ಹೆಚ್ಚಿನ ಜನರು ಇದನ್ನು ಕಡೆಗಣಿಸಿ ಮುಂದೆ ಸಾಗುತ್ತಾರೆ. ಏಕೆಂದರೆ, ಈ ಸಾಮಾನ್ಯ ಕಾಣುವ ತರಕಾರಿಯಲ್ಲಿ ಅಡಗಿರುವ ಅಪಾರ ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹೊರನೋಟಕ್ಕೆ ಒರಟಾಗಿ ಕಂಡರೂ, ಈ ಗಡ್ಡೆ ನಿಮ್ಮ ಆರೋಗ್ಯಕ್ಕೆ ಒಂದು ನಿಜವಾದ ವರ ಮತ್ತು ಪೌಷ್ಟಿಕಾಂಶಗಳ ಶಕ್ತಿಯಾಗಿದೆ! ಇದರ ಅದ್ಭುತ ಗುಣಗಳನ್ನು ತಿಳಿದರೆ, ನೀವು ಖಂಡಿತವಾಗಿಯೂ ಇದನ್ನು ಬಿಟ್ಟು ಬರುವುದಿಲ್ಲ.

    Advertisement

    ಸುವರ್ಣ ಗಡ್ಡೆಯ ಆರೋಗ್ಯಕರ ಅಂಶಗಳು ಮತ್ತು ಲಾಭಗಳು:

    ಸುವರ್ಣ ಗಡ್ಡೆಯು ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಕಾರ್ಬೋಹೈಡ್ರೇಟ್‌ಗಳು ಮತ್ತು ಕರಗುವ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದರ ಜೊತೆಗೆ, ಇದು ವಿಟಮಿನ್ ಸಿ ಮತ್ತು ಬಿ6, ಫೈಬರ್, ಥಯಾಮಿನ್, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ ಅನ್ನು ಒಳಗೊಂಡಿದೆ.

    ಇದು ಕೇವಲ 100 ಗ್ರಾಂಗೆ 118 ಕ್ಯಾಲೊರಿಗಳನ್ನು ಹೊಂದಿದ್ದು, ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇಂತಹ ಅನೇಕ ಆರೋಗ್ಯ ವರ್ಧಕ ಗುಣಗಳಿಂದಾಗಿ, ಇದನ್ನು ಆಯುರ್ವೇದದಲ್ಲಿ ಹಲವಾರು ರೋಗಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.

    ರುಚಿಯ ವಿಚಾರಕ್ಕೆ ಬಂದರೆ, ಇದನ್ನು ಹಲವು ರೀತಿಯ ಅಡುಗೆಗಳಿಗೆ ಬಳಸಬಹುದು ಸಾಂಬಾರ್, ಪಲ್ಯ, ಕೂಟು, ಬಾಜಿ, ಪೋಡಿ ಅಥವಾ ಬಜ್ಜಿ ಯಾವುದೇ ಖಾದ್ಯಕ್ಕೂ ಇದು ಸುಲಭವಾಗಿ ಹೊಂದಿಕೊಳ್ಳುವ ಬಹುಮುಖಿ ರುಚಿಯನ್ನು ಹೊಂದಿದೆ.ಏನಿದರ ಸೇವನೆಯ ಲಾಭಗಳು(Benifits of Yam) ಎಂಬುದನ್ನು ನೋಡೋಣ.

    ತೂಕ ಇಳಿಕೆ

    ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಸುವರ್ಣ ಗಡ್ಡೆ ಒಂದು ಅತ್ಯುತ್ತಮ ಆಹಾರವಾಗಿದೆ. ಇದು ನಿಮ್ಮ ದೇಹದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯಲು ಹಲವು ವಿಧಗಳಲ್ಲಿ ಸಹಾಯ ಮಾಡುತ್ತದೆ,ಈ ಗಡ್ಡೆಯು ಫ್ಲೆವನಾಯ್ಡ್‌ ಅಂಶಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಬೊಜ್ಜು (ಕೊಬ್ಬು) ಕಡಿಮೆ ಮಾಡುವ ವಿಶೇಷ ಗುಣವನ್ನು ಹೊಂದಿದೆ.

    ಇದರಲ್ಲಿರುವ ನಾರು (ಫೈಬರ್) ಮತ್ತು ಸಂಕೀರ್ಣ ಪಿಷ್ಟಗಳು (Complex Carbs) ತಿಂದ ನಂತರ ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತವೆ. ಇದರಿಂದ ಅನಗತ್ಯವಾಗಿ ಏನನ್ನೂ ತಿನ್ನಲು ಮನಸ್ಸಾಗುವುದಿಲ್ಲ, ಇದು ತೂಕ ಇಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

    ಸುವರ್ಣ ಗಡ್ಡೆಯು ಕರುಳಿನ ಭಾಗದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು (Good Bacteria) ಹೆಚ್ಚಿಸುತ್ತದೆ. ಈ ಬ್ಯಾಕ್ಟೀರಿಯಾಗಳು ನಾವು ಸೇವಿಸಿದ ಆಹಾರದಲ್ಲಿರುವ ಪೌಷ್ಟಿಕಾಂಶಗಳನ್ನು ಸಮರ್ಥವಾಗಿ ಹೀರಿಕೊಂಡು, ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ.

    ಆರೋಗ್ಯಕರ ಕೊಲೆಸ್ಟ್ರಾಲ್ ಗೆ ಸಹಾಯಕ

    ಸುವರ್ಣ ಗಡ್ಡೆ ಕಡಿಮೆ ಕೊಲೆಸ್ಟ್ರಾಲ್ ಮಟ್ಟವನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಇದು ಕಡಿಮೆ ಕೊಬ್ಬಿನ (Low-fat) ಮತ್ತು ಹೆಚ್ಚು ಫೈಬರ್ (High-fiber) ಅಂಶಗಳನ್ನು ಹೊಂದಿದೆ, ಹೀಗಾಗಿ ಹೃದಯ ಆರೋಗ್ಯವನ್ನು ಉತ್ತೇಜಿಸುತ್ತದೆ.

    ಸುವರ್ಣ ಗಡ್ಡೆಯಲ್ಲಿರುವ ಒಮೆಗಾ-3 ಕೊಬ್ಬಿನ ಆಸಿಡ್ಗಳು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ದೇಹದ ತೂಕವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತವೆ. ನಿಯಮಿತ ಸೇವನೆಯಿಂದ ನಿಮ್ಮ ಹೃದಯದ ಆರೋಗ್ಯ ಮತ್ತು ಸಾಮಾನ್ಯ ಶರೀರ ಶಕ್ತಿ ಎರಡೂ ಸುಧಾರಿಸುತ್ತದೆ.

    ಮಧುಮೇಹಿಗಳಿಗೂ ವರದಾನ

    ತೂಕ ಹೆಚ್ಚಳ, ಬೊಜ್ಜು, ಹೃದಯ ಸಮಸ್ಯೆಗಳು ಅಥವಾ ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳು ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಸುವರ್ಣ ಗಡ್ಡೆಯನ್ನು ಬಳಸುವುದರಿಂದ ಬಹಳ ಒಳ್ಳೆಯದು. ಇದಕ್ಕೆ ಕಾರಣ, ಈ ತರಕಾರಿಯಲ್ಲಿ ಹೇರಳವಾಗಿ ಸಿಗುವ ವಿಟಮಿನ್ಸ್ ಮತ್ತು ಖನಿಜಾಂಶಗಳ ಜೊತೆಗೆ, ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯ ಮಾಡುವ ಫೈಟೋನ್ಯೂಟ್ರಿಯೆಂಟ್ಸ್ (Phytonutrients) ಅಂಶಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಹಾಗಾಗಿ, ಸಕ್ಕರೆ ಕಾಯಿಲೆ ಇರುವವರು ಇದನ್ನು ಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆ ಆಗದಂತೆ ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ.

    ಮಹಿಳೆಯರ ಆರೋಗ್ಯಕ್ಕೆ ಉತ್ತಮ

    ಸುವರ್ಣ ಗಡ್ಡೆಯಲ್ಲಿರುವ ‌ ಪೋಷಕಾಂಶಗಳು ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು. ಈ ತರಕಾರಿ ಈಸ್ಟ್ರೊಜೆನ್ ಮಟ್ಟವನ್ನು ಸುಧಾರಿಸುತ್ತದೆ.ಇದು ಕೀಲುಗಳನ್ನು ನಯಗೊಳಿಸುತ್ತದೆ ಮತ್ತು ಮೊಣಕಾಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಈ ತರಕಾರಿಯನ್ನು ವಾರಕ್ಕೆ ಎರಡು ಬಾರಿ ಸೇವಿಸುವುದರಿಂದ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಅನ್ನು ತಡೆಯಬಹುದು.

    ಹೃದಯದ ಆರೋಗ್ಯಕ್ಕೆ

    ಮಣ್ಣು ಮೆತ್ತಿಕೊಂಡಿರುವ ಈ ದಪ್ಪನೆಯ ಸುವರ್ಣ ಗಡ್ಡೆಯು ಕೇವಲ ರುಚಿಗಾಗಿ ಅಲ್ಲ, ನಿಮ್ಮ ಹೃದಯದ ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು ಎಂದು ಹಲವು ಬಾರಿ ಸಾಬೀತಾಗಿದೆ.
    ಮುಖ್ಯವಾಗಿ, ಈಗಾಗಲೇ ಹೃದಯ ಸಮಸ್ಯೆಗೆ ಒಳಗಾದವರು ಅಥವಾ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುವವರು ತಮ್ಮ ಆಹಾರ ಪದ್ಧತಿಯಲ್ಲಿ ಈ ತರಕಾರಿಯನ್ನು ಮಿತವಾಗಿ ಬಳಸಿಕೊಳ್ಳುವುದು ಅತ್ಯುತ್ತಮ.

    ಸುವರ್ಣ ಗಡ್ಡೆಯು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ವಿಶೇಷವಾಗಿ ಹೃದಯ ರಕ್ತ ನಾಳದ ಕಾಯಿಲೆಗಳನ್ನು (Cardiovascular Diseases) ದೂರವಿಡುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಸ್ಥಿರವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಹೃದಯ ಆರೋಗ್ಯದಲ್ಲಿ ಸಮಸ್ಯೆಗಳು ಬರದಂತೆ ತಡೆಯಲು ಈ ಮಣ್ಣಿನೊಳಗಿನ ರತ್ನವನ್ನು ನಿಮ್ಮ ಆಹಾರದಲ್ಲಿ ಸೇರಿಸಿ!

    ಕಂದಾಯ ಇಲಾಖೆಯಲ್ಲಿ 500 ಗ್ರಾಮ ಲೆಕ್ಕಿಗ(VA) ಹುದ್ದೆಗಳಿಗೆ ಅರ್ಜಿ ಆಹ್ವಾನ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading