ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಭರ್ಜರಿ ಸಿಹಿಸುದ್ದಿ. ನಿಮ್ಮ ಬಿ-ಖಾತಾವನ್ನು ಎ-ಖಾತಾವಾಗಿ ಪರಿವರ್ತಿಸಲು ಮತ್ತು ಹೊಸ ನಿವೇಶನಗಳಿಗೆ ಎ-ಖಾತಾ ಪಡೆಯಲು ಹೊಸ ಆನ್‌ಲೈನ್ ಪೋರ್ಟಲ್‌ಗೆ ಚಾಲನೆ ನೀಡಲಾಗಿದೆ.
ಇನ್ನು ಮುಂದೆ ಆಸ್ತಿ ಮಾಲೀಕರು ಸುಲಭವಾಗಿ ಅರ್ಜಿ ಸಲ್ಲಿಸಬಹುದು!ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ ಅವರು ಈ ಉಪಕ್ರಮಕ್ಕೆ ಚಾಲನೆ ನೀಡುವ ಮೂಲಕ, ಬೆಂಗಳೂರಿನ ಆಸ್ತಿ ಮಾಲೀಕರಿಗೆ ದೀಪಾವಳಿಯ ಅತಿದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಪ್ರಕ್ರಿಯೆಯು ಮತ್ತಷ್ಟು ಸರಳ ಮತ್ತು ಸುಲಭವಾಗಲಿದೆ
ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಗೆ ಅರ್ಜಿ ಸಲ್ಲಿಸುವ ವಿಧಾನ:
ಬಿ-ಖಾತಾ ಮಾಲೀಕರು ಈ ಸರಳ ಹಂತಗಳನ್ನು ಅನುಸರಿಸಿ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು:
ಪೋರ್ಟಲ್‌ಗೆ ಭೇಟಿ: ನಿಮ್ಮ ಮೊಬೈಲ್ ಮೂಲಕ ಈ ವೆಬ್‌ಸೈಟ್‌ಗೆ (https://bbmp.karnataka.gov.in/BtoAKhata) ಭೇಟಿ ನೀಡಿ ಮತ್ತು OTP ಬಳಸಿ ಲಾಗಿನ್ ಆಗಿ.
ವಿವರಗಳನ್ನು ಪಡೆಯಿರಿ: ನಿಮ್ಮ ಅಂತಿಮ ಬಿ-ಖಾತೆಯ EPID ಸಂಖ್ಯೆಯನ್ನು ನಮೂದಿಸಿ ಆಸ್ತಿ ವಿವರಗಳನ್ನು ಪಡೆಯಿರಿ.
ಮಾಲೀಕರ ದೃಢೀಕರಣ: ಆಸ್ತಿ ಮಾಲೀಕರ ಆಧಾರ್ ಸಂಖ್ಯೆಯನ್ನು ದೃಢೀಕರಿಸಿ.
ಸ್ಥಳ ದೃಢೀಕರಣ: ನಿಮ್ಮ ನಿವೇಶನ ಇರುವ ಸ್ಥಳ ಮತ್ತು ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢೀಕರಿಸಿ. (ಫ್ಲಾಟ್‌ಗಳಿಗೆ ಅರ್ಹತೆ ಇರುವುದಿಲ್ಲ).
ಶುಲ್ಕ ಪಾವತಿ: ಮಾರುಕಟ್ಟೆ ಮೌಲ್ಯದ ಶೇ. 5% ರಷ್ಟು ಮೊತ್ತವನ್ನು “ಏಕ ನಿವೇಶನ” ಅನುಮೋದನೆ ಶುಲ್ಕವಾಗಿ ಮತ್ತು ಇತರೆ ಶುಲ್ಕಗಳನ್ನು ಪಾವತಿಸಿ.
ಎ-ಖಾತಾ ವಿತರಣೆ: ಪರಿಶೀಲನೆ ನಂತರ, ಅರ್ಹತೆ ಆಧಾರದ ಮೇಲೆ ಎ-ಖಾತಾ ವಿತರಿಸಲಾಗುತ್ತದೆ.
ಹೊಸ ನಿವೇಶನಗಳಿಗೆ ಎ-ಖಾತಾ ಪಡೆಯುವ ವಿಧಾನ:
ಹೊಸ ನಿವೇಶನಗಳಿಗೂ ಎ-ಖಾತಾ ಪಡೆಯಲು ಈ ಪ್ರಕ್ರಿಯೆ ಅನುಸರಿಸಿ:
ತಂತ್ರಜ್ಞರನ್ನು ಸಂಪರ್ಕಿಸಿ: ನೋಂದಾಯಿತ ವಾಸ್ತುಶಿಲ್ಪಿ (Architect) ಅಥವಾ ಇಂಜಿನಿಯರ್‌ರನ್ನು ಸಂಪರ್ಕಿಸಿ.
ಆನ್‌ಲೈನ್ ಅರ್ಜಿ: https://bpas.bbmp.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
ದಾಖಲೆ ಅಪ್‌ಲೋಡ್: ಅಗತ್ಯ ದಾಖಲೆಗಳು ಮತ್ತು ಕ್ಯಾಡ್ ಡ್ರಾಯಿಂಗ್ (CAD Drawing) ಅನ್ನು ಅಪ್‌ಲೋಡ್ ಮಾಡಿ, ಹಾಗೂ ₹500 ಆರಂಭಿಕ ಪರಿಶೀಲನಾ ಶುಲ್ಕ ಪಾವತಿಸಿ.
ಖಾತಾ ಪಡೆಯಿರಿ: ಅರ್ಹತೆ ಇದ್ದಲ್ಲಿ ಅನುಮೋದನೆ ಪ್ರಮಾಣಪತ್ರ, ಡ್ರಾಯಿಂಗ್ ಮತ್ತು ಎ-ಖಾತಾವನ್ನು ವಿತರಿಸಲಾಗುತ್ತದೆ.
ಎ-ಖಾತಾ ಪಡೆಯಲು ಬೇಕಾದ ಅಗತ್ಯ ದಾಖಲೆಗಳು ಮತ್ತು ಶುಲ್ಕದ ವಿವರ
ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಅಥವಾ ಹೊಸದಾಗಿ ಎ-ಖಾತಾ ಪಡೆಯಲು ಈ ಕೆಳಗಿನ ಪ್ರಮುಖ ದಾಖಲೆಗಳು ಮತ್ತು ಶುಲ್ಕಗಳು ಅವಶ್ಯಕ:
- ಅಗತ್ಯ ದಾಖಲೆಗಳು (Required Documents)
ಆಧಾರ್ ಕಾರ್ಡ್ ಆಸ್ತಿ ಮಾಲೀಕರಿಗೆ ಸಂಬಂಧಿಸಿದಂತೆ.
ಬಿ-ಖಾತಾ ಇಪಿಐಡಿ ಸಂಖ್ಯೆ ಬಿ-ಖಾತಾದಿಂದ ಪರಿವರ್ತಿಸುವವರಿಗೆ ಕಡ್ಡಾಯ.
ಆಸ್ತಿಯ ಒಡಂಬಡಿಕೆ ಅಥವಾ ರಿಜಿಸ್ಟರ್ಡ್ ಡೀಡ್ ಆಸ್ತಿಯ ಮಾಲೀಕತ್ವದ ದಾಖಲೆ.
ಭೂ ಪರಿವರ್ತನೆ ದಾಖಲೆ ಕೃಷಿ ಭೂಮಿಯನ್ನು ವಸತಿ/ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿದ್ದರೆ ಅಗತ್ಯ.
ಕ್ಯಾಡ್ ಡ್ರಾಯಿಂಗ್ (CAD Drawing) 2000 ಚ.ಮೀ.ಗಿಂತ ಹೆಚ್ಚಿನ ವಿಸ್ತೀರ್ಣದ ಆಸ್ತಿಗಳಿಗೆ ಕಡ್ಡಾಯ.
ಇತರ ಸಂಬಂಧಿತ ದಾಖಲೆಗಳು ತೆರಿಗೆ ಪಾವತಿ ರಸೀದಿಗಳು (Tax Paid Receipts), ನಿರಾಕ್ಷೇಪಣಾ ಪ್ರಮಾಣಪತ್ರ (NOC), ಇತ್ಯಾದಿ.
ಶುಲ್ಕದ ವಿವರಗಳು (Fee Details)
2000 ಚ.ಮೀ.ಗಿಂತ ಕಡಿಮೆ ವಿಸ್ತೀರ್ಣ ಮಾರುಕಟ್ಟೆ ಮೌಲ್ಯದ ಶೇ. 5% ರಷ್ಟು ಮೊತ್ತವನ್ನು “ಏಕ ನಿವೇಶನ” ಅನುಮೋದನೆ ಶುಲ್ಕವಾಗಿ ಹಾಗೂ ಇತರ ಅಗತ್ಯ ಶುಲ್ಕಗಳು.
2000 ಚ.ಮೀ.ಗಿಂತ ಹೆಚ್ಚಿನ ವಿಸ್ತೀರ್ಣ ಆರಂಭಿಕ ಪರಿಶೀಲನಾ ಶುಲ್ಕ ರೂ. 500, ಜೊತೆಗೆ ಇತರ ಅನ್ವಯವಾಗುವ ಶುಲ್ಕಗಳು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


