Thursday, November 5, 2026
spot_img
More
    spot_img
    HomeEntertainment3 ಸೆಕೆಂಡ್‌ ವಿಡಿಯೊಗೆ 10 ಕೋಟಿ ಡಿಮ್ಯಾಂಡ್; ಧನುಷ್‌ ವಿರುದ್ಧ ಪತ್ರ ಮೂಲಕ ಕಿಡಿಕಾರಿದ ನಯನತಾರಾ!

    3 ಸೆಕೆಂಡ್‌ ವಿಡಿಯೊಗೆ 10 ಕೋಟಿ ಡಿಮ್ಯಾಂಡ್; ಧನುಷ್‌ ವಿರುದ್ಧ ಪತ್ರ ಮೂಲಕ ಕಿಡಿಕಾರಿದ ನಯನತಾರಾ!

    ಬಣ್ಣದ ಜಗತ್ತೆಂದರೆ ಅದು ಮುಖಕ್ಕೆ ಬಣ್ಣ ಮಾತ್ರವಲ್ಲ ಹೆಸರಿಗೆ ಮಸಿಯೂ ಸಹ ಅಂಟಿಕೊಳ್ಳುತ್ತದೆ. ಸಾಧನೆ ಮಾಡಿದ ಅದೆಷ್ಟೋ ಕಲಾವಿದರು ವಿವಾದಕ್ಕೆ ಸಿಲುಕಿ ಹೆಸರು ಹಾಳುಮಾಡಿಕೊಂಡ ಉದಾಹರಣೆ ಸಾಕಷ್ಟಿವೆ. ಕೆಲ ನಟ ನಟಿಯರು ಹೆಸರು ಹಾಳುಮಾಡಿಕೊಳ್ಳುವ ಹಂತವನ್ನು ಮುಟ್ಟದಿದ್ದರೂ ವಿವಾದ ಎಂಬುದು ಅವರನ್ನು ಬಿಟ್ಟಿಲ್ಲ ಎನ್ನಬಹುದು.

    ಹೌದು, ಸೆಲೆಬ್ರಿಟೀಸ್‌ ಎಂದಮೇಲೆ ವಿವಾದ ಸಾಮಾನ್ಯ. ಕೆಲ ಸೆಲೆಬ್ರಿಟಿಗಳು ತಮ್ಮ ಚಿತ್ರಗಳಿಂದ ಸದ್ದು ಮಾಡಿದಷ್ಟೇ ತಮ್ಮ ವೈಯಕ್ತಿಕ ಜೀವನದ ವಿಚಾರಗಳ ವಿವಾದಗಳಿಂದ ಸದ್ದು ಮಾಡಿದ್ದುಂಟು. ಅಂತಹ ಕಲಾವಿದರ ಸಾಲಿಗೆ ಸೇರುವ ನಟ ತಮಿಳಿನ ಧನುಷ್.‌ ಹೌದು, ಪತ್ನಿ ವಿಚಾರವಾಗಿ, ಸಹ ನಟಿಯರ ವಿಚಾರವಾಗಿ ಹಾಗೂ ಗಾಯಕಿಯರ ವಿಚಾರವಾಗಿ ಈಗಾಗಲೇ ಹಲವು ಬಾರಿ ವಿವಾದಕ್ಕೆ ಸಿಲುಕಿರುವ ಧನುಷ್‌ ಸದ್ಯ ನಯನತಾರಾ ಅವರ ಕೆಂಗಣ್ಣಿಗೆ ಗುರಿಯಾಗಿ ವಿವಾದವೊಂದಕ್ಕೆ ಸಿಲುಕಿಕೊಂಡಿದ್ದಾರೆ. ‌

    ಹೌದು, ನಟಿ ನಯನತಾರಾ ಅವರ ಸಾಕ್ಷ್ಯಚಿತ್ರ ತಯಾರಿಸುತ್ತಿರುವ ಆಕೆಯ ತಂಡ ಆಕೆ ನಟನೆಯ 2015ರಲ್ಲಿ ತೆರೆಗೆ ಬಂದ ʼನಾನುಮ್‌ ರೌಡಿ ದಾನ್‌ʼ ಚಿತ್ರದಲ್ಲಿನ ಮೂರು ಸೆಕೆಂಡ್‌ಗಳ ವಿಡಿಯೊವನ್ನು ಬಳಸಿಕೊಂಡಿದೆ. ಆದರೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಟ ಧನುಷ್‌ ತಮ್ಮ ಚಿತ್ರದ ದೃಶ್ಯವನ್ನು ಬಳಸಿದ್ದಕ್ಕಾಗಿ 10 ಕೋಟಿ ಡ್ಯಾಮೇಜ್‌ ಕ್ಲೈಮ್‌ ಮಾಡಿದ್ದಾರೆ. ಉದ್ದನೆಯ ಪತ್ರ ಬರೆಯುವ ಮೂಲಕ ನಯನತಾರಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search