ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಸದ್ಯ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದಾರೆ. ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್ ಸದ್ಯ ಚಿಕಿತ್ಸೆಗೆಂದು ಮಧ್ಯಂತರ ಜಾಮೀನು ಪಡೆದಿದ್ದಾರೆ. ದರ್ಶನ್ ಜಾಮೀನು ಪಡೆದ ದಿನವೇ ಅವರದ್ದೇ ಅಧಿಕೃತ ಅಭಿಮಾನಿ ಬಳಗದ ಸೋಷಿಯಲ್ ಮೀಡಿಯಾದಲ್ಲಿ ಯಾರನ್ನು ನಿಂದಿಸಬೇಡಿ ಇದರಿಂದ ನಮ್ಮ ಬಾಸ್‌ಗೆ ತೊಂದರೆಯಾಗುತ್ತೆ ಎಂದು ಬರೆದುಕೊಂಡಿದ್ದರು.
ಹೀಗೆ ಅಭಿಮಾನಿಗಳು ಅತಿರೇಕದಿಂದ ವರ್ತಿಸಬೇಡಿ ಎಂದು ಎಷ್ಟೇ ಮನವಿ ಮಾಡಿದರೂ ನಟ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಹೌದು, ಈ ವಿಷಯವನ್ನು ಸ್ವತಃ ಒಳ್ಳೆ ಹುಡ್ಗ ಪ್ರಥಮ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಊಟಕ್ಕೆಂದು ಹೊಟೇಲ್ ಒಂದಕ್ಕೆ ತೆರಳಿದ್ದಾಗ ಕೆಲವು ದರ್ಶನ್ ಅಭಿಮಾನಿಗಳು ಬಂದು ಜೈ ಡಿ ಬಾಸ್ ಎನ್ನು ಎಂದು ಒತ್ತಾಯಿಸಿ ಹಲ್ಲೆಗೆ ಯತ್ನಿಸಿದರು ಎಂದು ಪ್ರಥಮ್ ಆರೋಪಿಸಿದ್ದಾರೆ.
ಪ್ರಥಮ್ ಟ್ವೀಟ್‌ನಲ್ಲಿ ಏನಿದೆ?
” ಸಂಜೆ ಗ್ರಾಮಾಂತರದ ಪ್ರತಿಷ್ಟಿತ ಹೋಟೆಲ್ ಲಿ ಆಪ್ತರೊಟ್ಟಿಗೆ ಊಟಕ್ಕೆ ಕೂತಿದ್ವಿ; ಕೆಲವರು ಫೋಟೋ ತಗೊಂಡ್ರು; ಜೈ ಡಿ ಬಾಸ್ ಅಂತ ಬಲವಂತವಾಗಿ ಕೂಗೋಕೆ ಹೇಳಿ ಗಲಾಟೆ ಕೂಗಿದ್ರು; ಒಳ್ಳೇದಾಗ್ಲಪ್ಪ ಅಂದೆ; ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಬಂದ್ರು!ಅಲ್ಲಿದ್ದ 8ಜನ ಬೌನ್ಸರ್ ಆ ಗೂಂಡಗಳನ್ನ ಎಳೆದು ಹೊರಗೆ ತಳ್ಳಿದ್ರು;ಕ್ಷಮೆಕೇಳಿದ್ರು.ಬಿಟ್ಟಿದ್ದೀನಿ. ಹೋಟೆಲ್ ನ ಎಲ್ಲಾ ಸಿಬ್ಬಂದಿ ಹಾಗೂ ಮ್ಯಾನೇಜರ್ ಮನವಿ ಮೇರೆಗೆ ನಾನು ಕಂಪ್ಲೇಂಟ್ ಕೊಡಬಾರ್ದು ಅಂತ ನಿರ್ಧರಿಸಿದೆ ನಮ್ಮ ಪಾಡಿಗೆ ನಾವಿದ್ದೇವೆ.ನಿಮ್ಮ ಪಾಡಿಗೆ ನೀವಿರಿ.#ದರ್ಶನ್ ಸರ್ ಅವ್ರ ಪಾಡಿಗೆ ಇದ್ದಾರೆ.but ಈ ಮಿನಿ ಗೂಂಡಾಗಳ ನಿಗರಾಟ ನೋಡೋಕಾಗ್ತಿಲ್ಲ; ಹೇಗಿದ್ರೂ ಹೋಟೆಲ್ ಲಿ CCtv ಇದೆ.ಇದು ಹೀಗೆ ಮುಂದುವರೆದರೆ ನಾನಂತು ಸುಮ್ಮನೆ ಕೂರಲ್ಲ. ಈ @dasadarshan Sir ಅವ್ರ ಪಾಡಿಗೆ ಅವರಿದ್ರೂ ಈ ಮಿನಿ ಗೂಂಡಗಳು ನೆಮ್ಮದಿಯಾಗಿರೋಕೆ ಬಿಡಲ್ಲ ಅನ್ಸುತ್ತೆ; ಎಲ್ಲವೂ CCtvಲಿ recordಆಗಿದೆ ಒತ್ತಾಯದಿಂದ #ಜೈಡಿಬಾಸ್ ಅನ್ನಿಸೋದು,ಬಲವಂತವಾಗ ಅಶ್ಲೀಲ ಪದ ಬಳಸೋದು ನೋಡ್ತಾ ಇರೋಕಾಗಲ್ಲ; ನಾನು ಒಂದು complaint ಕೊಟ್ರೆ ಕಂಬಿ ಎಣಿಸಬೇಕಾಗುತ್ತದೆ.ಮುಚ್ಕೊಂಡು ಮೈಬಗ್ಗಿಸಿ ದುಡಿದು ಚೆನ್ನಾಗಿ ಬದುಕಿ. ಇದು 2nd timeಆಗ್ತಿರೋದು; ನಾನು ಒಂದು complaintಕೊಟ್ರೆ ಜೈಲು caseಅಂತ ಅಲಿಬೇಕಾಗುತ್ತದೆ.ಅಲ್ಲಿದ್ದ ನಾಲ್ಕು ಪುಡಿರೌಡಿಗಳfamily ನೆನಪಿಸಿಕೊಂಡು ಸುಮ್ನಿದ್ದೀನಿ.ಕಿರುಚಾಡಿದ್ದ video,miss behaveಮಾಡಿದ್ದು ಎಲ್ಲವೂ ಇದೆ. ಸುಮ್ನೆ ಮುಚ್ಕೊಂಡು ಇರೋಕೆ ಏನ್ರೋ ರೋಗ ನಿಮ್ಗೆ?ಬದುಕು ಸುಂದರವಾದದ್ದು.ಹಾಳುಮಾಡ್ಕೊಬೇಡಿ.#fakefans,#paidfans”
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


