ಕರ್ನಾಟಕದಲ್ಲಿ ಸರ್ಕಾರಿ ಬಸ್ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಲಿದೆ. ಹೌದು, ನಾಲ್ಕು ಸಾರಿಗೆ ನಿಗಮಗಳ ನೌಕರ/ ಸಿಬ್ಬಂದಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ದಿಢೀರ್ ಮುಷ್ಕರವನ್ನು ನಡೆಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆಗಿನ ಸಭೆ ವಿಫಲವಾದ ಹಿನ್ನಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವ ತೀರ್ಮಾನ ಮಾಡಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಮುಷ್ಕರ ಮಾಡಲು ತೀರ್ಮಾನಿಸಿದ್ದರು. ಆಗ ಹೈಕೋರ್ಟ್ ಅದಕ್ಕೆ ತಡೆ ನೀಡಿತ್ತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಕೆಎಸ್‌ಆರ್‌ಟಿಸಿ/ ಬಿಎಂಟಿಸಿ/ ಎನ್‌ಡಬ್ಲ್ಯೂಕೆಆರ್‌ಟಿಸಿ/ ಕೆಕೆಆರ್‌ಟಿಸಿ ಅಧ್ಯಕ್ಷರು/ ಪ್ರಧಾನ ಕಾರ್ಯಾದರ್ಶಿಗಳು ಕ.ರಾ.ರ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಪತ್ರವೊಂದನ್ನು ಬರೆದಿದೆ.
ಈ ಪತ್ರವು ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಬಗ್ಗೆ ಎಲ್ಲ ಮುಖ್ಯ ಸಂಘಟನೆಗಳ ಕ್ರೂಢಿಕೃತ ಅಭಿಪ್ರಾಯ ಸಂಗ್ರಹ ಹಾಗೂ ಸಾಮೂಹಿಕ ಹೋರಾಟ ಕಾರ್ಯಕ್ರಮಗಳಿಗೆ ಆಹ್ವಾನ ಎಂಬ ವಿಷಯವನ್ನು ಒಳಗೊಂಡಿದೆ.
ಪತ್ರದ ವಿವರ: ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ನಾವೆಲ್ಲ ನಮ್ಮ ನಮ್ಮ ಸಂಘಗಳ ವತಿಯಿಂದ ಪ್ರತ್ಯೇಕವಾಗಿ ಹೋರಾಟಗಳನ್ನು ಮಾಡುತ್ತಿದ್ದರು ಯಾವುದೇ ಪ್ರಯೋಜನ ನೌಕರರಿಗೆ ಆಗಿಲ್ಲ.
ಮಾನ್ಯಮುಖ್ಯ ಮಂತ್ರಿಗಳ, ಮಾನ್ಯ ಸಾರಿಗೆ ಸಚಿವರ ಮತ್ತು ಅಧಿಕಾರಗಳ ನೇತೃತ್ವದ ಹಲವು ಸುತ್ತುಗಳ ಸಭೆಗಳು ನಡೆದಿದ್ದರೂ ಯಾವುದೇ ನಿರ್ಣಾಯಕ್ಕೆ ಬಾರದೆ ಕಾಲಹರಣ ಆಗುತ್ತಿರುವ ಕಾರಣ ನೌಕರರಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿದೆ.
ಇದರಿಂದ ನೌಕರರ ಆರ್ಥಿಕ ಪರಿಸ್ಥಿತಿ ಹೇಳತ್ತಿರದಷ್ಟು ತೀರ ಕೇಳ ಹಂತಕ್ಕೆ ತಲುಪಿದೆ. ಇದೇ ರೀತಿಯಲ್ಲಿ ನಾವು ಪ್ರತ್ಯೇಕ ಹೋರಾಟ ಮತ್ತು ಸಭೆಗಳನ್ನು ಮಾಡುತ್ತ ಮುಂದುವರೆದರೆ ನೌಕರರು ಮತ್ತಷ್ಟು ಅವರ ಆರ್ಥಿಕ ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾದ ಸಂಭವವಿದೆ.
ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟು ಹೋರಾಟಗಳನ್ನು ಹಮ್ಮಿಕೊಳ್ಳಲು ತುರ್ತಾಗಿ ಸಭೆ ಸೇರಬೇಕಾದ ಅನಿರ್ವಾಯ ಪರಿಸ್ಥಿತಿ ಇರುವುದರಿಂದ ತಾವೇ ಸ್ಥಳ ಮತ್ತು ಸಮಯ ಆದ್ದರಿಂದ ಎಲ್ಲ ಸಂಘಟನೆಗಳು ಒಂದು ಗೂಡಿ ಒಮ್ಮ ನಿಗದಿಪಡಿಸಿ ಹಿತದೃಷ್ಟಿಯಿಂದ ಒಕ್ಕೂಟದ ಪದಾಧಿಕಾರಿಗಳು ಬರಲು ಸಿದ್ಧರಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬೇಡಿಕೆಗಳು
- ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿಗೆ ಬರುವಂತೆ ಕೂಡಲೇ ನೀಡುವುದು.
- 01/01/2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಸದರಿ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡುವುದು. ಈಗಾಗಲೇ ಮಾನ್ಯ ಮುಖ್ಯ ಮಂತ್ರಿಗಳು ಶ್ರೀನಿವಾಸ್ ಮೂರ್ತಿ ಅವರ ಶಿಪಾರಸ್ಸಿನಂತೆ 14 ತಿಂಗಳ ಹಿಂಬಾಕಿ ನೀಡುವ ಬಗ್ಗೆ ತಿಳಿಸಿದ್ದು, ಬಾಕಿ 24 ತಿಂಗಳ ಹಿಂಬಾಕಿಯನ್ನು ಸೇರಿಸಿ 38 ತಿಂಗಳ ವೇತನದ ಹಿಂಬಾಕಿಯನ್ನು ನೀಡುವುದು. (ನಿವೃತ್ತ ನೌಕರರಿಗೆ ಮೊದಲ ಅದ್ಯತೆಯಲ್ಲಿ ಅವರ ಹಿಂಬಾಕಿ ಮತ್ತು ಇತರೆ ಸೇವ ಆರ್ಥಿಕ ಸೌಲಭ್ಯಗಳನ್ನು ನೀಡುವುದು).
- ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಈ ಕೂಡಲೇ ನಡೆಸುವುದು.
- ಸರ್ಕಾರದ ಆದೇಶ ಸಂಖ್ಯೆ: ಟಿಡಿ 77 ಟಿಸಿಎಸ್ 2025 ರಂತೆ ಸಾರಿಗೆ ಸಂಸ್ಥೆಗಳಲ್ಲಿ ಅನುಕಂಪದ ಅಧಾರದಲ್ಲಿ ಗ್ರೂಪ್-ಡಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬಾರದೆಂಬ ಆದೇಶವನ್ನು ಹಿಂಪಡೆಯುವುದು.
- ಕೇಂದ್ರ ಕಛೇರಿಯಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರ ಕೂಟ(ರಿ) ದ ಪದಾಧಿಕಾರಿಗಳಿಗೆ ನೌಕರರ ಕುಂದುಕೊರತೆಗಳು ಮತ್ತು ಸಮಸ್ಯೆಗಳ ನಿವಾರಣೆಗೆ ಚರ್ಚೆ ಮಾಡಲು ಸಭೆ ಮಾಡುವಂತೆ ವಿಭಾಗ ಮತ್ತು ಘಟಕವಾರು ನೌಕರರ ಕುಂದುಕೊರತೆಗಳು ಮತ್ತು ಸಮಸ್ಯೆಗಳ ನಿವಾರಣೆಗೆ ಸಭೆ ಆಯೋಜಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದು.
- ಕೋವಿಡ್ ಕಾರಣದಿಂದ ಅನೇಕ ಘಟಕಗಳಲ್ಲಿ ಮಾರ್ಗಗಳ ಓ.ಟಿ ಕಡಿತ ಮಾಡಿದ್ದು, ಪ್ರಸ್ತುತವು ಸಹ ಹಲವು ವಿಭಾಗಗಳಲ್ಲಿ ಓ.ಟಿ ನೀಡದೆ ಯಥಾಸ್ಥಿತಿ ಮುಂದುವರೆಸುತ್ತಿರುವುದನ್ನು ರದ್ದು ಮಾಡಿ. ತಾರತಮ್ಯವಿಲ್ಲದೆ ಮೊದಲಿನ ರೀತಿಯಲ್ಲಿ ಓ.ಟಿ ನೀಡುವುದು.
- ಈ ಹಿಂದೆ ಕಿಯೋಸ್ಕೋ ಯಂತ್ರದಲ್ಲಿ ಇದ್ದಂತೆ ಅಲ್ಪಾವಧಿ, ಧೀರ್ಘಾವಧಿ ತುರ್ತು ಹಾಗು ನಿವೃತ್ತಿ ರಜೆ ಪಡೆಯುವ ವ್ಯವಸ್ಥೆಯನ್ನು ಹೆಚ್.ಆರ್.ಎಂ.ಎಸ್‌ನಲ್ಲಿ ಅಳವಡಿಸುವುದು ಹಾಗೂ ಒ.ಎಂ.ಎಸ್. ಪದ್ಧತಿಯಲ್ಲಿ ಇದ್ದಂತೆ ನೌಕರರು ದೂರು ಸಲ್ಲಿಸುವ ಅವಕಾಶ ಕಲ್ಪಿಸುವುದು. ಹೆಚ್.ಆರ್.ಎಂ.ಎಸ್.ನಲ್ಲಿ ಘಟಕಗಳಲ್ಲಿ ಯಾವುದೇ ನೌಕರರು ರಜೆ ಪಡೆಯಲು ಸಾಧ್ಯವಾಗದ ರೀತಿಯಲ್ಲಿ ಬ್ಲಾಕ್ ಮಾಡುತ್ತಿದ್ದು, ಈ ಬಗ್ಗೆ ಘಟಕಗಳ ಅಧಿಕಾರಿಗಳನ್ನು ವಿಚಾರಿಸಿದಾಗ ಕೇಂದ್ರ ಕಚೇರಿಯಿಂದ ಮಾಡಿದ್ದಾರೆ ಎಂಬ ಉತ್ತರ ನೀಡಿದ್ದಾರೆ. ಈ ಬಗ್ಗೆ ನೌಕರರಿಗೆ ಸೂಕ್ತ ರೀತಿಯಲ್ಲಿ ರಜೆ ನೀಡಲು ಕ್ರಮ ವಹಿಸುವುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


