ದಶಕದ ಹಿಂದೆ ತೆರೆಕಂಡು ಬ್ಲಾಕ್‌ಬಸ್ಟರ್ ಆಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ಹೆಸರನ್ನು ನಿರ್ದೇಶಕ ನಾಗಶೇಖರ್ ಮತ್ತೊಮ್ಮೆ ಬಳಸಿಕೊಂಡು ‘ಸಂಜು ವೆಡ್ಸ್ ಗೀತಾ 2’ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಬಾರಿ ರಮ್ಯಾ ಬದಲಿಗೆ ರಚಿತಾ ರಾಮ್ ನಾಯಕಿಯಾಗಿ ಚಿತ್ರದಲ್ಲಿ ನಟಿಸಿದ್ದು, ಶ್ರೀನಗರ ಕಿಟ್ಟಿಯೇ ನಾಯಕನಾಗಿದ್ದಾರೆ.
ಜನವರಿ 10ರಂದೇ ತೆರೆಗೆ ಬರಬೇಕಿದ್ದ ಈ ಚಿತ್ರ ಕಾರಣಾಂತರಗಳಿಂದ ಒಂದು ವಾರ ತಡವಾಗಿ ಬಿಡುಗಡೆಯಾಗಿದ್ದು, ಚಿತ್ರ ಅಗತ್ಯ ಪ್ರಚಾರ ಪಡೆದುಕೊಳ್ಳುವಲ್ಲಿ ಎಡವಿತ್ತು. ಹೀಗಾಗಿ ಸಣ್ಣ ಬಿಡುಗಡೆಯನ್ನೇ ಚಿತ್ರ ಕಂಡಿದ್ದು, ಅದರಲ್ಲಿಯೂ ಹೆಚ್ಚಾಗಿ ನೆಗೆಟಿವ್ ವಿಮರ್ಶೆಗಳನ್ನೇ ಪಡೆದುಕೊಂಡಿದೆ.
ಹೌದು, ಇಂದು ( ಜನವರಿ 17 ) ತೆರೆಕಂಡ ಚಿತ್ರವನ್ನು ವೀಕ್ಷಿಸಿದ ಕೆಲ ಸಿನಿ ರಸಿಕರು ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರದ ಕುರಿತು ವಿಮರ್ಶೆ ಬರೆದುಕೊಂಡಿದ್ದಾರೆ. ಸುಮಾರು ಐದಾರು ವಿಮರ್ಶೆಗಳು ಎಕ್ಸ್ ಖಾತೆಯಲ್ಲಿದ್ದು, ಅವುಗಳು ಈ ಕೆಳಕಂಡಂತಿವೆ..
ಗುರುರಾಜ್ ಅಂಜಾನ್ ಎಂಬುವವರು ಸಂಜು ವೆಡ್ಸ್ ಗೀತಾ 2 ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ʼಇದೊಂದು ಊಹಿಸಬಹುದಾದ ಕಸʼ ಎಂದಿದ್ದಾರೆ. ಇದು 1980-90ರ ಅಜ್ಜಿಯ ಕಥೆ, ನಿರ್ದೇಶಕ ನಾಗಶೇಖರ್ ಸೋತಿದ್ದಾರೆ. ಅಲ್ಲದೇ ಚಿತ್ರದಲ್ಲಿ ಮ್ಯೂಸಿಕ್ ತುಸು ಚೆನ್ನಾಗಿದೆ, ರಚಿತಾ ನಟನೆ ಚೆನ್ನಾಗಿಲ್ಲ, ಕಿಟ್ಟಿಯವರಿಗೆ ಹೆಚ್ಚು ಸ್ಪೇಸ್ ಇಲ್ಲ, ಒಟ್ಟಾರೆ ಇದೊಂದು ʼಡಿಸಾಸ್ಟರ್ʼ ಎಂದು ಬರೆದುಕೊಂಡಿದ್ದಾರೆ.
ಹಾನೆಸ್ಟ್ ರಿವ್ಯೂವರ್ ಎಂಬುವವರು ಸಹ ಚಿತ್ರದ ಬಗ್ಗೆ ಬರೆದುಕೊಂಡಿದ್ದು ಐದಕ್ಕೆ ಕೇವಲ 1 ಸ್ಟಾರ್ ಕೊಟ್ಟಿದ್ದಾರೆ. ಛಾಯಾಗ್ರಹಣ ಹಾಗೂ ಕಥೆ ಮಾತ್ರ ಪರವಾಗಿಲ್ಲ ಎಂದಿರುವ ಇವರು ಸ್ಕ್ರೀನ್‌ಪ್ಲೇ, ಡೈರೆಕ್ಷನ್ ವಾಶ್‌ಔಟ್, ಯಾವುದೇ ಕಲಾವಿದರ ನಟನೆ ಚೆನ್ನಾಗಿಲ್ಲ. ವಿಎಫ್‌ಎಕ್ಸ್, ಮ್ಯಾಸಿಕ್, ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಹಾಡುಗಳು ಸಹ ಚೆನ್ನಾಗಿಲ್ಲ. ಒಟ್ಟಾರೆ 2025ರ ಕೆಟ್ಟ ಸಿನಿಮಾ. ನಿಮ್ಮ ಹಣ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಬರೆದುಕೊಂಡಿದ್ದಾರೆ.

ಶಶಿಪ್ರಸಾದ್ ಎಸ್‌ಎಂ ಅವರೂ ಸಹ ಚಿತ್ರದ ಬಗ್ಗೆ ವಿಮರ್ಶೆ ಬರೆದುಕೊಂಡಿದ್ದು, ಚಿತ್ರವನ್ನು ನೋಡುವುದು ಚಟ್ನಿ, ಸಾಂಬಾರ್, ತುಪ್ಪ ಇಲ್ಲದ ಇಡ್ಲಿ ತಿಂದಂತೆ ಎಂದು ಬರೆದುಕೊಂಡಿದ್ದಾರೆ.

Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


