ಬೀಟ್ರೂಟ್(Beetroot) ನೋಡಲು ರಕ್ತದ ಬಣ್ಣದಂತೆ ಕಂಡು ಬರುತ್ತದೆ ಎಂಬ ಒಂದೇ ಕಾರಣ ಬಿಟ್ಟರೆ, ಈ ತರಕಾರಿಯಲ್ಲಿ, ಲೆಕ್ಕಕ್ಕೂ ಮೀರಿದ ಆರೋಗ್ಯ ಪ್ರಯೋಜನಗಳು ಇವೆ.ಬೀಟ್‌ರೂಟ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂಬುವುದು ಗೊತ್ತು.ಬೀಟ್ರೂಟ್ ರಸದಲ್ಲಿ ಅನೇಕ ಪೋಷಕಾಂಶಗಳಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಬೀಟ್ ರೂಟ್‌ನಲ್ಲಿ ವಿಟಮಿನ್ಸ್, ಖನಿಜಾಂಶ, ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಜೊತೆಗೆ ಇದು ಕೂದಲು ಮತ್ತು ತ್ವಚೆಗು ಸಹ ಪ್ರಯೋಜನಕಾರಿ. ವಯಸ್ಸಾದಂತೆ ಕಾಣುವುದನ್ನು ಇದು ತಡೆಯುತ್ತದೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಸಿಹಿಯಾಗಿ ಸೇವಿಸಲು ಅತ್ಯಂತ ರುಚಿಕರವಾಗಿರುತ್ತದೆ.ಸಿಹಿ ತಿಂಡಿಗಳಲ್ಲಿ ನಾನಾ ವಿಧವಿಧವಾದ ಭಕ್ಷ್ಯಗಳಿದೆ. ಅವುಗಳಲ್ಲಿ ಹಲ್ವಾ ಕೂಡ ಒಂದು. ಹಲ್ವಾಗಳಲ್ಲಿ ಕ್ಯಾರೆಟ್ ಹಲ್ವಾ (Carrot Halwa), ಲೌಕಿ ಕಾ ಹಲ್ವಾ, ಕಾಶಿ ಹಲ್ವಾ, ಸೂಜಿ ಕಾ ಹಲ್ವಾ, ಆಟೆ ಕಾ ಹಲ್ವಾ, ಬೇಸನ್ ಕಾ ಹಲ್ವಾ, ಹಯಗ್ರೀವಾ ಮತ್ತು ಬಾಂಬೆ ಕರಾಚಿ ಹಲ್ವಾ ಮುಂತಾದ ಪಾಕವಿಧಾನಗಳಿದೆ.ಬೀಟ್‌ರೂಟ್ ಇಷ್ಟಪಡದ ಮಕ್ಕಳಿಗೆ ಇದು ಅತ್ಯುತ್ತಮವಾಗಿದೆ. ಇಂದು ಹಲ್ವಾದಲ್ಲಿ ವಿಭಿನ್ನ ಆದ ರೆಸಿಪಿ (Recipe) ಆದಂತ ಬೀಟ್ರೂಟ್ ಹಲ್ವಾ ರೆಸಿಪಿ ಮಾಡುವುದು ಹೇಗೆ? ಯಾವೆಲ್ಲಾ ಪದಾರ್ಥಗಳು ಬೇಕು, ಪಾಕ ವಿಧಾನ ನೋಡೋಣ.
ಬೀಟ್‍ರೂಟ್ ಹಲ್ವಾ ಮಾಡಲು ಬೇಕಾದ ಪದಾರ್ಥಗಳು
ಬೀಟ್ರೂಟ್, ತಾಜಾ ತುರಿದ 1 ಕಪ್
ಹಾಲು 3 ಕಪ್
ಸಕ್ಕರೆ 1/2 ಕಪ್
ಏಲಕ್ಕಿ ಪುಡಿ 1/4 ಟೀಸ್ಪೂನ್
ತುಪ್ಪ 2 ಚಮಚ
ಗೋಡಂಬಿ 2-3 ಚಮಚ (ಕತ್ತರಿಸಿದ)
ಅಲಂಕಾರಕ್ಕೆ ಬೇಕಾದಷ್ಟು ಪಿಸ್ತಾ
ಬೀಟ್‍ರೂಟ್ ಹಲ್ವಾ ತಯಾರಿಸುವ ವಿಧಾನ
1.ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ
2.ದೊಡ್ಡ ಕಡಾಯಿಯಲ್ಲಿ 2 ಟೇಬಲ್ ಸ್ಪೂನ್ ತುಪ್ಪ ಹಾಕಿ
3.ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ.ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ
4.ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.
5.ಸೌಟ್ನಲ್ಲಿ ಬಾಡಿಸಿ 20 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ, ಸಂಪೂರ್ಣವಾಗಿ ಆವಿಯಾಗುವವರೆಗೂ ಬೀಟ್ರೂಟ್ ಬೇಯಿಸಿ.
6.ಬಳಿಕ ¼ ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ,ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.
- ಸಕ್ಕರೆ ಕರಗುವ ತನಕ ಬೇಯಿಸುವುದನ್ನು ಮುಂದುವರಿಸಿ. ನಂತರ ತುಪ್ಪ ಹಲ್ವಾದಿಂದ ಬೇರ್ಪಟ್ಟಿರುತ್ತದೆ.
8.ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


