ಹೈದರಾಬಾದ್: ಬೀದರದಲ್ಲಿ ಎಟಿಎಂಗೆ ಹಣ ತುಂಬುವ ವಾಹನದ ಮೇಲೆ ಗುಂಡಿನ ದಾಳಿ ನಡೆಸಿ ಸಿಬ್ಬಂದಿಯನ್ನು ಹತ್ಯೆಗೈದು ಹಣದೊಂದಿಗೆ ಪರಾರಿಯಾಗಿದ್ದ ದರೋಡೆಕೋರರು ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾರೆ.
ಈ ವೇಳೆ ಪೊಲೀಸರು ಹಿಡಿಯುವ ಯತ್ನ ಮಾಡಿದ್ದು ಆಗಲೂ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಹೌದು, ದರೋಡೆಕೊರರ ಬಂಧನಕ್ಕಾಗಿ ಬೆನ್ನಟ್ಟಿದ್ದ ಬೀದರ್ ಪೊಲೀಸರು ಹೈದರಾಬಾದ್ ನಲ್ಲಿ ಹಿಡಿಯಲು ಯತ್ನಿಸಿದಾಗ ಟ್ರಾವೆಲ್ ಏಜನ್ಸಿ ಒಳಗೆ ನುಗ್ಗಿದ್ದಾರೆ. ಈ ವೇಳೆ ಅಲ್ಲಿದ್ದ ಮ್ಯಾನೇಜರ್ ಗೂ ಸಹ ಗಾಯಗಳಾಗಿವೆ.
ಮೂವರು ದರೋಡೆಕೋರರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇಡರ್ ನಲ್ಲಿ ನಡೆದದ್ದೇನು?
ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು. ಖದೀಮರು ಹಣ ಕಸಿದು ಪರಾರಿಯಾಗಿದ್ದರು.
ಇಲ್ಲಿನ ಶಿವಾಜಿಚೌಕ್ ವೃತ್ತದಲ್ಲಿ ಈ ದುರ್ಘಟನೆ ನಿನ್ನೆ ಬೆಳಿಗ್ಗೆ ಸಂಭವಿಸಿದ್ದು, ಎಟಿಎಂಗೆ ಹಣ ತುಂಬಲು ಆಗಮಿಸಿದ್ದ ವಾಹನವನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಸಿಬ್ಬಂದಿ ವೆಂಕಟೇಶ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು.
ನಂತರ ಹಣ ತುಂಬಿದ ಎರಡು ಬಾಕ್ಸಗಳನ್ನು ಕಸಿದು ದ್ವಿಚಕ್ರ ವಾಹನದಲ್ಲೇ ಪರಾರಿಯಾಗಿದ್ದರು.
ಘಟನೆ ಸ್ಥಳದಲ್ಲಿದ್ದ ಗ್ರಾಹಕರು ಹಾಗೂ ಸಾರ್ವಜನಿಕರು ಗುಂಡಿನ ದಾಳಿ ಹಾಗೂ ಹಣ ಕಸಿಯುತ್ತಿರುವುದನ್ನು ತಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು.
ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಗುಂಟೆ ಮೂರು ತಂಡಗಳ ರಚನೆ ಮಾಡಿ ನಾಕಾ ಬಂಧಿ ಆಯೋಜಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


