Tuesday, November 3, 2026
spot_img
More
    spot_img
    HomeTop StoryHealth Tips;"ಸಕ್ಕರೆ ಕಾಯಿಲೆ ಕಂಟ್ರೋಲ್‌ ಮಾಡಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿ"

    Health Tips;”ಸಕ್ಕರೆ ಕಾಯಿಲೆ ಕಂಟ್ರೋಲ್‌ ಮಾಡಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿ”

    ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ (Diabetes) ಸಾಮಾನ್ಯವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಅಟ್ಯಾಕ್‌ ಮಾಡುತ್ತಿದೆ.ಇದರ ಜೊತೆಗೆ ಕೆಲವೊಂದು ಬದಲಾವಣೆಗಳನ್ನು ಸಹ ತಂದುಕೊಳ್ಳುವುದು ಅವಶ್ಯಕ. ಒಮ್ಮೆ ಬಂದರೆ ಹೋಗದ ಕಾಯಿಲೆ ಇದಾಗಿದ್ದು, ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಅತ್ಯಂತ ಜಾಗರೂಕತೆ ಬಹಳ ಅವಶ್ಯಕವಿದೆ. ಅಂದರೆ ನಾವು ತಿನ್ನುವ ಆಹಾರ ಪದ್ಧತಿಯಲ್ಲಿ ನಿಯಂತ್ರಣ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.ಅಂದರೆ ಕೆಲವೊಂದು ಆಹಾರಗಳನ್ನು ತಿನ್ನದೇ ಇರುವುದು ಮತ್ತು ಇನ್ನು ಕೆಲವು ಆಹಾರಗಳನ್ನು ಮತ್ತು ಪಾನೀಯಗಳನ್ನು ಸೇವಿಸುವುದು ಅಭ್ಯಾಸ ಮಾಡಿಕೊಂಡರೆ ಸುಲಭವಾಗಿ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡಬಹುದು.ಸಕ್ಕರೆ ಕಾಯಿಲೆ ಇರುವವರು ಈ ಕೆಳಗಿನ ಪಾನೀಯಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

    ಬಾರ್ಲಿ ನೀರು (Barley water)

    ಬಾರ್ಲಿ ನೀರು (Barley water) ಡಯಾಬಿಟಿಸ್ ನಿಯಂತ್ರಣಕ್ಕೆ ಸಹಾಯ ಮಾಡಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ. ಬಾರ್ಲಿಯಲ್ಲಿ ಬೇರಿಯ ಡೈಟರಿ ಫೈಬರ್, ಸೋಡಿಯಮ್, ಪೋಟ್ಯಾಶಿಯಂ ಮತ್ತು ಅನೇಕ ಪೋಷಕಾಂಶಗಳು ಇರುವುದರಿಂದ ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಮತ್ತು ಇನ್ಸುಲಿನ್ ಸೆಕ್ರೇಶನ್ ಅನ್ನು ಸಹ ಉತ್ತಮಗೊಳಿಸಲು ಸಹಾಯ ಮಾಡಬಹುದು.ಬಾರ್ಲಿ ನೀರು ನಿಯಮಿತವಾಗಿ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡಬಹುದು.

    ಹಾಗಲಕಾಯಿ (Bitter gourd)

    ಹಾಗಲಕಾಯಿ (Bitter gourd) ಡಯಾಬಿಟಿಸ್ ನಿಯಂತ್ರಣಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.ನೀವು ಮಧುಮೇಹದಿಂದ ಬಳಲುತ್ತಿದ್ದರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 1 ಕಪ್ ಹಾಗಲಕಾಯಿ ರಸವನ್ನು ಕುಡಿಯಬೇಕು. ಹಾಗಲಕಾಯಿಯಲ್ಲಿ ಪಾಲಿಪೆಪ್ಟೈಡ್ ಇನ್ಸುಲಿನ್ ಕಂಡುಬರುತ್ತದೆ, ಇದು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಹಾಗಲಕಾಯಿಯು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುವ ಗುಣಲಕ್ಷಣಗಳನ್ನು ಹೊಂದಿದೆ. ಹಾಗಲಕಾಯಿಯ ಸೇವನೆಯು ನಿಮ್ಮ ಜೀವಕೋಶಗಳು ಗ್ಲೂಕೋಸ್ ಅನ್ನು ಬಳಸಲು ಸಹಾಯ ಮಾಡುತ್ತದೆ.

    ಮೆಂತ್ಯ ನೀರು (Fenugreek Water)

    ಮೆಂತ್ಯ ಪುಡಿಯ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದರೊಂದಿಗೆ ತೂಕ ಕಡಿಮೆ ಮಾಡಿ, ಡಯಾಬಿಟಿಸ್ ನಿಯಂತ್ರಣ ಮಾಡಿಕೊಳ್ಳಬಹುದು. ಕಾರ್ಬೋಹೈಡ್ರೇಟ್ಗಳ (Carbohydrates) ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಿ, ಮಧುಮೇಹವನ್ನು ನಿಯಂತ್ರಿಸಲು ಮೆಂತ್ಯವು ಸಹಾಯ ಮಾಡುತ್ತದೆ. ಮೆಂತ್ಯದಲ್ಲಿ ಇರುವ ಅನೇಕ ಪೋಷಕಾಂಶಗಳು, ವಿಶೇಷವಾಗಿ ಹಾರ್ಮೋನಲ್ ಸಮತೋಲನೆ ಮತ್ತು ರಕ್ತದಲ್ಲಿ ಸಕ್ಕರೆ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

    ನೆಲ್ಲಿಕಾಯಿ(Amla Juice)

    ನೆಲ್ಲಿಕಾಯಿ ಜ್ಯೂಸ್ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ವಿಟಮಿನ್ C ಸಮೃದ್ಧವಾಗಿರುವ ಆಮ್ಲಾ ನಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಮಧುಮೇಹಿಗಳು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಅನ್ನು ಕುಡಿಯಬೇಕು.ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಜೀರ್ಣಶಕ್ತಿ ಮತ್ತು ಮೆಟಬಾಲಿಸಂ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ.

    ಜೀರಿಗೆ ಟೀ(Cumin tea)

    ಜೀರಿಗೆ ಟೀ (Cumin Tea) ಡಯಾಬಿಟಿಸ್ ನಿಯಂತ್ರಣಕ್ಕೆ ಬಹುಪಯೋಗಿಯಾಗಬಹುದು. ಜೀರಿಗೆ (Cumin) ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಅನೇಕ ಪೋಷಕಾಂಶಗಳನ್ನು ಹೊಂದಿದೆ, ಹಾಗೂ ಇದರಲ್ಲಿ ಸಿಡಿಕವುಳ್ಳ ಗುಣಗಳು ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.ಇದು ಹಸಿವನ್ನು ಕಡಿಮೆ ಮಾಡುವ ಮೂಲಕ, ತೂಕ ಕಡಿಮೆ ಮಾಡಲು ಸಹಾಯ ಮಾಡಬಹುದು.ನಿಯಮಿತವಾಗಿ ಜೀರೆಗೆ ಟೀ ಸೇವಿಸುವುದರಿಂದ ಡಯಾಬಿಟಿಸ್ ನಿಯಂತ್ರಣ ಮಾಡಬಹುದು

    ಅಲೋವೆರಾ ಜ್ಯೂಸ್(Aloe vera juice)

    ಅಲೋವೆರಾದಲ್ಲಿರುವ ಹಲವಾರು ಆರೋಗ್ಯಕಾರಿ ಗುಣಗಳು, ವಿಶೇಷವಾಗಿ ಅದರ ದ್ರವ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಅಲೋವೆರಾದಲ್ಲಿರುವ ಅಂಟಿಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತವೆ.ಇದು ವಿಟಮಿನ್, ಖನಿಜ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ.ಊಟ ಆದ ನಂತರದಲ್ಲಿ ಸಕ್ಕರೆ ಪ್ರಮಾಣ ರಕ್ತದಲ್ಲಿ ಏರಿಕೆ ಆಗುವು ದನ್ನು ಇದರಿಂದ ತಪ್ಪಿಸಬಹುದು.​

    ದಾಲ್ಚಿನ್ನಿ ನೀರು (Cinnamon Water)

    ದಾಲ್ಚಿನ್ನಿಯು ಉತ್ತಮ ಮಸಾಲಾ ಪದಾರ್ಥವಾಗಿದ್ದು, ಜೊತೆಗೆ ಇದು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೂಡಾ ಸಹಕಾರಿಯಾಗಿದೆ. ಒಂದು. ದಾಲ್ಚಿನ್ನಿಯು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ಇನ್ಸುಲಿನ್ ಪರಿಣಾಮಗಳನ್ನು ಅನುಕರಿಸುತ್ತದೆ. ಹೀಗಾಗಿ ಕಾಫಿ (Coffee) ಅಥವಾ ಚಹಾ ಕುಡಿಯುವ ಬದಲು ನೀವು ದಾಲ್ಚಿನ್ನಿ ನೀರನ್ನು ಕುಡಿಯುವುದು ಒಳ್ಳೆಯದು.ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ಇನ್ಸುಲಿನ್‌ ಪರಿಣಾಮಗಳನ್ನು ಅನುಕರಿಸುತ್ತದೆ.ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ಬಹಳ ಪ್ರಯೋಜನಕಾರಿಯಾಗಿದೆ. ಕಾಫಿ ಅಥವಾ ಚಹಾ ಕುಡಿಯುವ ಬದಲು ನೀವು ದಾಲ್ಚಿನ್ನಿ ನೀರನ್ನು ಕುಡಿಯಬಹುದು.

    ನೇರಳೆ ಹಣ್ಣು ರಸ(Purple fruit juice)

    ನೇರಳೆ ಹಣ್ಣಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ನೇರಳೆ ಹಣ್ಣಿನಲ್ಲಿ ಇರುವ ಜಂಬೋಲಿನ್ ಮತ್ತು ಜಾಂಬೋಸಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ.ಮಧುಮೇಹ ನಿರ್ವಹಣೆಗೆ ನೇರಳೆ ಹಣ್ಣು ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿದೆ.ನೇರಳೆ ಹಣ್ಣುಬೀಜಗಳನ್ನು ಪುಡಿ ಮಾಡಿ. ಪ್ರತಿದಿನ ಬೆಳಿಗ್ಗೆ ಎರಡು ಚಮಚ ಪುಡಿಯನ್ನು ಬೆಚ್ಚಗಿನ ನೀರಿನಿಂದ ತೆಗೆದುಕೊಳ್ಳಿ. ಇದು ತಕ್ಷಣವೇ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search