Thursday, September 3, 2026
spot_img
More
    spot_img
    HomeMahakumbh Mela 2025ಹಸುವಿನ ಚರ್ಮದಿಂದ ತಯಾರಿಸಿದ ಬ್ಯಾಗ್‌ ಹಿಡಿದು ಕುಂಭಮೇಳಕ್ಕೆ ಬಂದ ಅಭಿನವ್‌ ಅರೋರಾ; ಬೆಲೆ ಅಬ್ಬಬ್ಬಾ!

    ಹಸುವಿನ ಚರ್ಮದಿಂದ ತಯಾರಿಸಿದ ಬ್ಯಾಗ್‌ ಹಿಡಿದು ಕುಂಭಮೇಳಕ್ಕೆ ಬಂದ ಅಭಿನವ್‌ ಅರೋರಾ; ಬೆಲೆ ಅಬ್ಬಬ್ಬಾ!

    ಬೆಂಗಳೂರು: ಬಾಲಸಂತ, ಧಾರ್ಮಿಕ ಆಧ್ಯಾತ್ಮಿಕ ಪ್ರಭಾವಿ ಎಂದು ಗುರುತಿಸಿಕೊಂಡಿರುವ ಬಾಲಕ ಅಭಿನವ್‌ ಅರೋರಾ ತನ್ನ ಹತ್ತನೇ ವಯಸ್ಸಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿಬಿಟ್ಟಿದ್ದಾನೆ.

    Advertisement

    ಹಿಂದೂ ಧರ್ಮದ ಕುರಿತ ವಿಷಯಗಳನ್ನು ವಿಡಿಯೊ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುವ ಅಭಿನವ್‌ ಅರೋರಾಗೆ ಭಕ್ತರ ಅಭಿಮಾನಿ ಬಳಗವೇ ಇದೆ. ಆರಂಭದಲ್ಲಿ ದೊಡ್ಡ ಮಟ್ಟದ ಸಂಚಲನ ಹುಟ್ಟುಹಾಕಿದ ಅಭಿನವ್‌ ಅರೋರಾ ನಂತರದ ದಿನಗಳಲ್ಲಿ ಕೆಲ ವಿವಾದಗಳನ್ನೂ ಸಹ ಎದುರಿಸಬೇಕಾಯಿತು.

    ಆತನ ಪೋಷಕರು ತಮ್ಮ ಮಗನನ್ನು ಹಣಕ್ಕಾಗಿ ಈ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆಪಾದನೆಗಳೂ ಸಹ ಕೇಳಿಬಂದಿದ್ದವು. ಇದೀಗ ಮತ್ತೊಂದು ವಿವಾದಾತ್ಮಕ ವಿಚಾರದಲ್ಲಿ ಅಭಿನವ್‌ ಅರೋರಾ ಹೆಸರು ಕೇಳಿಬರುತ್ತಿದೆ. ಇತ್ತೀಚೆಗೆ ಆತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದಾಗ ತೆಗೆದುಕೊಂಡು ಹೋಗಿದ್ದ ಬ್ಯಾಗ್‌ ಕಂಡು ನೆಟ್ಟಿಗರು ಟೀಕೆ ಆರಂಭಿಸಿದ್ದಾರೆ.

    ವಿಡಿಯೊವೊಂದರಲ್ಲಿ ಅಭಿನವ್‌ ಅರೋರಾ ಬ್ಯಾಗ್‌ ಹಿಡಿದಿದ್ದು, ಅದು ಲಾರ್ಜ್‌ ಡಿಯೊರ್‌ ಬ್ರಾಂಡ್‌ನದ್ದಾಗಿದೆ. ಇನ್ನು ಈ ಬ್ಯಾಗ್‌ ಬೆಲೆ ಬರೋಬ್ಬರಿ 3,10,000 ರೂಪಾಯಿ ಹಾಗೂ ಈ ಬ್ಯಾಗ್‌ ಅನ್ನು ಕಪ್ಪು ಹಸುವಿನ ಚರ್ಮ ಬಳಸಿ ತಯಾರಿಸಲಾಗಿರುತ್ತದೆ, ಇಂತಹ ಬ್ಯಾಗ್‌ ಅನ್ನು ಮಹಾಕುಂಭ ಮೇಳಕ್ಕೆ ತೆಗೆದುಕೊಂಡು ಹೋಗಿದ್ದಾನೆ, ಇಂತಹ ಭಕ್ತನನ್ನು ನಾನು ನನ್ನ ಜೀವನದಲ್ಲೇ ಕಂಡಿಲ್ಲ ಎಂದು ನೆಟ್ಟಿಗರೊಬ್ಬರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಷಯಕ್ಕಾಗಿ ಅಭಿನವ್‌ ಅರೋರಾ ಸದ್ಯ ಇನ್ನೂ ಹಲವಾರು ಪೋಸ್ಟ್‌ಗಳಲ್ಲಿ ಟ್ರೋಲ್‌ಗೊಳಗಾಗಿದ್ದಾನೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading