ಸ್ನ್ಯಾಕ್ಸ್ ಪಾಯಿಂಟ್ ಅಥವಾ ಚಾಟ್ ಸೆಂಟರ್ಗಳಲ್ಲಿ ಸಿಗುವ ಟೋಸ್ಟ್ಗಿಂತ ಕೂಡ ಹೆಚ್ಚು ರುಚಿಯಾದ ಸ್ಟಫ್ಡ್ ಫ್ರೆಂಚ್ ಟೋಸ್ಟ್ ಅನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದು.ಬೆಳಿಗ್ಗೆ ತಡವಾಗಿ ಎದ್ದು ತಕ್ಷಣ ಏನಾದರೂ ಸಿಂಪಲ್ ತಿಂಡಿ ಬೇಕಾದಾಗ, ಪಿಕ್ನಿಕ್ಗಾಗಿ ಪ್ಯಾಕ್ ಮಾಡಬೇಕಾದಾಗ ಅಥವಾ ತುರ್ತು ಸಂದರ್ಭಗಳಲ್ಲಿ ಪುಟಾಣಿ ತಿಂಡಿ ತಯಾರಿಸಬೇಕಾದರೆ ಈ ಫ್ರೆಂಚ್ ಟೋಸ್ಟ್ ಪರಿಪೂರ್ಣ ಆಯ್ಕೆ. ಕೇವಲ ಅರ್ಧ ನಿಮಿಷದಲ್ಲಿ ಸಿದ್ಧವಾಗುವ ಈ ರುಚಿಕರ ಆಯ್ಕೆ, ಕ್ಷಿಪ್ರವಾಗಿ ತಿಂಡಿ ಬೇಕಾಗುವ ಎಲ್ಲ ಸಂದರ್ಭಗಳಿಗೆ ಸೂಕ್ತವಾಗಿದೆ.ವಿಶೇಷ ಅಂದರೆ ಇದನ್ನು ನಿಮ್ಮ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಸಿದ್ಧಪಡಿಸಬಹುದು. ಮಾರುಕಟ್ಟೆಯಿಂದ ತರಬೇಕಾದ್ದು ಬ್ರೆಡ್, ಮೊಟ್ಟೆ ಅಥವಾ ಬಾಳೆಹಣ್ಣು ಮಾತ್ರ. ಇಲ್ಲದಿದ್ದರೆ ಅತಿ ತ್ವರಿತವಾಗಿ ಇರುವ ವಸ್ತುಗಳನ್ನೇ ಬಳಸಿ ಸಿದ್ಧಪಡಿಸಬಹುದು. ಸಮಯ ಕಡಿಮೆ ಇದ್ದರೂ ಬೇಗನೇ ತಯಾರಿಸಬಹುದು. ಒಮ್ಮೆ ಮಾಡಿ ನೋಡಿ, ಮಕ್ಕಳಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ!

ಸ್ಟಫ್ಡ್ ಫ್ರೆಂಚ್ ಟೋಸ್ಟ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ – 2
ಚಿಲ್ಲಿ ಫ್ಲೇಕ್ಸ್ – ಅರ್ಧ ಟೀ ಸ್ಪೂನ್
ಚಾಟ್ ಮಸಾಲ – ಅರ್ಧ ಟೀ ಸ್ಪೂನ್
ಜೀರಿಗೆ ಪುಡಿ – ಅರ್ಧ ಟೀ ಸ್ಪೂನ್
ಕೊತ್ತಂಬರಿಸೊಪ್ಪು – ಸ್ವಲ್ಪ
ಕರಿಮೆಣಸಿನಪುಡಿ – 1 ಟೀ ಸ್ಪೂನ್
ಸ್ಯಾಂಡ್ ವಿಚ್ ಬ್ರೆಡ್ – 4
ಮೊಟ್ಟೆ – 2
ಹಾಲು – 1 ಕಪ್
ಬೆಣ್ಣೆ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಸ್ಟಫ್ಡ್ ಫ್ರೆಂಚ್ ಟೋಸ್ಟ್ ಮಾಡುವ ವಿಧಾನ
ಮೊದಲಿಗೆ 2 ಆಲೂಗಡ್ಡೆಯನ್ನು ತೊಳೆದು ಕುಕ್ಕರ್ ನಲ್ಲಿ ಹಾಕಿ ನೀರು ಸೇರಿಸಿ 3 ವಿಸಿಲ್ ಕೂಗಿಸಿಕೊಳ್ಳಬೇಕು.
ಕುಕ್ಕುರ್ ತಣ್ಣಗಾದ ಮೇಲೆ ಆಲೂಗಡ್ಡೆ ಸಿಪ್ಪೆಯನ್ನು ತೆಗೆದು, ಒಂದು ಬೌಲ್ ನಲ್ಲಿ ಹಾಕಿ ಮ್ಯಾಶ್ ಮಾಡಿಕೊಳ್ಳಬೇಕು.
ಇದಕ್ಕೆ ಅರ್ಧ ಟೀ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಸ್ವಲ್ಪ ಉಪ್ಪು, ಅರ್ಧ ಟೀ ಸ್ಪೂನ್ ಚಾಟ್ ಮಸಾಲ, ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ, ಸಣ್ಣದಾಗಿ ಹಚ್ಚಿರುವ ಕೊತ್ತಂಬರಿಸೊಪ್ಪು, ಅರ್ಧ ಟೀ ಸ್ಪೂನ್ ಕರಿಮೆಣಸಿನಪುಡಿ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಸ್ಯಾಂಡ್ ವಿಚ್ ಬ್ರೆಡ್ ಎರಡು ಸ್ಲೇಸ್ ಅನ್ನು ತೆಗೆದುಕೊಂಡು ಸೈಡ್ಸ್ ನ್ನು (ಬ್ರೌನ್ ಎಡ್ಜ್) ಕಟ್ ಮಾಡಿಕೊಳ್ಳಬೇಕು. ಈಗ ಆಲೂಗಡ್ಡೆ ಮಿಶ್ರಣವನ್ನು ಸ್ವಲ್ಪ ತೆಗೆದುಕೊಂಡು ಬ್ರೆಡ್ ಒಂದಕ್ಕೆ ಹಾಕಿ ಸ್ಪ್ರೆಡ್ ಮಾಡಿಕೊಳ್ಳಬೇಕು. ಇನ್ನೊಂದು ಬ್ರೆಡ್ ಸ್ಲೇಸ್ ನಿಂದ ಮುಚ್ಚಬೇಕು.
ಒಂದು ಬೌಲ್ ನಲ್ಲಿ 2 ಮೊಟ್ಟೆಯ ಒಳಗಿನ ಭಾಗವನ್ನು ಹಾಕಿಕೊಳ್ಳಬೇಕು. ಇದಕ್ಕೆ 1 ಕಪ್ ಹಾಲನ್ನು ಸೇರಿಸಿ, ಕಾಲು ಟೀ ಸ್ಪೂನ್ ಕರಿಮೆಣಸಿನಪುಡಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಈ ಮಿಕ್ಸ್ ನಲ್ಲಿ ಬ್ರೆಡ್ ಸ್ಲೇಸ್ ನ್ನು ಮುಳುಗಿಸಿ, ಎರಡೂ ಸೈಡ್ ನಲ್ಲಿ ಮೊಟ್ಟೆ ಪೇಸ್ಟ್ ಸ್ಪ್ರೆಡ್ ಆಗುವಂತೆ ಮಾಡಿಕೊಳ್ಳಬೇಕು. (ಮೊಟ್ಟೆ ಮಿಕ್ಸ್ ನಲ್ಲಿ ಮುಳುಗಿಸಿ ತೆಗೆದರೆ ಸಾಕು, ಜಾಸ್ತಿ ಸಮಯ ಅದರೊಳಗೆ ಬಿಡಬೇಡಿ
ಸ್ಟೌವ್ ಮೇಲೆ ಒಂದು ತವಾ ಇಟ್ಟು 1 ಟೀ ಸ್ಪೂನ್ ಬೆಣ್ಣೆ ಹಾಕಿ ಸವರಿಕೊಳ್ಳಬೇಕು. (ಬೆಣ್ಣೆ ಬದಲಿಗೆ ತುಪ್ಪ ಸಹ ಬಳಸಬಹುದು) ತವಾ ಬಿಸಿಯಾದ ಮೇಲೆ ಬ್ರೆಡ್ ಸ್ಲೇಸ್ ನ್ನು ಇಟ್ಟು ಮೀಡಿಯಂ ಫ್ಲೇಮ್ ನಲ್ಲಿ ಫ್ರೈ ಮಾಡಬೇಕು.
ಫ್ರೈ ಆದ ಸ್ಟಫ್ಡ್ ಫ್ರೆಂಚ್ ಟೋಸ್ಟ್ ನ್ನು ಸರ್ವಿಂಗ್ ಪ್ಲೇಟ್ ಗೆ ಹಾಕಿ. ಇದರ ಜೊತೆ ಮಯೋನೈಸ್ ಅಥವಾ ಟೊಮೆಟೋ ಕೆಚಪ್ ಜೊತೆ ಸವಿದರೆ ಇದರ ರುಚಿ ಬಾಯಿ ಚಪ್ಪರಿಸಿಕೊಂಡು ತಿನ್ನುವಂತಿರುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


