ಬೆಂಗಳೂರು: ಇಂದು ( ಏಪ್ರಿಲ್ 7 ) ಜಾತಿಗಣತಿ ವರದಿ ಕುರಿತಾಗಿ ವಿಧಾನಸಭೆಯಲ್ಲಿ ಆಯೋಜಿಸಲಾಗಿದ್ದ ಸಚಿವ ಸಂಪುಟ ಸಭೆ ಅಂತ್ಯಗೊಂಡಿದೆ. ಇನ್ನು ಇಂದು ಈ ಜಾತಿಗಣತಿ ಕುರಿತಾಗಿ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೇ ಅಂತ್ಯಗೊಳಿಸಲಾಗಿದೆ.
ಇನ್ನು ಕೆಲ ಕಲಾ ಈ ಕುರಿತು ಚರ್ಚೆ ನಡೆದಿದ್ದು, ಯಾವ ಸಚಿವರು ಇದನ್ನು ವಿರೋಧಿಸಿದರೋ ಅಂಥವರಿಗೆ ಸಿಎಂ ಸಿದ್ದರಾಮಯ್ಯ ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಿ ಎಂದು ಕೇಳಿದ್ದಾರೆ.
ಸಭೆ ಮುಕ್ತಾಯವಾದ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೇವಲ ಚರ್ಚೆ ನಡೆದಿದೆ, ಮುಖ್ಯಮಂತ್ರಿಗಳು ಅಭಿಪ್ರಾಯ ಸಲ್ಲಿಸಲು ತಿಳಿಸಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮುಂದುವರಿಯಲಿದೆ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


