ಬೆಳಗಾವಿ: ಕಳೆದ ಒಂದು ವಾರದಿಂದ ಪರ ವಿರೋಧ ಹಾಗೂ ವಾಕ್ಸಮರಗಳಿಗೆ ವೇದಿಕೆಯಾಗಿರುವ ಕರ್ನಾಟಕ ಜಾತಿಗಣತಿ ವರದಿ ಕುರಿತು ಇಂದು ( ಏಪ್ರಿಲ್ 17 ) ವಿಶೇಷ ಸಂಪುಟ ಸಭೆ ಕರೆಯಲಾಗಿದೆ.
ಸಂಜೆ 4ರಿಂದ ಈ ಸಭೆ ಆರಂಭಗೊಳ್ಳಲಿದ್ದು, ಸಚಿವರು ಈಗಾಗಲೇ ವರದಿಯನ್ನು ಅಧ್ಯಯನ ಮಾಡಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಿದ್ಧರಿದ್ದಾರೆ. ಇನ್ನು ಈ ವರದಿಯದ್ದು ಎನ್ನಲಾದ ಜಾತಿವಾರು ಜನಸಂಖ್ಯೆಯ ಅಂಕಿಅಂಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಅಂಕಿಅಂಶದ ಪ್ರಕಾರ ಮುಸ್ಲಿಂ ಜನಸಂಖ್ಯೆಯೇ ರಾಜ್ಯದ ಅತಿದೊಡ್ಡ ಜನಸಂಖ್ಯೆ ಎನ್ನಲಾಗಿತ್ತು.
ಈ ಕುರಿತು ಶಾಸಕ ಹ್ಯಾರಿಸ್ ಇಂದು ಮಾತನಾಡಿದ್ದು, ಮುಸ್ಲಿಂ ಜನಸಂಖ್ಯೆ ಜಾಸ್ತಿ ಇದೆಯಾ ಎಂಬ ಪ್ರಶ್ನೆ ಎದುರಾದಾಗ ಹೌದು ಎಂದರು, ಬೆನ್ನಲ್ಲಿ ಅಧಿಕೃತವಾಗಿ ಮಾಹಿತಿ ಹೊರಬರಲಿ ಜಾಸ್ತಿ ಆಗಿರಬಹುದು ಅಂತ ಹೇಳ್ತಾ ಇದ್ದೇನೆ ಅಷ್ಟೆ ಎಂದು ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಹ್ಯಾರಿಸ್ ಜಾತಿಗಣತಿಯನ್ನು ಬೆಂಬಲಿಸಿದರು. ಜಾತಿಗಣತಿ ಮಾಡಲಿ ಬಿಡಿ, ಅದರಿಂದ ಎಲ್ಲ ಜಾತಿಯವರ ಬಗ್ಗೆಯೂ ಗೊತ್ತಾಗುತ್ತೆ, ಯಾವುದೋ ಒಂದು ಜಾತಿಯದ್ದು ಅಲ್ವಲ್ಲ, ಒಳ್ಳೆಯದು ಎಂದು ಪರವಾಗಿ ಮಾತನಾಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


