ನಿರುದ್ಯೋಗ ಯುವಕರಿಗೆ centrally sponsored AIIMS ನವದೆಹಲಿಯಿಂದ ಸಿಹಿ ಸುದ್ದಿ ಬಂದಿದೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ನವದೆಹಲಿ, 2025ರ ಸಾಮಾನ್ಯ ನೇಮಕಾತಿ ಪರೀಕ್ಷೆ (General Recruitment Exam 2025)ಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, 2,300 ಕ್ಕೂ ಹೆಚ್ಚು ಗ್ರೂಪ್ A ಮತ್ತು B ವಿಭಾಗದ ಅಧ್ಯಾಪಕರಲ್ಲದ ಹುದ್ದೆಗಳ ಭರ್ತಿಗೆ ಮುಂದಾಗಿದೆ.ಈಗಾಗಲೇ ಅರ್ಜಿಯನ್ನು ವೆಬ್ಸೈಟ್ನಲ್ಲಿ ಬಿಡಲಾಗಿದೆ.
ಈ ಹುದ್ದೆಗಳ ನೇಮಕಾತಿಯ ಉದ್ದೇಶ, ನವದೆಹಲಿಯ AIIMS ಮಾತ್ರವಲ್ಲದೆ, ಇತರೆ ವಿವಿಧ ಏಮ್ಸ್ ಹಾಗೂ ಕೇಂದ್ರ ಸರ್ಕಾರದ ವೈದ್ಯಕೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು. ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2025ರ ಜುಲೈ 31 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ http://www.aiimsexams.ac.in ಗೆ ಭೇಟಿ ನೀಡಿ.ಈ ಹಿನ್ನೆಲೆಯಲ್ಲಿ, ಈ ನೇಮಕಾತಿ ಉದ್ಯೋಗಾರ್ಹ ಯುವಕರಿಗೆ ಒಂದು ಸುವರ್ಣಾವಕಾಶ. ಯಾವುದೇ ವಿಭಾಗದಿಂದ (ಸೈನ್ಸ್, ಆರ್ಟ್ಸ್ ಅಥವಾ ಕಾಮರ್ಸ್) ಪದವೀಧರರಾದ ಅಭ್ಯರ್ಥಿಗಳು ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ :
AIIMS CRE ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿ ಹೊಂದಿರಬೇಕು. ವಿಷಯವಾರು ಅರ್ಹತಾ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು. ವೆಬ್ ಸೈಟ್ ನಲ್ಲಿ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಹಾಗೂ ಅನುಭವದ ಬಗ್ಗೆ ಮಾಹಿತಿ ಲಭ್ಯವಿದೆ.
ವಯಸ್ಸಿನ ಮಿತಿ;
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷಗಳ ನಡುವೆ ಇರಬೇಕು
ಪರೀಕ್ಷೆ ವಿಧಾನ ಹೇಗೆ?
ಪರೀಕ್ಷೆಯನ್ನು ಆಗಸ್ಟ್ 25 ಮತ್ತು 26 ರಂದು ನಿಗದಿಪಡಿಸಲಾಗಿದೆ. ಅಡ್ಮಿಟ್ ಕಾರ್ಡ್ ಆಯಾ ಹುದ್ದೆ / ಗುಂಪಿನ ಪರೀಕ್ಷಾ ದಿನಾಂಕಕ್ಕಿಂತ 3 ದಿನಗಳ ಮೊದಲು ಅಪ್ಲೋಡ್ ಮಾಡಲಾಗುತ್ತದೆ. ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡುವ 7 ದಿನಗಳ ಮೊದಲು ನೀವು ಎಲ್ಲಿ ಪರೀಕ್ಷೆ ಬರೆಯಬಹುದು ಎಂಬ ಮಾಹಿತಿ ನೀಡಲಾಗುತ್ತೆ.
ಆಯ್ಕೆ ಹೇಗೆ? : ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ನಡೆಯುತ್ತದೆ. ನಂತ್ರ ದಾಖಲೆ ಪರಿಶೀಲನೆ ಮತ್ತು ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಟ್ಟು 400 ಅಂಕಗಳಿಗೆ ನಡೆಯುತ್ತದೆ. ತಪ್ಪು ಉತ್ತರಗಳಿಗೆ 0.25 ಅಂಕ ಕಡಿತ ಮಾಡಲಾಗುವುದು.
AIIMS ಸಾಮಾನ್ಯ ನೇಮಕಾತಿ ಪರೀಕ್ಷೆ 2025 ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಆಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ,ಮೊದಲು AIIMS ನ ಅಧಿಕೃತ ವೆಬ್‌ಸೈಟ್ http://www.aiimsexams.ac.in ಗೆ ಹೋಗಿ.
ನೇಮಕಾತಿ ವಿಭಾಗವನ್ನು ತೆರೆಯಿರಿ ಮುಖ್ಯ ಪುಟದಲ್ಲಿ “Recruitment” ವಿಭಾಗದ ಮೇಲೆ ಕ್ಲಿಕ್ ಮಾಡಿ. ಇದರಿಂದ ಹೊಸ ವಿಂಡೋ ಒಂದು ತೆರೆಯುತ್ತದೆ.
ಸಾಮಾನ್ಯ ನೇಮಕಾತಿ ಪರೀಕ್ಷೆ ಆಯ್ಕೆಮಾಡಿ ಈ ಪುಟದಲ್ಲಿ “Common Recruitment Examination” ಎಂಬ ಲಿಂಕ್‌ನ್ನು ಕ್ಲಿಕ್ ಮಾಡಿ.
ಹುದ್ದೆಗಳ ಮಾಹಿತಿ ಪರಿಶೀಲಿಸಿ ಇಲ್ಲಿ ನೀವು ವಿವಿಧ ಹುದ್ದೆಗಳ ವಿವರಗಳನ್ನು ವೀಕ್ಷಿಸಬಹುದು. ಅರ್ಹತೆ, ವೇತನ, ಹುದ್ದೆಗಳ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಓದಿ.
ಹೊಸ ಖಾತೆ ರಚಿಸಿ ನೀವು ಹೊಸಬರೇ ಆಗಿದ್ದರೆ, “New Registration” ಮೂಲಕ ಹೊಸ ಖಾತೆ ರಚಿಸಿ. ಅಗತ್ಯವಿರುವ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ.
ಲಾಗಿನ್ ಮಾಡಿ ನೋಂದಣಿ ಪೂರ್ಣಗೊಂಡ ನಂತರ, ಲಾಗಿನ್ ಮಾಡಿ ಮತ್ತು ಅರ್ಜಿ ಭರ್ತಿ ಪ್ರಕ್ರಿಯೆ ಮುಂದುವರಿಸಿ.
ಅರ್ಜಿಯನ್ನು ಭರ್ತಿ ಮಾಡಿ ಎಲ್ಲ ಅಗತ್ಯ ಡಿಟೇಲ್ಸ್ ನಮೂದಿಸಿ, ಬೇಡಿಕೆಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸಿ.
ಅರ್ಜಿಯ ಪ್ರತಿಯನ್ನು ಸೇವ್ ಮಾಡಿ ಅರ್ಜಿ ಸಲ್ಲಿಸಿದ ನಂತರ, ಅದನ್ನು ಪ್ರಿಂಟ್ ತೆಗೆದು ಭವಿಷ್ಯದ ಬಳಕೆಗೆ ಇಟ್ಟುಕೊಳ್ಳಿ.
ಈ ಹಂತಗಳನ್ನು ಅನುಸರಿಸಿದರೆ ನೀವು ಸುಲಭವಾಗಿ AIIMS ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆಯಾಗದಂತೆ ಇತ್ತೀಚಿನ ಪಾಸ್‌ಪೋರ್ಟ್ ಫೋಟೋ, ಸಹಿ, ವಿದ್ಯಾರ್ಹತೆ ಪ್ರಮಾಣ ಪತ್ರಗಳು ಮೊದಲಾದವುಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.
10ನೇ ತರಗತಿ ಪಾಸಾದವರಿಗೆ ಕೆಲಸ; BHELನಲ್ಲಿ 515 ಗ್ರೇಡ್-IV ಹುದ್ದೆಗಳ ನೇಮಕಾತಿ ಆರಂಭ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


