ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆಗಳ ಅಸ್ತಿಪಂಜರಗಳನ್ನು ಸಮಾಧಿ ಅಗೆದು ತೋರಿಸುತ್ತೇನೆ ಎಂದು ಈ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ವಚ್ಛತಾ ಸಿಬ್ಬಂದಿಯೋರ್ವ ಪಾಪಪ್ರಜ್ಞೆ ಕಾಡಿದ ಕಾರಣ ಪೊಲೀಸರಿಗೆ ದೂರು ನೀಡಿದ್ದ. ಜತೆಗೆ ಅಸ್ತಿಪಂಜರವನ್ನೂ ಸಹ ಠಾಣೆಗೆ ಒದಿಗಿಸಿದ್ದ.
ಈ ದೂರು ನೆಲಕಚ್ಚಿದ್ದ ಧರ್ಮಸ್ಥಳ ಸರಣಿ ಕೊಲೆ ಆರೋಪಗಳಿಗೆ ಪುಷ್ಠಿ ನೀಡಿತ್ತು. ಆದರೆ ದೂರು ದಾಖಲಾಗಿ ಐದಾರು ದಿನ ಕಳೆದರೂ ಇನ್ನೂ ಪೊಲೀಸರು ಅಸ್ತಿಪಂಜರ ಸಿಕ್ಕ ಸ್ಥಳದ ಮಹಜರನ್ನು ನಡೆಸಿಲ್ಲ ಎಂದು ದೂರುದಾರನ ಪರ ವಕೀಲರು ಆರೋಪಿಸಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಎಸ್‌ಪಿ ನಿನ್ನೆ ( ಜುಲೈ 16 ) ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿ ಸಾಕ್ಷಿದಾರ ಸ್ಥಳ ಮಹಜರು ನಡೆಸಿದ ಬಳಿಕ ತಲೆ ಮರೆಸಿಕೊಳ್ಳುವ ಸಾಧ್ಯತೆಗಳಿದ್ದು, ತನಿಖಾಧಿಕಾರಿ ಸೂಚನೆ ಮೇರೆಗೆ ಸ್ಥಳ ಮಹಜರನ್ನು ನಡೆಸುವುದಾಗಿ ತಿಳಿಸಿದ್ದಾರೆ.
ಇತ್ತ ದೂರುದಾರ ಹಾಗೂ ಆತನ ವಕೀಲರು ನಿನ್ನೆ ಧರ್ಮಸ್ಥಳಕ್ಕೆ ಬಂದು ಹಾಗೆಯೇ ವಾಪಸ್ ಆಗಿದ್ದರು. ದೂರುದಾರ ದೂರು ನೀಡುವ ವೇಳೆ ನೀಡಿದ್ದ ಅಸ್ತಿಪಂಜರ ತೆಗೆದ ಸ್ಥಳದ ಮಹಜರು ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ನಿನ್ನೆ ಇದ್ಯಾವುದೂ ಆಗದೇ ವಾಪಸ್ ಆಗಿದ್ದಾರೆ. ಈ ಕುರಿತು ದೂರುದಾರನ ಪರ ವಕೀಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿನ್ನೆ ಎಸ್‌ಪಿ ಅವರು ನೀಡಿರುವ ಹೇಳಿಕೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ ಎಂದಿರುವ ವಕೀಲರು ಪೊಲೀಸರು ಈ ದೂರಿನ ಹಿಂದಿನ ಉದ್ದೇಶವನ್ನೇ ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದೂರುದಾರನನ್ನು ಪೊಲೀಸರು ಕರೆದಿರಲಿಲ್ಲ, ಯಾವದೇ ತನಿಖೆ ನಡೆಯುತ್ತಿರಲಿಲ್ಲ ಅಥವಾ ಅಲ್ಲ ಹೂತು ಹಾಕಿರುವ ನೂರಾರು ಶವಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ದೂರುದಾರ ತನಗೆ ಕಾಡಿದ ಪಾಪಪ್ರಜ್ಞೆಯಿಂದ ಸ್ವತಃ ದೂರು ನೀಡಿದ್ದಾನೆ. ಆದರೆ ಇದನ್ನು ಪೊಲೀಸು ಉಲ್ಲೇಖಿಸಿಯೇ ಇಲ್ಲ ಎಂದು ವಕೀಲರು ಆರೋಪಸಿದ್ದಾರೆ.
5 ವರ್ಷ ದಾಟಿದ ಮಕ್ಕಳ ‘ಆಧಾರ್’ ಅಪ್ ಡೇಟ್ ಮಾಡೋದು ಕಡ್ಡಾಯ, ಇಲ್ಲಿದೆ ಮಾಹಿತಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


