30 ಬ್ಯೂಟಿ ಪಾರ್ಲರ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ., ಇದೇ ವೇಳೆ 10 ಪಾರ್ಲರ್ ಗಳನ್ನು ಸೀಜ್ ಮಾಡಿದ್ದು, 20 ಪಾರ್ಲರ್ ಗಳಿಗೆ ನೋಟಿಸ್ ನೀಡಿದ್ದಾರೆ. ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಮೇಕಪ್, ವ್ಯಾಕ್ಸಿಂಗ್ ಮಾಡಬೇಕಿದ್ದ ಪಾರ್ಲರ್ ಗಳಲ್ಲಿ ಬೇರೆಯೇ ವ್ಯವಹಾರಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಬೆಳಗಾವಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ಗಳ ಮೇಲೆ ಆರೋಗ್ಯ ಅಧಿಕಾರಿಗಳು ಇಂದು ಏಕಾಏಕಿ ದಾಳಿ ಮಾಡಿದ್ದಾರೆ. ಬೆಳಗಾವಿ ನಗರದ ವಿವಿಧ ಬ್ಯೂಟಿ ಪಾರ್ಲರ್ ಗಳಲ್ಲಿ ಕೂದಲಿನ ಕಸಿ, ಕೆಮಿಕಲ್ ಮಿಶ್ರಿತ ವಸ್ತುಗಳ ಬಳಕೆ, ಸ್ಟಿರೈಡ್ ಸೇರಿದಂತೆ ಚರ್ಮದ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ದೂರು ನೀಡಿದ್ದರು.
ಸುಮಾರು 30 ಪಾರ್ಲರ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಆಘಾತಕಾರಿ ಎಂಬಂತೆ ಸಾಕಷ್ಟು ಕೆಮಿಕಲ್ ವಸ್ತುಗಳು, ಸಿರೈಡ್‌ನಂತಹ ಔಷಧಿಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಸೀಜ್ ಮಾಡಿರುವ ಅಂಗಡಿಗಳ ಮಾಲೀಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
,ದರ್ಶನ್ ಜಾಮೀನು ರದ್ದು ಕುರಿತು ರಮ್ಯಾ ಹೀಗೆ ಪೋಸ್ಟ್ ಹಾಕಿದ್ದಾರೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


