Monday, August 31, 2026
spot_img
More
    spot_img
    HomeLatest newsಮೈಸೂರು ಮುಡಾದಲ್ಲಿ ಅಕ್ರಮ ಆಗಿರೋದು ನಿಜ: ಶಾಸಕ ಟಿ.ಎಸ್ ಶ್ರೀವತ್ಸ

    ಮೈಸೂರು ಮುಡಾದಲ್ಲಿ ಅಕ್ರಮ ಆಗಿರೋದು ನಿಜ: ಶಾಸಕ ಟಿ.ಎಸ್ ಶ್ರೀವತ್ಸ

    ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಬಂಧನವನ್ನು ಸ್ವಾಗತಿಸಿದರು. ನಾನು ಈ ಹಿಂದೆಯೇ ಹೇಳಿದ್ದೆ. ಮುಡಾದಲ್ಲಿ ಅಕ್ರಮ ಆಗಿರೋದು ನಿಜ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಅನೇಕರ ಬಂಧನ ಆಗಬೇಕು. ಈ ಹಿಂದಿನ ಅಧ್ಯಕ್ಷರು, ಆಯುಕ್ತರು, ಅಧಿಕಾರಿಗಳ ಬಂಧನ ಆಗಬೇಕು. ಅಕ್ರಮವಾಗಿ ಸಾವಿರಾರು ಸೈಟುಗಳನ್ನು ಹಂಚಿದ್ದಾರೆ. ಕೇವಲ ದಿನೇಶ್ ಕುಮಾರ್ ಬಂಧನ ಆದ್ರೆ ಸಾಲಲ್ಲ. ಇನ್ನು ಅನೇಕರ ವಿರುದ್ಧ ತನಿಖೆ ಆಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯುತ್ತಿರುತ್ತದೆ ಎಂದು ಎಚ್ಚರಿಕೆ ನೀಡಿದರು.

    Advertisement

    ಇನ್ನು ಕೆ.ಆರ್.ಮೊಹಲ್ಲಾದ ಗಾಡಿ ಚೌಕ ದರ್ಗಾ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಲ್ಲಿ ಈಗಾಗಲೇ ದರ್ಗಾವಿದೆ. ಇನ್ನೊಂದು ದರ್ಗಾಕ್ಕೆ ಆಯುಕ್ತರು ಯಾಕೆ ನೋಟಿಫಿಕೇಷನ್ ಕೊಟ್ಟಿದ್ದಾರೆ?‌ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿ ಇರುವ ದರ್ಗಾದ ಬಗ್ಗೆ ನಾವು ಪ್ರಶ್ನೆ ಮಾಡಲ್ಲ. ಅದು ಅಕ್ರಮ ಸಕ್ರಮ ಅದನ್ನು ಈಗ ಚರ್ಚೆ ಮಾಡಲ್ಲ. ದರ್ಗಾ ಇದ್ರು ಕೂಡ ಇನ್ನೊಂದು ದರ್ಗಾ ಯಾಕೆ ಅನ್ನೋದು ನಮ್ಮ ಪ್ರಶ್ನೆ. ಅಲ್ಲಿ ಆಟೋಗಳನ್ನು ನಿಲ್ಲಿಸುತ್ತಾರೆ. ಬೆಂಕಿ ಹಚ್ಚಿ ನಮ್ಮ ಮೇಲೆ ಹಾಕಿದ್ರೆ ಯಾರು ಹೊಣೆ? ಈ ಬಗ್ಗೆ ಕಮಿಷನರ್‌ಗೆ ದೂರು ಕೊಡುತ್ತೇನೆ. ಈ ಕೂಡಲೇ ಅಲ್ಲಿ ಇರುವ ಎಲ್ಲವನ್ನೂ ಖಾಲಿ ಮಾಡಿಸಬೇಕು. ಒಂದು ಧಾರ್ಮಿಕ ಕೇಂದ್ರವಿದೆ. ಅದನ್ನು ಬಿಟ್ಟು ಮಿಕ್ಕಿದ್ದು ಏನು ಕೂಡ ಅಲ್ಲಿರೋದು ಬೇಡ. ದರ್ಗಾ ಇರುವ ಬಗ್ಗೆ ಯಾವ ಮ್ಯಾಪ್‌ನಲ್ಲೂ ಉಲ್ಲೇಖ ಇಲ್ಲ. ಏನಾದ್ರೂ ಇದ್ರೆ ದಾಖಲೆಗಳನ್ನು ಕೊಡಲಿ ಎಂದು ಸವಾಲು ಹಾಕಿದರು.

    ಕಾಂಗ್ರೆಸ್‌ ಮಾತ್ರ ಉತ್ತಮ ಆಡಳಿತ ನೀಡಬಲ್ಲ ಪಕ್ಷ ಎಂಬ ಸುಳ್ಳನ್ನು ಮೋದಿ ಛಿದ್ರಗೊಳಿಸಿದರು: ಎಚ್‌ಡಿ ದೇವೇಗೌಡ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading