ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯಾಗಿರುವುದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಬಾನು ಮುಷ್ತಾಕ್ ಮುಸ್ಲಿಂ ಸಮುದಾಯದ ಮಹಿಳೆ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪ್ರತಾಪ್ ಸಿಂಹ ಈ ವಿರುದ್ಧ ರೊಚ್ಚಿಗೆದ್ದು ಹೈಕೋರ್ಟ್ ಮೆಟ್ಟಿಲೇರಿ ಮುಖಭಂಗ ಅನುಭವಿಸಿದ್ದಾರೆ.
ಅತ್ತ ಬಿಜೆಪಿಯಿಂದ ಉಚ್ಚಾಟಿತನಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯದವರು ತಾಯಿ ಚಾಮುಂಡೇಶ್ವರಿಗೆ ಹೂವು ಹಾಕಿ ದಸರಾ ಉದ್ಘಾಟನೆ ಮಾಡುವುದು ಸರಿಯಲ್ಲ, ಅದು ಸನಾತನ ಧರ್ಮಕ್ಕೆ ಮಾಡುವ ಅಪಮಾನ ಎಂದಿರುವ ಯತ್ನಾಳ್ ಚಾಮುಂಡೇಶ್ವರಿಗೆ ಸನಾತನ ಧರ್ಮದವರೇ ಹೂ ಹಾಕಬೇಕು, ಪೂಜೆ ಸಲ್ಲಿಸಬೇಕು ಎಂದಿದ್ದಾರೆ.
ಹಾಗೆಯೇ ದಲಿತ ಮಹಿಳೆಗೂ ಸಹ ಚಾಮುಂಡೇಶ್ವರಿಗೆ ಹೂ ಹಾಕುವ ಅಧಿಕಾರವಿಲ್ಲ ಎಂದಿರುವ ಯತ್ನಾಳ್ ಬಾನು ಮುಷ್ತಾಕ್ ಕೈನಲ್ಲಿ ದಸರಾ ಉದ್ಘಾಟನೆ ಮಾಡಿಸುವ ಸಿದ್ದರಾಮಯ್ಯಗೆ ಚಾಮುಂಡಿ ಶಾಪ ತಟ್ಟಿ ರಾಜಕೀಯದಲ್ಲಿ ನೆಲಕಚ್ಚಲಿದ್ದಾರೆ ಎಂದೂ ಸಹ ಹೇಳಿದ್ದಾರೆ.
ಹೀಗೆ ಬಾನು ಮುಷ್ತಾಕ್ ವಿರುದ್ಧ ಕೋಮು ದ್ವೇಷದ ಹೇಳಿಕೆ ನೀಡಿದ ಯತ್ನಾಳ್ ಹಿಂದೂ ಧರ್ಮದ ಒಂದು ಭಾಗವಾಗಿರುವ ದಲಿತ ಸಮುದಾಯದವರೂ ಸಹ ಚಾಮುಂಡೇಶ್ವರಿಗೆ ಪೂಜೆ ಮಾಡಲು ಅಧಿಕಾರ ಹೊಂದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಇದೀಗ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರೈಲು ಪ್ರಯಾಣಿಕರಿಗೆ ಹೊಸ ನಿಯಮ: ಅಕ್ಟೋಬರ್ನಿಂದ ಆನ್ಲೈನ್ ಟಿಕೆಟ್ಗೆ ಆಧಾರ್ ವೆರಿಫಿಕೇಶನ್ ಕಡ್ಡಾಯ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


