ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಚಿನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ಅದೇ ಚಿನ್ನಯ್ಯನನ್ನು ಬಂಧಿಸಿದ ಬಳಿಕ ತನಿಖೆಯನ್ನು ಮುಂದುವರಿಸಿದೆ.
ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕ್ರೂರವಾಗಿ ಕೊಲ್ಲಲ್ಪಟ್ಟ ಸೌಜನ್ಯಳ ಮಾವ ವಿಠ್ಠಲ ಗೌಡ ಎಸ್‌ಐಟಿ ಅಧಿಕಾರಿಗಳನ್ನು ಭೇಟಿಯಾಗಿ ಶವ ಹೂತಿಟ್ಟ ಜಾಗಗಳ ಬಗ್ಗೆ ಮಾಹಿತಿ ಕೊಟ್ಟಿದ್ದು, ಸ್ಥಳ ಮಹಜರಿನ ವೇಳೆ ಕನಿಷ್ಟ 8 ಅಸ್ತಿಪಂಜರಗಳನ್ನು ಕಂಡಿದ್ದೇನೆ ಎಂದು ಸ್ಪೋಟಕ ಹೇಳಿಕೆಯನ್ನೂ ಸಹ ನೀಡಿದೆ.
ಹೀಗಾಗಿ ಎಸ್‌ಐಟಿ ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯ ನಡೆಸಲು ಮುಂದಾಗಿತ್ತು. ಆದರೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುವ ಕಾರಣ ಶೋಧ ನಡೆಸಲು ಅರಣ್ಯ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕಿತ್ತು. ಇದೀಗ ಈ ಅನುಮತಿಯೂ ಸಹ ಅರಣ್ಯ ಇಲಾಖೆ ಕಡೆಯಿಂದ ಸಿಕ್ಕಿದೆ.
ಈ ಮೂಲಕ ಬಂಗ್ಲೆ ಗುಡ್ಡದಲ್ಲಿಂದು ಹೊಸ ಸ್ಥಳವನ್ನು ಗುರುತು ಮಾಡುವ ಸಾಧ್ಯತೆಯಿದ್ದು, ವಿಠ್ಠಲ ಗೌಡ ಇನ್ನೆಷ್ಟು ಸ್ಥಳಗಳನ್ನು ಗುರುತು ಮಾಡಲಿದ್ದಾರೆ ಹಾಗೂ ಇಂದೇನಾದರೂ ಉತ್ಖನನ ಕಾರ್ಯ ನಡೆಯಲಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ. ಒಟ್ಟಿನಲ್ಲಿ ತನಿಖೆ ಸಾಕು ಎನ್ನುತ್ತಿದ್ದ ವಿರೋಧಿಗಳಿಗೆ ಈ ಬೆಳವಣಿಗೆ ಭಾರೀ ನಿರಾಸೆಯನ್ನುಂಟುಮಾಡಿದೆ.
ಮಧುಮೇಹಕ್ಕೆ ರಾಗಿ ರಾಮಬಾಣ: ಈ ಸೂಪರ್‌ಫುಡ್ ನಿಮ್ಮ ಆರೋಗ್ಯದ ಗುಟ್ಟು!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


