Tuesday, September 1, 2026
spot_img
More
    spot_img
    HomeSportsCricketಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಐವರು ಆಸೀಸ್ ಆಟಗಾರರು ಔಟ್‌;‌ ಭಾರತಕ್ಕಿದು ದೊಡ್ಡ ಪ್ಲಸ್‌...

    ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಐವರು ಆಸೀಸ್ ಆಟಗಾರರು ಔಟ್‌;‌ ಭಾರತಕ್ಕಿದು ದೊಡ್ಡ ಪ್ಲಸ್‌ ಪಾಯಿಂಟ್!

    ಬೆಂಗಳೂರು: ಇತ್ತೀಚೆಗಷ್ಟೆ ಏಷ್ಯಾ ಕಪ್‌ ಟ್ರೋಫಿ ಮುಡಿಗೇರಿಸಿಕೊಂಡು, ತವರಿನಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ ಇದೀಗ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದು, 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗಿದೆ.

    Advertisement

    ಏಕದಿನ ಸರಣಿಗೆ ಭಾರತ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮರಳಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದ್ದು, ಕಾಂಗರೂಗಳ ನಾಡಲ್ಲಿ ಕೊಹ್ಲಿ ನಾಯಕತ್ವದಡಿಯಲ್ಲಿ ಅಬ್ಬರಿಸಿದ್ದ ಟೀಮ್‌ ಇಂಡಿಯಾದ ಅಬ್ಬರದ ಆಟವನ್ನು ಮತ್ತೊಮ್ಮೆ ನಿರೀಕ್ಷಿಸುತ್ತಿದ್ದಾರೆ ಭಾರತ ಕ್ರಿಕೆಟ್‌ ತಂಡದ ಅಭಿಮಾನಿಗಳು.

    ಅತ್ತ ಕ್ರಿಕೆಟ್‌ ದೈತ್ಯ ಆಸ್ಟ್ರೇಲಿಯಾ ಈ ಬಾರಿಯೂ ಬಲಿಷ್ಠ ಆಟಗಾರರಿಂದ ಕೂಡಿದ ತಂಡವನ್ನು ಪ್ರಕಟಿಸಿದ್ದು, ಪ್ರವಾಸಿ ಭಾರತಕ್ಕೆ ಕೌಂಟರ್‌ ಕೊಡಬಹುದು ಎಂಬುದನ್ನು ಈ ಸಮಯದಲ್ಲಿ ಕಡೆಗಣಿಸುವ ಹಾಗಿಲ್ಲ. ಹೀಗಾಗಿ ಈ ಮಹಾನ್‌ ತಂಡಗಳ ಮುಖಾಮುಖಿ ಭಾರೀ ಕುತೂಹಲವನ್ನು ಕೆರಳಿಸಿದೆ.

    ಆದರೆ ಸರಣಿ ಆರಂಭವಾಗುವುದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಬದಲಾವಣೆಗಳಾಗಿದ್ದು, ಕಾರಣಾಂತರಗಳಿಂದ ಕೆಲ ಆಟಗಾರರು ಸರಣಿಯಿಂದ ಹೊರಗುಳಿದಿದ್ದಾರೆ, ಇನ್ನೂ ಕೆಲ ಆಟಗಾರರು ಸರಣಿಯ ಕೆಲ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಒಟ್ಟು ಐವರು ಆಟಗಾರರು ಏಕದಿನ ಸರಣಿಯಲ್ಲಿ ಸಂಪೂರ್ಣವಾಗಿ ಭಾಗವಹಿಸುವುದಿಲ್ಲ ಎಂಬುದು ಖಚಿತವಾಗಿದ್ದು, ಇದು ಭಾರತಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎನ್ನಬಹುದು.

    ಇಲ್ಲ ಸೈಲೆನ್ಸರ್‌ ಪ್ಯಾಟ್‌ ಕಮಿನ್ಸ್
    2023ರ ವಿಶ್ವಕಪ್‌ ಫೈನಲ್‌ನಲ್ಲಿ 120000 ಮಂದಿ ಭಾರತದ ಬೆಂಬಲಿಗರ ಕೂಗನ್ನು ಅಹ್ಮದಾಬಾದ್‌ ಕ್ರೀಡಾಂಗಣದಲ್ಲಿ ಸದ್ದಡಗಿಸಿ ಸೈಲೆನ್ಸರ್‌ ಎಂಬ ಹೆಸರನ್ನು ಪಡೆದಿದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಬೆನ್ನು ನೋವಿನಿಂದ ಬಳಲುತ್ತಿದ್ದು, ಇನ್ನೂ ಸಹ ಚೇತರಿಸಿಕೊಳ್ಳದ ಕಾರಣ ಈ ಸರಣಿಗೆ ಆಯ್ಕೆಯೇ ಆಗದಿರುವುದು ಭಾರತದ ಪಾಲಿಗೆ ನಿಟ್ಟುಸಿರಿನ ಸಂಗತಿಯೇ ಸರಿ.

    ಕ್ಯಾಮರೂನ್‌ ಗ್ರೀನ್‌ ಅಲಭ್ಯ
    ಸರಣಿಗೆ ತಂಡ ಪ್ರಕಟವಾದಾಗ ಸ್ಥಾನ ಪಡೆದುಕೊಂಡಿದ್ದ ಸ್ಪೋಟಕ ಆಟಗಾರ ಕ್ಯಾಮರೂನ್‌ ಗ್ರೀನ್‌ ಸದ್ಯ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಇದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಪೆಟ್ಟನ್ನು ಕೊಟ್ಟಿದ್ದು, ಬದಲಿ ಆಟಗಾರನ ಮೊರೆ ಹೋಗಲೇಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ.

    ಇಂಗ್ಲಿಸ್, ಜಂಪಾ, ಕ್ಯಾರಿ ಕೆಲ ಪಂದ್ಯಕ್ಕಿಲ್ಲ
    ಇನ್ನು ತಂಡದ ಮತ್ತೋರ್ವ ನಂಬುಗೆಯ ಬ್ಯಾಟರ್‌ ಜೋಶ್‌ ಇಂಗ್ಲಿಸ್‌ ಬಲಗಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮೊದಲೆರಡು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿಲ್ಲ. ಕೌಟುಂಬಿಕ ಕಾರಣಗಳಿಂದ ಸ್ಪಿನ್ನರ್‌ ಆಡಂ ಜಂಪಾ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ ಹಾಗೂ ಅಲೆಕ್ಸ್‌ ಕ್ಯಾರಿ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ.

    ಇದು ಬರೀ ಭೇಟಿಯಲ್ಲ..; ದೇವೇಗೌಡರನ್ನು ಭೇಟಿಯಾಗಿ ಕೊಂಡಾಡಿದ ರಿಷಬ್‌ ಶೆಟ್ಟಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading