ಭಿವಾನಿ: ವಿದ್ಯಾರ್ಥಿಯೊಬ್ಬ ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ್ದಷ್ಟೇ ಅಲ್ಲದೆ ಸ್ನೇಹಿತರ ಜತೆ ಸೇರಿ ಅದನ್ನು ಶಿಕ್ಷಕಿಯ ಕುರ್ಚಿಯಡಿಯಿಟ್ಟು ಸಿಡಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ 13 ವಿದ್ಯಾರ್ಥಿಗಳನ್ನು ಒಂದು ವಾರದವರೆಗೆ ಅಮಾನತ್ತುಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಶಿಕ್ಷಕರ ಕುರ್ಚಿಯ ಕೆಳಗೆ ಪಟಾಕಿಯಂತಹ ಬಾಂಬ್ ಅನ್ನು ಇರಿಸಿದ್ದರು. ಯಾವುದೋ ವಿಚಾರಕ್ಕಾಗಿ ವಿದ್ಯಾರ್ಥಿಗೆ ಶಿಕ್ಷಕರು ಬೈದಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಕೃತ್ಯವೆಸಗಿದ್ದಾನೆ.
ಕುರ್ಚಿಯ ಕೆಳಗೆ ಬಾಂಬ್ ಇರಿಸಿ ರಿಮೋಟ್ ಮೂಲಕ ಅದನ್ನು ಸಿಡಿಸಿದ್ದಾರೆ. ಆ ಸ್ಫೋಟವು ಕುರ್ಚಿಯಡಿ ದೊಡ್ಡ ರಂಧ್ರವನ್ನು ಸೃಷ್ಟಿಸಿತ್ತು. ಅದೃಷ್ಟವಶಾತ್ ಶಿಕ್ಷಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಓರ್ವ ಕುರ್ಚಿಯಡಿ ಬಾಂಬ್ ಇಟ್ಟಿದ್ದರೆ ಇನ್ನೊಬ್ಬ ರಿಮೋಟ್‌ನಿಂದ ಬಟನ್ ಒತ್ತಿದ್ದ, ಘಟನೆ ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಆಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
ಯುಟ್ಯೂಬ್‌ನಿಂದ ಸ್ಫೋಟಕಗಳನ್ನು ತಯಾರಿಸುವುದನ್ನು ವಿದ್ಯಾರ್ಥಿಗಳು ಕಲಿತಿದ್ದಾರೆ. ಮಕ್ಕಳನ್ನು ಶಾಲೆಯಿಂದ ಹೊರ ಹಾಕುವ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಪಾಲಕರು ಕ್ಷಮೆ ಯಾಚಿಸಿದ್ದು, ವಿದ್ಯಾರ್ಥಿಗಳು ಮುಂದೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ನರೇಶ್ ಮೆಹ್ತಾ ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


